- Advertisement -
ತುಳಸಿ ಲಗ್ನ
ತುಳಸಿ ಮಾತೆಯೆ ಸೌಖ್ಯದಾತೆಯೆ
ಪ್ರಾತಃ ಕಾಲದಿ ಪೂಜಿಪೆ
ನುತಿಸಿ ನಿನ್ನಯ ನಾಮಪಠಿಸುತ
ಭಕ್ತಯಿಂದಲಿ ಧ್ಯಾನಿಪೆ||
ದೇವ ದಾನವ ಕ್ಷೀರ ಸಾಗರ ಮಥಿಸೊ ವೇಳೆಲಿ ಉದಿಸಿದೆ
ವಿಷ್ಣು ತೋಷದಿ ಬಿದ್ದ ಬಾಷ್ಪವು
ಸಸ್ಯ ಶ್ಯಾಮಲೆಯೆನಿಸಿದೆ ||
ಮೂಲ ತುಳಸಿಯೆ ಜನಿಸಿ ಬಂದಳು
ಕೃಷ್ಣನೊರಿಸಿದ ರುಕ್ಮಿಣಿ
ಉತ್ಥಾನದ್ವಾದಶಿ ದಿನದಿ ರುಕ್ಮಿಣಿ
ಕೃಷ್ಣಗೊಲಿದಳು ಭಾಮಿನಿ||
- Advertisement -
ತಾಳಿ ಭಾಗ್ಯವ ಬೇಡಿ ಕಟ್ಟೆಯ
ಹೆಣ್ಣು ಮಕ್ಕಳು ಸುತ್ತಲು
ತಾಳಿ ಭಾಗ್ಯವು ಗಟ್ಟಿಗೊಳ್ಳಲು
ಗೃಹಿಣಿ ಪ್ರದರ್ಶನ ಹಾಕಲು ||
ತುಳಸಿ ಲಗ್ನದ ದಿನದಿ ಭುವಿಯಲಿ
ಧಾತ್ರಿಯಿಂದಲಿ ಪೂಜಿತೆ
ಹಣ್ಣುಹೂಗಳು ಕಾಯಿ ಕರ್ಪೂರ
ದೂಪ ದೀಪವು ಅರ್ಪಿತೆ||
ಶ್ರೀ ಈರಪ್ಪ ಬಿಜಲಿ
ಭಕ್ತಿಗೀತೆ ಪ್ರಕಟ ಮಾಡಿದಕ್ಕಾಗಿ ಸಂಪಾದಕರಿಗೆ , ಹೃತ್ಪೂರ್ವಕವಾದ ಧನ್ಯವಾದಗಳು👏ಸರ 🙏🙏🙏🙏
Reply