ಭದ್ರತಾ ಮಂಡಳಿಗೆ ಭಾರತ-ಅಮೆರಿಕ ಅಭಿನಂದನೆ

0
903

184 ಮತಗಳನ್ನು ಪಡೆಯುವ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾವಣೆಯಲ್ಲಿ ಭಾರತ ವಿಜಯಿಯಾಗಿದ್ದು, ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯತ್ವದಲ್ಲಿ ಸ್ಥಾನಪಡೆದಿದೆ.

ಇದರಿಂದ ಭಾರತಕ್ಕೆ ವಿಶ್ವಮಟ್ಟದಲ್ಲಿ ರಾಜತಾಂತ್ರಿಕ ವಿಜಯ ಸಿಕ್ಕಂತಾಗಿದೆ.

ಸತತ 8 ನೇ ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ.
ಭಾರತದ ಜೊತೆ ಕಾಲುಕೆರೆದು ಜಗಳಕ್ಕೆ ಬಂದಿರುವ ಚೀನಾಕ್ಕೆ ಸದ್ಯಕ್ಕೆ ಭಾರೀ ಹಿನ್ನಡೆ ದೊರೆತಂತಾಗಿದೆ.

ಭಾರತಕ್ಕೆ ಭದ್ರತಾ ಮಂಡಳಿಯ ಸದಸ್ಯತ್ವ ಸಿಕ್ಕಿದ್ದಕ್ಕಾಗಿ ಪಾಕಿಸ್ತಾನ ಕೂಡ ತನ್ನ ಸಂಸತ್ತಿನಲ್ಲಿ ಗಲಾಟೆ ಮಾಡಿತ್ತು.
ಜನವರಿ ಒಂದರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯನಿರ್ವಹಣೆ ಶುರುವಾಗಲಿದೆ. ಭಾರತವು ಮಂಡಳಿಗೆ ಆಯ್ಕೆಯಾಗಿದ್ದಕ್ಕೆ ಅಮೆರಿಕ ಅಭಿನಂದನೆಗಳನ್ನು ತಿಳಿಸಿದೆ.