ಭೇರ್ಯ ರಾಮಕುಮಾರ್ ಅವರ ಕವನಗಳು

Must Read

ಒಂದು ಪ್ರೇಮಕಥೆ..

ಹಾರುವ ಹಕ್ಕಿಗೆ
ಈಜು ಕಲಿಸಿದವರು ಯಾರು?
ಚಿಟ್ಟೆಯ ರೆಕ್ಕೆಗೆ
ಸುಂದರ ಚಿತ್ರ ಬರೆದವರು ಯಾರು?
ಕೋಗಿಲೆಗೆ ‘ಕುಹೂ,ಕುಹೂ’
ಹಾಡು ಕಲಿಸಿದವರು ಯಾರು ?
ಹರಯದ ಸುಂದರ ಹೃದಯಗಳಿಗೆ,
ಪ್ರೀತಿಯ’ ಕಾಮನ ಬಿಲ್ಲು’ ನೀಡಿದವರ್ಯಾರು???

ಬದುಕಲಿ ಬಂದುದು ಸುಂದರ ಹರಯ
ಬಿರುಗಾಳಿಯೂ ಸುಳಿಗಾಳಿ
ಮೋಡ-ಕೋಲ್ಮಿಂಚುಗಳೂ ತಂಪೆರೆವ ‘ಓಯಸಿಸ್’
ಪ್ರಿಯತಮೆಯ ನೋಡಿದಾಗ
ನವಿಲು ನಾಟ್ಯವಾಡಿದಂತೆ,ಪನ್ನೀರ ಮಳೆ ಸುರಿದಂತೆ!!!

ಕಣ್ಣುಗಳಲ್ಲಿ ಸನ್ನೆ,ತುಟಿಯಂಚಲಿ ಸಿಹಿನಗು,
ನುಡಿವ ಮಾತೆಲ್ಲವೂ ಕಾವ್ಯಮಯ,
ಎತ್ತ ತಿರುಗಿದರತ್ತ ಕಾಮನಬಿಲ್ಲು,
ಪ್ರಿಯನಿಗೆ ಪ್ರಿಯತಮೆಯೇ ಸರ್ವಸ್ವ,
ಪ್ರಿಯೆಗೆ ಪ್ರಿಯನ ಸಂಗವೇ ಸುಂದರ ಸ್ವರ್ಗ!!!

ಪ್ರೀತಿಯ ತಂಗಾಳಿಗೆ,
ಸಮಾಜದ ಕುಹಕ ನೋಟದ ಬಿರುಗಾಳಿ,
ಜಾತಿ-ಧರ್ಮಗಳ ಭೀಕರ ಸಿಡಿಲು,
ದ್ವೇಷದ ಪ್ರವಾಹ ಎಲ್ಲೆಲ್ಲೂ ಭೀಕರ !!!

ತಂದೆ-ತಾಯಿಗೆ ಅಂಜಿ ‘ಮನೆ’ದಾಟದ ಹುಡುಗಿ,
ಮನಮುರಿದು ,ನಿಷ್ಕಲ್ಮಶ ಪ್ರೀತಿ ತೊರೆದು
ನಡೆದುದೆಲ್ಲವ ಮರೆತು,
ಮದುವೆಯಾದಳು ಪ್ರಿಯತಮೆ
ಹೊಸ ಸಂಗಾತಿಯನ್ನು…

ಗಡ್ಡ ಬಿಟ್ಟ ,ಪ್ರೇಮಪತ್ರ ಸುಟ್ಪ,
ಪ್ರಿಯತಮ ಇದೀಗ
ಕುಡುಕರ ಸಂಘದ ಶಾಶ್ವತ ಸದಸ್ಯ,
ಹೃದಯ ಒಡೆದು ನಲುಗಿದರೂ
ಕಳೆದ ಸುಂದರ ದಿನಗಳ
ಕನಸು ಕಾಣುತ್ತಾ ತಿರುಗುತ್ತಿದ್ದಾನೆ,
ಈ ಹುಡುಗ,ನಮ್ಮೂರ-ನಿಮ್ಮೂರ ರಸ್ತೆಗಳಲ್ಲಿ..
ಮಾನಸಿಕ ಅಸ್ವಸ್ಥನಾಗಿ….


ಪ್ರೀತಿಸಲು ಪುರುಸೊತ್ತೆಲ್ಲಿದೆ ??

ಪ್ರೀತಿಸಲು ಮನಸಿದ್ದರೂ
ಪ್ರೀತಿಸುವ ಕನಸಿದ್ದರೂ
ಸ್ವಾರ್ಥ ಪ್ರಪಂಚದ ಅಟ್ಟಹಾಸದಲಿ
ಖದೀಮ ಜನರ ಸುಳಿದಾಟದಲಿ,
ಅನುಕ್ಷಣವೂ ಮೋಸದ ಬದುಕಿನಲಿ,
ಪ್ರೀತಿಸಲು ಪುರುಸೊತ್ತು ಎಲ್ಲಿದೆ ಗೆಳತಿ ??

ಸುತ್ತಲೂ ಮೋಸ-ವಂಚನೆ-ಕಪಟಗಳ ಜಾಲ,
ಮನೆಯಲೇ ಕಳವು ಮಾಡುವ ಮನೆಮಗ !!
ಬೆಳೆಯನೇ ಬೇಯುವ ಬೇಲಿ,
ನಿಂತ ನೀರೇ ವಿಷವಾಗುವ ಈ ಬದುಕಲಿ,
ರೋಗಾಣುಗಳಿಗೆ ಹೆದರಿ,ಬಾಯಿ ಬಂದ್ಮಾಡಿ,ಕೈ ತೊಳೆದು ಬದುಕಬೇಕಾದ ದಿನಗಳಲಿ,
ಹೃದಯ ತೆರೆದು ಪ್ರೀತಿ ಸಲು,
ಕಣ್ಣಲ್ಲಿ ಕಣ್ಣಿಟ್ಟು ನೋಡಲು ಶುಭ ವೇಳೆಯೆಲ್ಲಿದೆ ಹೇಳು ಗೆಳತಿ ????

ಗಾಂಧಿ-ಬುಧ್ಧ-ಬಸವ ಬದುಕಿದ್ದ ಇಲ್ಲಿ,
ಇದೀಗ ಬಾಂಬ್,ಭಯೋತ್ಪಾದಕ ರದ್ದೇ ಆರ್ಭಟ !!
ಬೆಲೆ ಏರುತ್ತಿದೆ ಮುಗಿಲಮಟ್ಟ,
ಇನ್ನು ಉದ್ಯೋಗ,ಬರೀ ಕನಸು
ದಿಕ್ಕು ಕಾಣದೇ ಪರಿತಪಿಸುತ್ತಿರುವ ಯುವಜನತೆ,
ಎಲ್ಲೆಲ್ಲೂ ರೋಗ-ಸಾವುಗಳದೇ ರುದ್ರತಾಂಡವ ????

ಗೊಂದಲ,ಗೋಜಲು,ಸಾವಿನಾಭಯ,
ಬಡವನ ಹೊಟ್ಟೆಗೆ ತಣ್ಣೀರಿನಾ ಬಟ್ಟೆ,
ಪ್ರೇಮವೆಂಬ ನಿಷ್ಕಪಟ ಚಿಂತನೆ ಗೆ ಬಂದಿದೆ ಆಪತ್ತು,
‘ಹಣ್ಣು ತಿಂದು ಓಡುವ’ ಜನರದೇ ಸಾಮ್ರಾಜ್ಯ !!
ನಿರ್ಮಲ ಪ್ರೀತಿ ಬಯಸಿದರೂ,
ಪ್ರೀತಿ ನೀಡುವ ಹೃದಯವೆಲ್ಲಿದೆ ಗೆಳತಿ ????

ಪ್ರೀತಿ… ಒಂದು ನಾಟಕವಾಗಿದೆ!!
ಹೃದಯ ಪೂರ್ವಕ ಪ್ರೀತಿ ನಾಪತ್ತೆಯಾಗಿದೆ,
ಮುಗ್ಧಮನಗಳ ಮೇಲೆ ಧಾಳಿಯಾಗುತ್ತಿದೆ,
ಮುಗ್ಧ ಹೃದಯಗಳ ಕಂಬನಿ ಧಾರೆಯಾಗಿ ಹರಿದಿದೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group