ಬೀದರ್ – ಗ್ರಾಮ ಪಂಚಾಯತಿ ಚುನಾವಣೆ ಅಂದ್ರೆ ವಿಶೇಷತೆ, ಸಾಕಷ್ಟು ಜಿದ್ದಾಜಿದ್ದಿಯಿಂದ ಕೂಡಿರುತ್ತವೆ. ಅದೇ ರೀತಿ ಅಭ್ಯರ್ಥಿಗಳ ಪ್ರಚಾರ ಕೂಡ ವಿಭಿನ್ನವಾಗಿರುತ್ತದೆ. ಬೀದರ್ ತಾಲೂಕಿನ ಫತೇಪುರ ಗ್ರಾಮದಲ್ಲಿ ಮಾಸ್ಕ್ ಮತ್ತು ಸೈನಿಟೈಜರ್ ನೀಡುವ ಮೂಲಕ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮುಂದಾಗಿದ್ದಾರೆ.
ಬೀದರ್ ತಾಲೂಕಿನ ಚಿಮಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಫತೇಪುರ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಿನ್ಹೆ ಹೊಂದಿರುವ ಅಭ್ಯರ್ಥಿ ಶ್ರೀದೇವಿ ಮತದಾರ ಪ್ರಭುಗಳನ್ನು ಸೆಳೆಯಲು ಸ್ಯಾನಿಟೈಜರ್, ಮಾಸ್ಕ್ ನೀಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಭಿನ್ನವಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ.
ಕಡ್ಡಾಯವಾಗಿ ಮತದಾನ ಮಾಡುವ ದಿನ ಮಾಸ್ಕ್ ಧರಿಸಿಕೊಂಡು ಬರಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಪರ ಬೆಂಬಲಿಗರು, ದೇಶಾದ್ಯಂತ ಕೊರೊನಾ ಮಹಾಮಾರಿ ಮತ್ತು ಭಯ ಹುಟ್ಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಮಾಸ್ಕ್ ಕಡ್ಡಾಯ ಧರಿಸಬೇಕು ಇದರಿಂದ ನಾವು ಕೊರೊನಾ ಕುರಿತು ಜಾಗೃತಿ ಮೂಡಿಸುವ ಮೂಲಕ ಮಾಸ್ಕ್ ನೀಡುವ ಮೂಲಕ ಪ್ರಚಾರ ನಡೆಸುತ್ತಿದ್ದೇವೆ ಎಂದರು.
ಫೋಟೋಗಳು– ರವಿಕುಮಾರ್, ಫತೆಪುರ ಗ್ರಾಮಸ್ಥ ಹಾಗೂ ಅಭ್ಯರ್ಥಿ ಶ್ರೀದೇವಿ