ಮುನವಳ್ಳಿ ದಾನಮ್ಮ ದೇವಿ ಜಾತ್ರಾ ಮಹೋತ್ಸವ

0
2474

ಇಂದು ಮುನವಳ್ಳಿ ಪಟ್ಟಣದ ದಾನಮ್ಮದೇವಿ ಜಾತ್ರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪಟ್ಟಣ ಪ್ರದೇಶ ಮುನವಳ್ಳಿ. ಇದು ದೇವಗಿರಿ ಯಾದವರ ಆಳ್ವಿಕೆಯ ಇತಿಹಾಸವನ್ನು ಹೊಂದಿದೆ, ಇಲ್ಲಿಯ ಪಂಚಲಿಂಗೇಶ್ವರ ದೇವಾಲಯ ಮತ್ತು ಯಾದವರ ಕಾಲದ ಕೋಟೆ. ಅಲ್ಲಿನ ಉಡಚಮ್ಮ ದೇವಾಲಯ,ಹನುಮಾನ ಮಂದಿರ. ಅಲ್ಲಿಯ ಶಾಸನಗಳು ಚರಿತ್ರೆಯ ಪುಟವನ್ನು ತೆರೆದಿಟ್ಟಿವೆ.ತಾಲೂಕ ಕೇಂದ್ರದಿಂದ ಹದಿನಾರು ಕಿಲೋ ಮೀಟರ ಅಂತರದಲ್ಲಿರುವ ಮುನವಳ್ಳಿ. ಮಲಪ್ರಭಾ ನದಿ ದಡದಲ್ಲಿನ ಪಟ್ಟಣ. ಪುರಸಭೆ ಹೊಂದಿದೆ.ಸಕ್ಕರೆ ಕಾರ್ಖಾನೆ.ಪದವಿ ವರೆಗಿನ ಶಿಕ್ಷಣ ವ್ಯವಸ್ಥೆ,ವಿವಿಧ ಮಠಗಳು,ದೇವಾಲಯಗಳು ಇತಿಹಾಸದ ಚರಿತ್ರೆಯನ್ನು ಹೊಂದುವ ಮೂಲಕ ರಾಜ್ಯದಲ್ಲಿ ತನ್ನದೇ ಆದ ಚಾರಿತ್ರಿಕ ದಾಖಲೆ ಮುನವಳ್ಳಿ ಹೊಂದಿದೆ.

ಮುನವಳ್ಳಿಯಿಂದ ಪ್ರತಿ ವರ್ಷ ಗುಡ್ಡಾಪುರ ದಾನಮ್ಮದೇವಿಗೆ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಪಾದಯಾತ್ರೆಯ ಹೋಗುತ್ತಿದ್ದರು.ಅದು ಕ್ರಮೇಣ ಮುನವಳ್ಳಿಯಲ್ಲಿಯೇ ಒಂದು ದೇವಾಲಯದ ಸ್ಥಾಪನೆಗೆ ಕಾರಣೀಭೂತವಾಯಿತು. ದೇವಸ್ಥಾನ ನಿರ್ಮಾಣಗೊಂಡ ನಂತರ ಪ್ರತಿ ದಿನ ಗುಡ್ಡಾಪುರದಲ್ಲಿ ಜರುಗುವ ರೀತಿಯಲ್ಲಿಯೇ ಇಲ್ಲಿಯೂ ಪೂಜೆ ಪುನಸ್ಕಾರಗಳು ಜರುಗತೊಡಗಿದವು.ಜೊತೆಗೆ ಭಾರತ ಹುಣ್ಣಿಮೆ ಸಂದರ್ಭದಲ್ಲಿ ಪ್ರತಿವರ್ಷ ಜಾತ್ರಾಮಹೋತ್ಸವ ಮಹಿಳೆಯರಿಗೆ ಉಡಿ ತುಂಬುವುದು,ಕಂಕಣ ಕಟ್ಟುವುದು ನಂತರ ಮಹಾಪ್ರಸಾದ ಜರುಗುತ್ತ ಬರುತ್ತಿದ್ದು ಇಂದು ಪೆಬ್ರುವರಿ 27, ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಒಂಬತ್ತು ಗಂಟೆಯಿಂದ ಮಹಿಳೆಯರಿಂದ ಉಡಿ ತುಂಬುವ ಕಾರ್ಯ ಜರುಗುತ್ತಿದೆ.ಮಹಾಪ್ರಸಾದ ಕೂಡ ಮುನವಳ್ಳಿಯ ದಾನಮ್ಮದೇವಿ ದೇವಸ್ಥಾನ ಸಮೀತಿಯವರು ಏರ್ಪಡಿಸಿದ್ದು.ಭಾರತ ಹುಣ್ಣಿಮೆಯನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುತ್ತಿದೆ.

ಭಕ್ತರ ಪಾಲಿನ ವರದಾನಿ ಎಂದೇ ಕರೆಯುವ ದಾನಮ್ಮಳಿಗೆ ಭಕ್ತರು ಮಕ್ಕಳಾಗದವರಿಗೆ ಮಕ್ಕಳ ಭಾಗ್ಯ, ಮದುವೆಯಾಗದ ಕನ್ಯೆಯರಿಗೆ ಕಂಕಣ ಭಾಗ್ಯ,.ಜೀವನದಲ್ಲಿ ಜಿಗುಪ್ಸೆ ಹೊಂದಿದವರಿಗೆ ಮಾನಸಿಕ ಶಾಂತಿ ದೊರೆಯುವದೆಂಬ ಪ್ರತೀತಿಯಿಂದ ಎಲ್ಲ ವಿಧದ ಭಕ್ತ ಜನತೆ ಇಲ್ಲಿಗೆ ಬರುವ ಮೂಲಕ ದೇವಿಯಲ್ಲಿ ಅರ್ಚನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಕೋರುವರು. ಎಂದು ಅರ್ಚಕ ಗುರುಬಸಯ್ಯ ಶಾಸ್ತ್ರೀಗಳು ಹಿರೇಮಠ ತಿಳಿಸಿದರು.

ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿದ ನೈವೇದ್ಯೆದೊಂದಿಗೆ ದೇವಾಲಯಕ್ಕೆ ಆಗಮಿಸಿ ಪಲ್ಲಕ್ಕಿಗೆ ಆರತಿಯನ್ನು ಬೆಳಗಿ,ಒಂದೆಡೆ ಕುಳಿತು ದೇವಾಲಯಕ್ಕೆ ಆಗಮಿಸುತ್ತಿರುವ ಮಹಿಳೆಯರಿಗೆ ಕಂಕಣ ಕಟ್ಟುವುದು ಮತ್ತು ಉಡಿ ತುಂಬುವ ಕಾರ್ಯವನ್ನು ಬಾಳಿ ಮನೆತನದ ಬಂಧುಗಳು ನೆರವೇರಿಸುತ್ತಿರುವ ದೃಶ್ಯ ಭಕ್ತಿಯ ವೈಭವವನ್ನು ಎತ್ತಿ ತೋರಿಸುತ್ತಿದೆ. ನಿಜಕ್ಕೂ ಭಕ್ತರ ವರದಾನಿ ಗುಡ್ಡಾಪುರ ದಾನಮ್ಮದೇವಿಯ ಸಕಲ ಸದ್ಭಕ್ತರು ಮುನವಳ್ಳಿಯಲ್ಲಿಯೂ ಕೂಡ ದೇವಾಲಯ ನಿರ್ಮಿಸುವ ಜೊತೆಗೆ ಗುಡ್ಡಾಪುರ ಮಾದರಿಯಲ್ಲಿಯೇ ಪೂಜೆ ಅನ್ನ ಸಂತರ್ಪಣೆ ವಿವಿಧ ಆಚರಣೆಗಳನ್ನು ನಡೆಸುತ್ತ ಬರುತ್ತಿರುವುದು ಹೆಮ್ಮೆಯ ಸಂಗತಿ.
ಕಲಿಯುಗದಲ್ಲಿಯೂ ಭಕಿಯ ಸಮರ್ಪಣೆ,ದೇವಿಯ ಆರಾಧನೆಯ ಮೂಲಕ ಮುನವಳ್ಳಿಯ ಜನರು ಮುನವಳ್ಳಿ ಗ್ರಾಮದಲ್ಲಿರುವ ಎಲ್ಲ ದೇವಾಲಯಗಳಲ್ಲಿಯೂ ಕೂಡ ವಿವಿಧ ಆಚರಣೆ, ಹಬ್ಬ ಹುಣ್ಣಮೆ ಅಮವಾಸೆ ಇತ್ಯಾದಿ ಜರುಗಿಸುತ್ತ ಇತಿಹಾಸ ಪುಟದಲ್ಲಿ ದಾಖಲಾದ ಮುನಿಪುರ,ಮುನೀಂದ್ರವಳ್ಳಿ,ಮುನವಳ್ಳಿ ಎಂಬ ಹೆಸರನ್ನು ಚಿರಸ್ಥಾಯಿಯಾಗಿರಿಸಿರುವರು.


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ.ಸಿಂದೋಗಿ ಕ್ರಾಸ್.ಮುನವಳ್ಳಿ
ತಾಲೂಕಃಸವದತ್ತಿ ಜಿಲ್ಲೆಃಬೆಳಗಾವಿ
9449518400 8971117442