ಹೊಸದಿಲ್ಲಿ – ಮೋದಿಯವರ ದಿಟ್ಟ ಎಚ್ಚರಿಕೆಗೆ ಬೆದರಿ ಪಾಕಿಸ್ತಾನ ೨೦೧೯ ರಲ್ಲಿ ಬಾಲಾಕೋಟ್ ದಾಳಿಯಲ್ಲಿ ತನ್ನ ವಶಕ್ಕೆ ಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಈ ಬಿಡುಗಡೆಗೆ ಶಾಂತಿಯ ಸಂಕೇತ ಎಂಬ ಹೆಸರನ್ನೂ ಪಾಕಿಸ್ತಾನ ಕೊಟ್ಟಿದ್ದು ನಗೆಪಾಟಲಿಗೆ ಈಡಾದಂತಾಗಿದೆ.
೨೦೧೯ ರ ಫೆ.೧೪ ರಂದು ಪಾಕ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಬಾಲಾಕೋಟ್ ನ ಉಗ್ರರ ಅಡಗುದಾಣಗಳ ಮೇಲೆ ಹಠಾತ್ ದಾಳಿ ಮಾಡಿ ನೂರಾರು ಉಗ್ರರ ಮಾರಣ ಹೋಮ ನಡೆಸಿತ್ತು. ಆ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಸೈನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಪಾಕ್ ಸೈನಿಕರು ಅಭಿನಂದನ್ ಅವರಿಗೆ ತೀವ್ರ ಹಿಂಸೆಯನ್ನೂ ನೀಡಿ ವಿಡಿಯೋ ಬಿಡುಗಡೆ ಮಾಡಿದ್ದರು.
ರಕ್ತ ಸಿಕ್ತ ಅಭಿನಂದನ್ ರ ವಿಡಿಯೋ ನೋಡಿದ್ದ ಪ್ರಧಾನಿ ನರೇಂದ್ರ ಮೋದಿ ಕ್ರುದ್ಧರಾಗಿ ಭಾರತೀಯ ಗುಪ್ತಚರ ಸಂಸ್ಥೆ ‘ ರಾ’ ಮುಖ್ಯಸ್ಥ ಧಸ್ಮಾನಾರನ್ನು ಸಂಪರ್ಕಿಸಿ, ಅಭಿನಂದನ್ ಗೆ ಏನಾದರೂ ಆದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ದೀಪಾವಳಿ ಆಚರಣೆಗೆ ಶಸ್ತ್ರಾಸ್ತ್ರ ಇಟ್ಟುಕೊಂಡಿಲ್ಲ. ಪಾಕ್ ಗೆ ತಿಳಿಸಿ ಎಂದಿದ್ದರು.
ಮೋದಿಯವರ ಈ ಗುಡುಗಿಗೆ ಮಣಿದ ಪಾಕ್ ಅಭಿನಂದನರನ್ನು ಬಿಡುಗಡೆ ಮಾಡಿತ್ತು.