ರಾಮಾಚಾರಿ 2.0 ಚಿತ್ರದಲ್ಲಿ ಜಮಾಪುರುದ ಅಚ್ಚು ಮಂಜು

Must Read

ರಿವೈಂಡ್ ಖ್ಯಾತಿಯ ನಟ ಅಲ್ಟಿಮೇಟ್ ಸ್ಟಾರ್ ತೇಜ್ ಅವರ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೈಂಟಿಫಿಕ್ ಥ್ರಿಲ್ಲರ್ ಕಥೆ ಇರುವ ರಾಮಾಚಾರಿ 2.0 ಚಿತ್ರದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಮಾಪುರು ಕಲಾವಿದ ಅಚ್ಚು ಮಂಜು ಅವರು ನಾಯಕ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಚಿತ್ರೀಕರಣವು ಭರದಿಂದ ಸಾಗಿದೆ.

ಈ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ ಎನ್ನುವುದು ಖುಷಿಯ ವಿಚಾರ ಏಕೆಂದರೆ ಚಿತ್ರದ ನಾಯಕಿ ಕಿರುತೆರೆ ನಟಿ ಕೌಸ್ತುಬಾ ಮಣಿ, ನಾಯಕನ ತಂದೆ ಪಾತ್ರದಲ್ಲಿ ದೊಡ್ಮನೆ ಮಗ ರಾಘವೇಂದ್ರ ರಾಜಕುಮಾರ, ನಾಯಕನ ತಾಯಿ ಪಾತ್ರದಲ್ಲಿ ಗಟ್ಟಿಮೇಳ ಖ್ಯಾತಿಯ ಸ್ವಾತಿ, ಸ್ಪರ್ಶ ರೇಖಾ, ವಿಜಯ ಚೆಂಡೂರ್ ಮತ್ತಿತರರು ನಟನೆ ಮಾಡುತ್ತಿದ್ದು ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ‌ ಎಂದು ತಿಳಿದುಬಂದಿದೆ.

ನಂತರದಲ್ಲಿ ಈ ಚಿತ್ರದ ಭಾಗ 2 ಚಿತ್ರೀಕರಣ ಆರಂಭವಾಗಲಿದೆ. ಏನೇ ಆಗಲಿ ನಮ್ಮ ಊರಿನ ಕಲಾವಿದರಿಗೆ ಹೆಚ್ಚು ಅವಕಾಶ ಬರಲಿ ಎನ್ನುವುದೇ ಜಮಾಪುರು ಊರಿನ ಕಲಾಭಿಮಾನಿಗಳ ಆಶಯ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group