spot_img
spot_img

ಲೋಕದ ಡೊಂಕು ತಿದ್ದುವುದಕ್ಕಿಂತ ನಿನ್ನ ಡೊಂಕು ತಿದ್ದಿಕೋ: ಶ್ರೀ ಸಂತೋಷ ಬಿದರಗಡ್ಡೆ

Must Read

- Advertisement -

ಆತ್ಮೀಯರೇ,ಇಂದು ಈ ಮಾತು ಅಕ್ಷರಶಃ ಸತ್ಯ. ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲಾಗಿ ಬೇರೊಬ್ಬರನ್ನು ತಿದ್ದುತ್ತಿದ್ದೇವೆ.

ವೃತ್ತಿ ಮತ್ತು ಪ್ರವೃತ್ತಿಯನ್ನು ಸಂತೃಪ್ತವಾಗಿ ಬದುಕಿನ ಯಶಕ್ಕೆ ಅಳವಡಿಕೊಂಡವರು.ಗೆಳೆಯರ ಗುಂಪಿನಲ್ಲಿ ಸದಾಕಾಲವೂ ಸಾಹಿತ್ಯವನ್ನೇ ಗುನುಗುನಿಸುತ್ತಿರುವ ಅವರು ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾವೇರಿ ಜಿಲ್ಲೆಯ ಜಿಲ್ಲಾಧ್ಯಕ್ಷರು.

ಸಂತೋಷ ಬಿದರಗಡ್ಡೆ

- Advertisement -

ಇವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆಯ ಜಮೀನ್ದಾರ ದಿ ಪರಮೇಶ್ವರಪ್ಪ ಗೌಡ್ರು ಶ್ರೀಮತಿ ದಾಕ್ಷಾಯಿಣಮ್ಮನವರ ಅಷ್ಟ ಪುತ್ರರಲ್ಲಿ ಆರನೆಯವರು.ತುಂಬ ಸಂಪ್ರದಾಯಸ್ಥ ಅವಿಭಕ್ತ ಕುಟುಂಬ.

ಸದಾಕಾಲವೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾನವೀಯತೆಯ ಮೌಲ್ಯವನ್ನು ಸಾರುತ್ತಿರುವ ಕುಟುಂಬದ ಹೆಮ್ಮೆಯ ಕುಡಿ.ಚಾಲುಕ್ಯರ ನಾಡು ಬಾದಾಮಿ ತಾಲೂಕಿನ ತಪ್ಪಸಕಟ್ಟಿಯಲ್ಲಿ ಪ್ರಥಮವಾಗಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು.

ಪ್ರಸ್ತುತ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ದೇವರ ಹೊಸಪೇಟೆಯಲ್ಲಿ (ತ್ರಿಭಾಷಾ ಕವಿ ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮಸ್ಥಳ) ಸೇವಾರ್ಥಿಯಾಗಿ ಬಂದವರು.

- Advertisement -

ಅವರಿಗೆ ಪ್ರವೃತ್ತಿಯಾಗಿ ಬೆಳೆದ ಸಾಹಿತ್ಯದ ಒಡನಾಟ ಇಲ್ಲಿಯೂ ಚಿಗುರೊಡೆಯಿತು.ಚರ ದೂರವಾಣಿ(ಮೊಬೈಲ್) ಅನ್ನು ಹೀಗೂ ಬಳಸಬಹುದು,ಎಂಬುದನ್ನು ಇವರ ಮೂಲಕ ಕಲಿಯಬಹುದು. ಸಾಹಿತ್ಯಿಕವಾಗಿ ನಡೆಸಬಹುದಾದ ಚರ್ಚೆಗಳು, ಸ್ಪರ್ಧೆಗಳು, ವಿಚಾರ ಸಂಕಿರಣ, ಆನ್ ಲೈನ್ ಕವಿಗೋಷ್ಟಿ ಮುಂತಾದವುಗಳನ್ನು ದೂರವಾಣಿ ಮೂಲಕ ಮಾಡಬಹುದು ಎಂಬುದನ್ನು ಸಮರ್ಪಕವಾಗಿ ನಿರ್ವಹಿಸುವವರು.

ಸಂತೋಷ ಅವರು ಸಾಹಿತ್ಯದ ಹೆದ್ದಾರಿಯಲ್ಲಿ ಬಹುದೊಡ್ಡ ಹೆಜ್ಜೆ ಇಟ್ಟು ಈಗಾಗಲೇ ಅನೇಕ ಬಗೆಯ ರಚನೆಯನ್ನು ಮಾಡಿದ್ದಾರೆ

ಕವನ ಸಂಕಲಗಳು

  1. ಎಳ್ಳು ಬೆಲ್ಲ
  2. ಯಶೋಗಾಥರು
  3. ನವರಾತ್ರಿ
  4. ಚಂದಮಾಮ

ಸಂಪಾದಿತ ಕವನ ಸಂಕಲನಗಳು

  1. ಸೃಜನಶೀಲ ಕಾವ್ಯ ಸಿರಿ
  2. ವಿವೇಕ ಕಾವ್ಯ ಸಿರಿ
  3. ಅಪ್ಪ ಎಲ್ಲರಂಥವನಲ್ಲ
  4. ಪಾಪು ಒಂದು ನೆನಪು
  5. ಕೊರೋನಾ

ಗದ್ಯ ಕೃತಿ

೧)ಕ್ಷಣ ಹೊತ್ತು ಅನುಭವ ಹೊತ್ತು.

ಸಂಪಾದಿತ ಗದ್ಯ ಕೃತಿ

  1. ಭವ್ಯ ಭಾರತದ ಬೆಳಕುಗಳು.

ಹೀಗೆ ಸಾಹಿತ್ಯ ಕೃಷಿ ಮಾಡುತ್ತಿರುವ ಬಿದರಗಡ್ಡೆಯವರನ್ನು ಅನೇಕ ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ.

ಈವರೆಗೆ ಪಡೆದಿರುವ ಪ್ರಶಸ್ತಿ ಪುರಸ್ಕಾರಗಳು

  1. ಕರ್ನಾಟಕ ಇತಿಹಾಸ ಪ್ರಶಸ್ತಿ ೨೦೦೧ ಕರ್ನಾಟಕ ಇತಿಹಾಸ ಅಕಾಡೆಮಿ (ರಿ)
  2. ಹಸಿರೇ ಉಸಿರು ಪರಿಸರ ಪ್ರಶಸ್ತಿ.೨೦೦೨ ಶ್ರೀ ಲಕ್ಷ್ಮಣ ತೀರ್ಥ ಪರಿಸರ ಸಂರಕ್ಷಣಾ ಸಂಸ್ಥೆ ಮೈಸೂರು.
  3. ಯುವ ಕವಿ ಪ್ರಶಸ್ತಿ ಬೆಂಗಳೂರು ೨೦೦೪
  4. ಉತ್ತಮ ನಿರೂಪಕ ಪ್ರಶಸ್ತಿ ಬೆಂಗಳೂರು ೨೦೦೪
  5. ಉತ್ತಮ ಮಾರ್ಗದರ್ಶಿ ಶಿಕ್ಷಕ ಪ್ರಶಸ್ತಿ ೨೦೧೦-೧೧(ಅಂತಾರಾಷ್ಟ್ರೀಯ ಚಿಂತನ ವಿಜ್ಞಾನ ಚಿತ್ರದುರ್ಗ)
  6. ಸಾಹಿತ್ಯ ಸಿರಿ ರಾಜ್ಯ ಪ್ರಶಸ್ತಿ ೨೦೧೩ (ಜನಪ್ರಿಯ ಪ್ರಕಾಶನ ಬೀದರ್)
  7. ರಾಜ್ಯ ಮಟ್ಟದ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ (ನವೋದಯ ಪ್ರಕಾಶನ ಚಿತ್ರದುರ್ಗ)೨೦೧೩-೧೪
  8. ಜಿಲ್ಲಾ ಮಟ್ಟದ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ (ನವೋದಯ ಪ್ರಕಾಶನ ಚಿತ್ರದುರ್ಗ)೨೦೧೪-೧೫
  9. ರಾಜ್ಯ ಮಟ್ಟದ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ ( ನವೋದಯ ಪ್ರಕಾಶನ ಚಿತ್ರದುರ್ಗ) ೨೦೧೭-೧೮
  10. ಕವಿ ವೃಕ್ಷ ರಾಜ್ಯೋತ್ಸವ ಪ್ರಶಸ್ತಿ (ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು) ೨೦೧೮
  11. ಬೆಳಕು ಕನ್ನಡದ ಕಣ್ವ ರಾಜ್ಯ ಪ್ರಶಸ್ತಿ ೨೦೧೮ ( ಬೆಳಕು ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆ)
  12. ಜಿಲ್ಲಾ ಮಟ್ಟದ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ ೨೦೧೮-೧೯(ನವೋದಯ ಪ್ರಕಾಶನ ಚಿತ್ರದುರ್ಗ)
  13. ಸಾಹಿತ್ಯ ಕಲಾ ಸಾಮ್ರಾಟ್ ರಾಜ್ಯ ಪ್ರಶಸ್ತಿ (ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು ೨೦೧೯)
  14. ಕರ್ನಾಟಕ ರಾಜ್ಯ ಸೂಪರ್ ಅಚೀವರ್ಸ್ ಅವಾರ್ಡ್ಸ್ (ಜನಮನ ಫೌಂಡೇಶನ್ ಹಾವೇರಿ ೨೦೧೯)
  15. ಸಾಹಿತ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ ( ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ೨೦೧೯)
  16. ಸನಾತನಂ ಸಂಸ್ಕಾರ ಮೂರ್ತಿ ಆದರ್ಶ ಶಿಕ್ಷಕ ಪ್ರಶಸ್ತಿ (ಸನಾತನಂ ಫೌಂಡೇಶನ್ ಹಾವೇರಿ ೨೦೧೯-೨೦)
  17. ಬಸವ ಜ್ಯೋತಿ ರಾಜ್ಯ ಪ್ರಶಸ್ತಿ ೨೦೧೯( ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಮತ್ತು ಸೃಷ್ಟಿ ಸಂಸ್ಥೆ ಬೆಂಗಳೂರು)
  18. ಸಾಹಿತ್ಯ ಸೇವಾ ರತ್ನ ರಾಜ್ಯ ಪ್ರಶಸ್ತಿ ೨೦೧೯
    (ಡಾ ಪಂಡಿತ ಪುಟ್ಟರಾಜ ಗವಾಯಿಗಳ ಸ್ಮಾರಕ ಅಖಿಲ ಕರ್ನಾಟಕ ಹವ್ಯಾಸಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ ಮೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬಾಗಲಕೋಟ)
  19. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ೨೦೧೯ (ಚೇತನ ಪ್ರಕಾಶನ ಹುಬ್ಬಳ್ಳಿ)
  20. ವಿದ್ಯಾ ಭೂಷಣ ರಾಷ್ಟ್ರೀಯ ಪ್ರಶಸ್ತಿ ೨೦೨೦( ಕರ್ನಾಟಕ ದರ್ಶನ ಸೇವಾ ಸಂಸ್ಥೆ ಹುಬ್ಬಳ್ಳಿ)
  21. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ೨೦೨೦
  22. ಅನಿತಾ ಕೌಲ್ ರಾಜ್ಯ ಪ್ರಶಸ್ತಿ ೨೦೨೦ ( ಭಾರತೀಯ ಜ್ಞಾನ ವಿಜ್ಞಾನ ಸಂಸ್ಥೆ ಬೆಂಗಳೂರು) ಹೀಗೆ ವಿವಿಧ ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆಗಳು, ಮಠ ಮಾನ್ಯಗಳು ಶೈಕ್ಷಣಿಕ ಸಂಸ್ಥೆಗಳು ಮುಂತಾದೆಡೆ ಗೌರವ ಸನ್ಮಾನ,ಪುರಸ್ಕಾರಗಳನ್ನು ಪಡೆದು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಕ್ಕೂ ಹೆಚ್ಚು ಕವಿಗೋಷ್ಟಿಗಳು, ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಬರೀ ಚರಿತ್ರೆ ಓದಕೊಂಡು ಸಾಯಬೇಡಿ.ಚರಿತ್ರೆ ನೀವಾಗಿ ಎಂದು ಎಚ್ಚರಿಸುತ್ತಾ ಇನ್ನೊಬ್ಬರನ್ನು ಬೆಳೆಸುತ್ತ ತಾನು ಬೆಳೆದುಕೊಳ್ಳುವ ಸಂಘ ಜೀವಿ ಶ್ರೀ ಸಂತೋಷ ಬಿದರಗಡ್ಡೆ ಎನ್ನುವುದರಲ್ಲಿ ಯಾವುದೇ ಎರಡು ಮಾತಿಲ್ಲ.ಇಂಥಹ ಯುವ ಸಾಹಿತಿಯನ್ನು ನಾಡಿಗೆ ಪರಿಚಯಿಸುವ ಭಾಗ್ಯ ನನ್ನದು.

ಶ್ರೀ ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

ಕಾಮಗಾರಿಗಳು ಗುಣಮಟ್ಟದಿಂದ ಇರುವಂತೆ ನೋಡಿಕೊಳ್ಳಿ – ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ೧.೪೦ ಕೋಟಿ ರೂಪಾಯಿಗಳು ಮಂಜೂರಾಗಿದ್ದು, ಕಟ್ಟಡ ಕಾಮಗಾರಿಗಳನ್ನು ಗುಣಮಟ್ಟದಿಂದ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಭಾವಿ ಕ್ಷೇತ್ರದ ಶಾಸಕ...
- Advertisement -

More Articles Like This

- Advertisement -
close
error: Content is protected !!
Join WhatsApp Group