- Advertisement -
ಪ್ರಸಕ್ತ ವರ್ಷದ ಕೊನೆಯ ಚಂದ್ರಗ್ರಹಣ ಇದೇ ದಿ. ೩೦ ರಂದು ಕಾರ್ತಿಕ ಪೌರ್ಣಮಿಯ ದಿನ ಸಂಭವಿಸಲಿದೆ.
ದಿ. ೩೦ ರಂದು ಮಧ್ಯಾಹ್ನ ೧.೦೪ ಕ್ಕೆ ಗ್ರಹಣ ಆರಂಭವಾಗಲಿದ್ದು ಗ್ರಹಣ ಮಧ್ಯದ ಕಾಲ ೩.೧೩ ಕ್ಕೆ ಹಾಗೂ ಸಾಯಂಕಾಲ ೫.೨೨ ಕ್ಕೆ ಗ್ರಹಣ ಮುಕ್ತಾಯವಾಗಲಿದೆ.
ದಿ. ೩೦ ರಂದು ಸಂಭವಿಸುವ ಚಂದ್ರಗ್ರಹಣ ೨೦೨೦ ನೇ ವರ್ಷದಲ್ಲಿ ನಾಲ್ಕನೇ ಚಂದ್ರಗ್ರಹಣ. ಕಳೆದ ಜನವರಿ ೧೦, ಜೂನ್ ೫ ಹಾಗೂ ಜುಲೈ ೪ ರಂದು ವಿವಿಧ ಚಂದ್ರಗ್ರಹಣ ಸಂಭವಿಸಿದ್ದವು.
- Advertisement -
ಜ್ಯೋತಿಷಿಗಳ ಪ್ರಕಾರ ಈ ಚಂದ್ರಗ್ರಹಣವು ತುಲಾ ರಾಶಿಯವರ ಮೇಲೆ ಹಾಗೂ ರೋಹಿಣಿ ನಕ್ಷತ್ರದಲ್ಲಿ ಜನಿಸಿದವರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದ್ದು ಇನ್ನುಳಿದ ರಾಶಿಯವರ ಮೇಲೂ ಪ್ರಭಾವ ಬೀರಲಿದೆ ಎನ್ನಲಾಗಿದೆ.
ಈ ಚಂದ್ರಗ್ರಹಣವು ಭಾರತದಲ್ಲಿ ಪೂರ್ಣವಾಗಿ ಗೋಚರಿಸುವುದಿಲ್ಲ ಎಂದು ಹೇಳಲಾಗಿದೆ. ಆದರೂ ಬಿಹಾರ, ಉತ್ತರ ಪ್ರದೇಶ, ಅಸ್ಸಾಂ ಉತ್ತರಾಖಂಡಗಳಲ್ಲಿ ಪಾರ್ಶ್ವವಾಗಿ ಗೋಚರಿಸಲಿದೆ.