ವಾಮಿಕಾ: ಮಗಳಿಗೆ ನಾಮಕರಣ ಮಾಡಿದ ವಿರುಷ್ಕಾ ದಂಪತಿ

0
1004

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜನವರಿ 11 ರಂದು ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದರು. ಇದೀಗ, ನಾಮಕರಣ ಕಾರ್ಯಕ್ರಮ ನಡೆದಿದ್ದು, ಮಗಳ ಹೆಸರು ಬಹಿರಂಗವಾಗಿದೆ.

ಅನುಷ್ಕಾ ಮತ್ತು ಕೊಹ್ಲಿ ದಂಪತಿಗೆ ಹೆಣ್ಣು ಮಗು ಆಯ್ತು ಎಂಬ ವಿಚಾರ ಹೊರಬೀಳುತ್ತಿದ್ದಂತೆ ಏನೆಂದು ಹೆಸರಿಡಬಹುದು ಎಂಬ ಚರ್ಚೆ ಶುರುವಾಯಿತು. ಅನುಷ್ಕಾ ಮತ್ತು ಕೊಹ್ಲಿ ಜೋಡಿಯನ್ನು ‘ವಿರುಷ್ಕಾ’ ಎಂದು ಕರೆಯಲಾಗುತ್ತಿತ್ತು.

ಹೆಣ್ಣು ಮಗು ಆದ ಕಾರಣ ಇದೇ ಹೆಸರು ಇಟ್ಟುಬಿಡಿ ಎಂದು ಅಭಿಮಾನಿಗಳು ಮನವಿ ಮಾಡಿದ್ದರು. ಅಭಿಮಾನಿಗಳು ನಿರಾಸೆಯಾಗದಂತಹ ಹೆಸರನ್ನು ಈಗ ವಿರುಷ್ಕಾ ದಂಪತಿ ಇಟ್ಟಿದ್ದಾರೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಗಳಿಗೆ ‘ವಮಿಕಾ’ ಎಂದು ನಾಮಕರಣ ಮಾಡಲಾಗಿದೆ. ಚೊಚ್ಚಲ ಬಾರಿಗೆ ಮಗುವಿನ ಜೊತೆ ದಂಪತಿ ಇಬ್ಬರು ಫೋಟೋ ಹಂಚಿಕೊಂಡಿದ್ದು, ”ನಮ್ಮ ಹೊಸ ಜಗತ್ತು” ಎಂದು ಖುಷಿ ವ್ಯಕ್ತಪಡಿಸಿದ್ದಾರೆ.