*ವಿಹು ಗಿಳಿ*
ತುಂಟ ನಗೆಯ ಮುದ್ದುಕಂದ
ನಿನ್ನ ಬೆಡಗು ಅಂದಚೆಂದ
ಹಾಲುಗೆನ್ನೆ ಹೊನ್ನ ತುಟಿಯ
ಸಣ್ಣ ಸಣ್ಣ ಹೆಜ್ಜೆ ನಡೆಯ
, ಹವಳ ತುಟಿಯ ತುಂಬು ಮನೆಯಾ
ಅರಳುಮರುಳ ನೋಟದಿ ಎಲ್ಲರ ಸೆಳೆಯುವಾ
ಕಾಲನೆತ್ತಿ ಬೆರಳ ಬಾಯಲ್ಲಿಟ್ಟು
ಹೊಟ್ಟೆ ಮೇಲೆ ಅಂಗಿ ತೊಟ್ಟು
ಬಂಗಾರ ಬಳೆಯ ಕೈಯಲಿಟ್ಟು
ಮುತ್ತಿನಂದದಿ ಹಾಸಿಗೆಯಲ್ಲಿ ಹೊಳೆಯುತಾ
ಹೊರಳಿ ಮರಳಿ ಅತ್ತು-ಕರೆದು
ಅಮ್ಮನೆದೆಯ ಹಾಲು ಕುಡಿದು
ಮನೆಯಲಿ ಎಲ್ಲರ ಪ್ರೀತಿ ಅಮೃತದಿ ಮಿಂದು
ಮಿನುಗುತಾರೆ
ಯಂತೆ ಹೊಳೆಯುವಾ
ನಡೆಯಲೆದರುತಾ ಹೆಜ್ಜೆಯಿಟ್ಟು
ಅಳುತ ನಗುತ್ತಾ ತಿಂಡಿ ಬಾಯಲ್ಲಿಟ್ಟು
ಅಕ್ಕರೆಯ ಅಮ್ಮಂದಿರ ಮಡಿಲ ಪುಟ್ಟ
ಬಾಣ ನಕ್ಷತ್ರದ ಮೆರಗು ಚೆಲ್ಲುತಾ
ಪುಟ್ಟ ಅಕ್ಕಂದಿರ ಜೊತೆ ಆಡುತ್ತಾ
ತೊದಲು ನುಡಿಯ ಸುಖವ ನೀಡುತಾ
ಅರೆಬರೆ ಮಾತು ಅಕ್ಕರೆಯಲಿ ಅರಳಿಸುತಾ
ಅಮ್ಮನ ಹಾಡಕದ್ದು ಹಾಡುತ್ತಾ
ಎಲ್ಲರ ಹರುಷದ ಹೊಳೆಯಲಿ ತೇಲಿಸುತ್ತಾ
ಹೀಗೆ ಇರು ಕಂದ ಮನೆಯ ಹರುಷವಾಗಿ, ಖುಷಿಯಾಗಿ, ಸಂತಸವಾಗಿ, ಪ್ರೀತಿಯಾಗಿ, ಪರಿಮಳವಾಗಿ ನೂರುಕಾಲ ವಿದ್ಯಾಬುದ್ಧಿ ಒಳ್ಳೆತನ ಹೊಂದಿ
ಎಂದೆಂದೂ
*ಅನ್ನಪೂರ್ಣ ಹಿರೇಮಠ ಶಿಕ್ಷಕಿ*