ಬೀದರ – ಐದು ವರ್ಷ ಸಿಎಂ ಆಗಿರಲಿಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆಯ ಬಗ್ಗೆ ಸಚಿವ ಈಶ್ವರ ಖಂಡ್ರೆ ಏನೂ ಪ್ರತಿಕ್ರಿಯೆ ನೀಡದೆ ನಡೆದುಬಿಟ್ಟರು.
ಪತ್ರಕರ್ತರೊಡನೆ ಮಾತನಾಡುತ್ತಿದ್ದ ಅವರು, ಸಂಪುಟ ವಿಸ್ತರಣೆ ಸಿಎಂ ಅವರ ಪರಮಾಧಿಕಾರ ಅವರ ಅವರಿಗೆ ಸಂಪೂರ್ಣ ಅಧಿಕಾರವಿದೆ ಎಂದರು.
ಸಿದ್ಧರಾಮಯ್ಯ ಅವರು ಜನಪ್ರೀಯ ನಾಯಕರು, ಜನಮಾನಸದ ನಾಯಕರು ಇನ್ನೂ ಅನೇಕ ವರ್ಷ ರಾಜಕಾರಣ ಮಾಡಬೇಕೆಂಬುದು ನಮ್ಮೆಲ್ಲರ ಆಸೆಯಾಗಿದೆ ಅವರ ನಾಯಕತ್ವದಲ್ಲಿ, ಮಾರ್ಗದರ್ಶನದಲ್ಲಿ ನಾವು ಮುಂದುವರೆಯುತ್ತೇವೆ ಎಂದು ಖಂಡ್ರೆ ಹೇಳಿದರು.
ಆದರೆ ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ಧರಾಮಯ್ಯ ಹೇಳಿಕೆಯ ಬಗ್ಗೆ ಅವರು ಪ್ರತಿಕ್ರಿಯೆ ನೀಡದೇ ಬಿರಬಿರನೇ ನಡೆದುಬಿಟ್ಟರು.
ವರದಿ : ನಂದಕುಮಾರ ಕರಂಜೆ, ಬೀದರ

