ಚಾಮುಂಡೇಶ್ವರಿಗೆ ಅರ್ಚನೆ ಮಾಡಿ,
ಸ್ವಾರ್ಥಕಾಗಿ ಏನನೂ ಕೇಳಲಿಲ್ಲ,
ನನ್ನ ಕೋರಿಕೆ ಕೇವಲ ಮೂರು..
ಕರೋನಾದಿಂದ ಜನತೆಯ ರಕ್ಷಿಸು..
ಕರೋನಾ ಲಸಿಕೆಗೆ ದಾರಿ ತೋರು..
ಕನ್ನಡ ನಾಡಿನ ಜನರ ಪ್ರವಾಹದಿಂದ ರಕ್ಷಿಸು…
ಎಂತಹ ವ್ಯಕ್ತಿತ್ವ; ನಿಸ್ವಾರ್ಥ ಪ್ರಾರ್ಥನೆ
ವಿಶ್ವಕೇ ಮಾದರಿಯಾದರು..
ದಸರಾ ಉದ್ಘಾಟಕ ಡಾ.ಸಿ.ಎನ್.ಮಂಜುನಾಥರು….
ಅಂದು ವಿಜಯನಗರದ ಅರಸರು
ಆರಂಭಿಸಿದರು ದಸರಾ ಉತ್ಸವವ
ಶತ್ರುಗಳ ಮೇಲಿನ ದಿಗ್ವಿಜಯದ ಸಂಕೇತವಾಗಿ,
ಭಕ್ತಿ-ಶಕ್ತಿ-ಶೌರ್ಯಗಳ ಪ್ರತೀಕ ವಾಗಿತ್ತು ಅಂದಿನ ದಸರಾ….
ಮೈಸೂರು ಅರಸರು ಆರಂಭಿಸಿದರು,
ಸಂಸೃತಿಯ ಪೋಷಿಸಲು ಮೈಸೂರು ದಸರಾ,
ಆಟೋಟ,ಕ್ರೀಡಾ ಕೂಟ,ಕುಸ್ತಿ
ಸಾಹಿತ್ಯ, ಸಂಗೀತ, ಸಂಸ್ಕೃತಿ ಗಳ ಬೀಡಾಯಿತು
ಅಂದಿನ ಮೈಸೂರು ದಸರಾ…
ಜಾತ್ಯತೀತ ಚಿಂತನೆಯ,ಧಾರ್ಮಿಕ ಶ್ರದ್ಧೆ ಯ
ಕೇಂದ್ರವಾಗಿತ್ತು ಅಂದಿನ ದಸರಾ…..
ದಸರಾ ಕಣ್ತುಂಬಿಕೊಳ್ಳಲು ಜನರ ಪ್ರವಾಹ,
ವಿಶ್ವದ ಮೂಲೆಮೂಲೆಗಳಿಂದ ಜನಸಾಗರ,
ರಾತ್ರಿ ಬೆಳಕಿನ ದಸರಾ,ಆಹಾರಮೇಳ,
ಸಂಗೀತ-ಸಾಹಿತ್ಯ ಮೇಳ,ವಸ್ತುಪ್ರದರ್ಶನ,
ಫಲಪುಷ್ಪ ಮೇಳ ತಂದಿತ್ತು ದಸರೆಗೆ ರಂಗು…..
ಕರೋನಾ ಮಾರಿಯ ಭೀಕರ ನರ್ತನ,
ವೈಭವಯುತ ದಸರಾಕೆ ತಂದಿತು ಕುತ್ತು,
ಸರಳ ದಸರಾ,ಸಾಂಪ್ರದಾಯಿಕ ದಸರಾ,
ಇಂದು ನಡೆದಿದೆ ಜನಾರೋಗ್ಯ ರಕ್ಷಣೆಯ ಸಾಂಸ್ಕೃತಿಕ ದಸರಾ,
ಕರೋನಾ ಸೇನಾನಿಗಳಿಗೆ ಸನ್ಮಾನ,
ವೈದ್ಯರಿಂದ ದಸರಾ ಉದ್ಘಾಟನೆ,
ಈ ಬಾರಿಯ ದಸರಾ ಜಗತ್ತಿಗೇ ಮಾದರಿ,
ಜನರ ಪ್ರಾಣ,ಸಾಂಸ್ಕೃತಿಕ ಅಭಿಮಾನ ರಕ್ಷಿಸಲಿದೆ,
ಮೈಸೂರಿನ ಸಾಂಸ್ಕೃತಿಕ ಕಿರೀಟಕೆ ಜನಪರ ಚಿಂತನೆಯ ರಂಗುತಂದಿದೆ..
ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368