ಒಂದು ಕ್ಷಣ ನೆನೆಸಿಕೊಳ್ಳಿ. ಕೇವಲ ಸೊನ್ನೆ ಡಿಗ್ರಿಗೆ ತಾಪಮಾನ ಇಳಿದಾಗ ಸಣ್ಣಗೆ ನಡುಗುವ ನಾವು ಒಳ್ಳೆಯ ಕಂಬಳಿಯನ್ನು ಹೊದ್ದು ಮಲಗಲು ಓಡುತ್ತೇವೆ.
ಈ ರೀತಿಯಾಗಿ ನಾವು ಸುರಕ್ಷಿತವಾಗಿ ಮನೆಯಲ್ಲಿ, ಸಮಾಜದಲ್ಲಿ ಇದ್ದೇವೆ ಎಂದರೆ ಅದಕ್ಕೆ ಕಾರಣ ಗಡಿಯಲ್ಲಿ ನಿಂತು ಹಗಲಿರುಳು ದೇಶವನ್ನು ಕಾಯುತ್ತಿರುವ ನಮ್ಮ ಸೈನಿಕರು ಬಿಸಿಲು, ಮಳೆ, ಚಳಿಯೆನ್ನದೆ ಕಣ್ಣು ಮಿಟುಕಿಸದೆ ಯಾವ ಕ್ಷಣದಲ್ಲಿ ವೈರಿ ರಾಷ್ಟ್ರದ ದ್ರೋಹಿ ಯಾವ ರೂಪದಲ್ಲಿ ವಕ್ಕರಿಸುತ್ತಾನೋ ಎಂದು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ನಮ್ಮ ಹೆಮ್ಮೆಯ ಸೈನಿಕರಿಂದಾಗಿ ನಾವಿಂದು ಸುರಕ್ಷಿತವಾಗಿ ಮನೆಯಲ್ಲಿ ಬೆಚ್ಚಗೆ ಮಲಗುತ್ತೇವೆ. ಆದರೆ ಇನ್ನು ಮುಂದೆ ಚಳಿಗಾಲ ಬರುತ್ತದೆ. ಚೀನಾ, ಪಾಕಿಸ್ತಾನದಂಥ ವೈರಿ ರಾಷ್ಟ್ರಗಳು ದೇಶದೊಳಗೆ ನುಸುಳಲು ಕಾಯುತ್ತಿರುತ್ತವೆ. ಅತಿಕ್ರಮಣ ಮಾಡಿ ದೇಶದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಹವಣಿಸುತ್ತ ಇರುತ್ತವೆ. ಇಂಥ ವೈರಿಗಳನ್ನು ಸದೆಬಡಿಯಬೇಕು. ಅವರ ಹೆಡೆಮುರಿ ಕಟ್ಟಿ ಒಗೆದು ಮತ್ತೆ ವಿರಾಜಮಾನನಾಗಿ ಮರಳಿ ಬರಬೇಕು. ಚೀನಾದ ಗಡಿಯಾದ ಲಡಾಕ್ ಹಾಗೂ ಸಿಯಾಚಿನ್ ಪ್ರದೇಶಗಳಲ್ಲಿ ಮೈ ಕೊರೆಯುವ ಚಳಿ ಇರುತ್ತದೆ.
ಅಖಂಡ ಪ್ರದೇಶವೇ ಹಿಮದಿಂದ ಕೂಡಿದ್ದರೂ ಕುಡಿಯಲು ಯೋಗ್ಯವಾದ ನೀರು ದೊರೆಯುವುದು ಕಷ್ಟ. ಮೈಯ ರೋಮರೋಮಗಳು ಕ್ಷಣಗಳಲ್ಲಿ ಗಟ್ಟಿಯಾಗಿ ಉಸಿರಾಡಲು ಕೂಡ ಕಷ್ಟವಾಗುವಂಥ ಶೀತಲ ಪ್ರದೇಶಗಳಲ್ಲಿ ನಿಂತು ಗಡಿ ಕಾಯಬೇಕು. ಶತ್ರು ನುಸುಳಲು ಪ್ರಯತ್ನಿಸುತ್ತಿದ್ದರೆ ಆತನ ತಲೆ ಸೀಳಬೇಕು.
ಇಂಥ ನಮ್ಮ ಸೈನಿಕರಿಗೆ ತೊಂದರೆಯಾಗದಂತೆ ಕೇಂದ್ರದ ಮೋದಿ ಸರ್ಕಾರ ಮೊದಲ ಆದ್ಯತೆಯಂತೆ ಸೈನಿಕರ ಸುರಕ್ಷತೆಯನ್ನು ತೆಗೆದುಕೊಂಡಿದೆ. ಯಾಕೆಂದರೆ ಸೈನಿಕರಿದ್ದರೆ ನಾವು ಇಲ್ಲದಿದ್ದರೆ ನಾವಿಲ್ಲ ಎಂಬ ಭಾವ ನಮ್ಮ ಪ್ರಧಾನಿ ಮೋದಿಯವರದು.
ಸ್ವತಂತ್ರ ಭಾರತದಲ್ಲಿ ಗಡಿ ಕಾಯುವ ಸೈನಿಕರಿಗೆ ಮೋದಿಯವರಷ್ಟು ಪ್ರಾಮುಖ್ಯತೆ ಕೊಟ್ಟ ಇನ್ನೊಬ್ಬ ಪ್ರಧಾನಿಯಿಲ್ಲ. ಸಿಯಾಚಿನ್ ಪ್ರದೇಶವನ್ನು ನೆನೆಸಿಕೊಂಡರೇ ಸಾಕು ಮೈ ನಡುಗುತ್ತದೆ. ಅಲ್ಲಿನ ಹವಾಮಾನಕ್ಕೆ ಸೈನಿಕರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ರಕ್ತ ಹೆಪ್ಪುಗಟ್ಟುವುದು, ಶ್ವಾಸಕೋಶದ ಸಮಸ್ಯೆ, ಅಶಕ್ತತೆ, ಉಸಿರಾಟದ ಸಮಸ್ಯೆಗಳು ಬಾಧಿಸುತ್ತವೆ.
ಈವರೆಗೆ ಸಿಯಾಚಿನ್ ನಲ್ಲಿ ಸುಮಾರು ೧೦೦೦ ಸೈನಿಕರು ಹವಾಮಾನ ವೈಪರೀತ್ಯ, ಹಿಮಪಾತದಂಥ ಅವಘಡಗಳಿಗೆ ಬಲಿಯಾಗಿ ಹುತಾತ್ಮರಾಗಿದ್ದಾರೆ. ಆದರೆ ಈಗ ಮೋದಿ ಸರ್ಕಾರ ಬಂದ ಮೇಲೆ ಸೈನಿಕರಿಗಾಗಿ ವಿಶೇಷ ಕಾಳಜಿ, ಗೌರವ ಸಿಗುತ್ತಿದೆ. ಸೈನಿಕರು ನಮ್ಮ ದೇಶದ ಅಮೂಲ್ಯ ರತ್ನಗಳು, ಅವರೇ ನಮ್ಮ ರಕ್ಷಕರು ಎಂಬ ಭಾವನೆ ಎಲ್ಲ ಭಾರತೀಯರಲ್ಲಿ ಮೂಡುವಂತೆ ಕೇಂದ್ರ ಸರ್ಕಾರ ಅದರಲ್ಲೂ ಮೋದಿಯವರು ನಡೆದುಕೊಳ್ಳುತ್ತಿದ್ದಾರೆ. ಸಿಯಾಚಿನ್ ಸೈನಿಕರಿಗಾಗಿ ಕೇಂದ್ರ ಸರ್ಕಾರ ಆರು ಕೋಟಿ ರೂ. ವೆಚ್ಚಮಾಡುತ್ತಿದೆ. ಇತ್ತ ಪೂರ್ವ ಲಡಾಖ್ ನಲ್ಲಿ ನಿತ್ಯವೂ ಅಂದಾಜು ನೂರು ಕೋಟಿ ರೂ.ಗಳನ್ನು ಮೋದಿ ಸರ್ಕಾರ ವ್ಯಯಿಸುತ್ತಿದೆ.
ಈಗ ಕೊರೆಯುವ ಚಳಿಗೆ ನಮ್ಮ ಯೋಧರು ಹೆದರಬೇಕಾಗಿಲ್ಲ. ಪಾಕ್ ಹಾಗೂ ಚೀನಾದಂಥ ನರಿ ಬುದ್ಧಿಯ ದೇಶಗಳ ವಿರುದ್ಧ ಜಾಣ ಯೋಜನೆ, ಯೋಚನೆ ಹಾಗೂ ನಿರ್ಧಾರ ಕೈಗೊಳ್ಳುವಂಥ ನಾಯಕ ನಮಗೆ ಸಿಕ್ಕಿದ್ದಾರೆ.