Homeಲೇಖನಹಿರಿಯ ನಾಗರಿಕರ ದಿನಾಚರಣೆ

ಹಿರಿಯ ನಾಗರಿಕರ ದಿನಾಚರಣೆ

ಹಿರಿಯ ನಾಗರಿಕರಿಗೂ ಭಾರತೀಯರಿಗೂ ವ್ಯತ್ಯಾಸ ಇದೆಯೆ? ಭಾರತೀಯರಾಗಲು ಭಾರತದೊಳಗಿದ್ದರೆ ಸಾಕೆ? ಪ್ರಜಾಪ್ರಭುತ್ವದ ಇಂದಿನ ಪರಿಸ್ಥಿತಿ ನೋಡಿದರೆ ನಿಜವಾಗಿಯೂ ನಾವು ದೇಶವನ್ನು ಉಳಿಸಿದ್ದೇವೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರದ ಎಲ್ಲಾ ಸೇವೆಗಳನ್ನು ಬಳಸಿಕೊಳ್ಳುವುದು ನಾಗರಿಕರ ಕರ್ಮ ವಾಗಿದೆ. ಆದರೆ, ಸರ್ಕಾರವನ್ನು ಸರಿ ದಾರಿಯಲ್ಲಿ ನಡೆಸುವುದು ಹೇಗೆಂಬ ಧರ್ಮ ಮಾರ್ಗ ತಿಳಿಯದವರು ನಾಗರಿಕರಾಗಿ ಸೇವೆ ಮಾಡಿಸಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಇಲ್ಲಿ ಯಾರನ್ನೂ ಅವಮಾನ ಮಾಡುವ ಉದ್ದೇಶವಂತೂ ಇಲ್ಲ. ನಾಗರಿಕರಾಗಿ ನಮ್ಮಮೂಲ ಧರ್ಮ ಕರ್ಮಕ್ಕೆ ನಾವೇ ಮಸಿ ಬಳಿದುಕೊಂಡು ಸರ್ಕಾರ ಸರಿಯಿಲ್ಲ ಎನ್ನುವವರ ಹಿಂದೆ ನಡೆದವರಿಗೆ ಸಿಕ್ಕಿದ್ದು ಏನು?

ಪ್ರತಿಯೊಂದು ಯೋಜನೆಗಳಿಗೆ ಸುರಿಯುತ್ತಿರುವ ಕೋಟ್ಯಾಂತರ ಹಣವನ್ನು ಸದ್ಬಳಕೆ ಮಾಡಿಕೊಂಡವರು ವಿರಳ. ಮಧ್ಯವರ್ತಿಗಳು ನುಂಗಿ ನೀರು ಕುಡಿದು ಮತ್ತೆ ಮತ್ತೆ ಸರ್ಕಾರದ ವಿರುದ್ದ ಜನರನ್ನು ಎತ್ತಿ ಕಟ್ಟಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಜನರ ಬಡತನ ನಿವಾರಣೆ ಮಾಡಲು ಹೊರಟವರಿಗೆ ಸಿಕ್ಕಿದ್ದು ಸಾಲದ ಪಟ್ಟಿ. ದೇಶವನ್ನು ಸಾಲದ ದವಡೆಗೆ ಸಿಲುಕಿಸಿ,ತಮ್ಮ ಸ್ವಾರ್ಥ ವನ್ನು ಬೆಳೆಸಿಕೊಂಡು ಸರ್ಕಾರದ ದಿಕ್ಕು ತಪ್ಪಿಸಿ ಕೊನೆಯಲ್ಲಿ ನಾವೂ ಇಲ್ಲ ಸರ್ಕಾರ ನಡೆಸಿದವರೂ ಇಲ್ಲ ಆದರೆ ದೇಶ ಮಾತ್ರ ಎಲ್ಲರ ಸಾಲವನ್ನು ಹೊತ್ತುಕೊಂಡ ವಿದೇಶದೆಡೆಗೆ ಸಾಲ ಬೇಡಿ, ಬಂಡವಾಳಶಾಹಿಗಳು, ವ್ಯಾಪಾರಿಗಳು ತಮ್ಮ ತಮ್ಮ ಸ್ವಾರ್ಥ ಸುಖಕ್ಕಾಗಿ ದೇಶದ ತುಂಬಾ ಹರಡಿಕೊಂಡು ನಮ್ಮವರನ್ನೇ ಆಳೋ ತನಕ ಬೆಳೆದಿದ್ದಾರೆ.

ಇಲ್ಲಿ ತಿಳಿಸುವುದೇನೆಂದರೆ, ದೇಶಭಕ್ತಿ ದೇಶದೊಳಗಿದ್ದವರಿಗೆ ಬರೋ ವಸ್ತುವಲ್ಲ. ಸರ್ಕಾರದ ಸೇವೆ ಬಳಸಿಕೊಳ್ಳಲು ನಾವು ದೇಶ ಸೇವೆ ಮಾಡುವುದನ್ನು ಕಲಿಯಬೇಕಿದೆ. ದೇಶಸೇವೆ ಎಂದರೆ ರಾಜಕೀಯಕ್ಕೆ ಇಳಿಯುವುದಲ್ಲ. ಪ್ರತಿಯಾಗಿ ದೇಶದ ಮಕ್ಕಳಿಗೆ ಉತ್ತಮ ಜ್ಞಾನದ ಶಿಕ್ಷಣ ನೀಡಿ,ಸ್ವಾವಲಂಬನೆ
ಸ್ವತಂತ್ರ ಜ್ಞಾನ,ಸರಳ ಜೀವನ, ಸ್ವಾಭಿಮಾನ, ರಾಜಯೋಗದ ಬಗ್ಗೆ ತಿಳಿಸಿ ಪ್ರಜೆಗಳು ಬೆಳೆಸಬೇಕಿದೆ.ಅದಕ್ಕೆ ವಿರುದ್ದವಾದ ಶಿಕ್ಷಣ ನೀಡಿ,ವಿದೇಶಿಗಳನ್ನು, ವಿಜ್ಞಾನವನ್ನು ಆಂಗ್ಲ ಮಾಧ್ಯಮದಲ್ಲಿ ಕಲಿಸುತ್ತಾ ಕೊನೆಗೆ ಸರ್ಕಾರದ ಕೆಲಸ ಗಳಿಸಿ ಅದರಲ್ಲಿಯೂ ಕೇವಲ ತಮ್ಮ ಸಂಸಾರಕ್ಕಾಗಿ ಭ್ರಷ್ಟಾಚಾರ ಬೆಳೆಸಿಕೊಂಡು ಎಷ್ಟೇ ಆಸ್ತಿ ಅಂತಸ್ತು ಮಾಡಿಕೊಂಡವರೂ ಹಿರಿಯನಾಗರಿಕ ಸೇವೆಯನ್ನು ಬಳಸಿಕೊಂಡಿದ್ದಾರೆ. ಕೊನೆಪಕ್ಷ ಕೊನೆಗಾಲದಲ್ಲಿಯಾದರೂ ಸರ್ಕಾರವನ್ನು ಬಿಟ್ಟು ಸ್ವತಂತ್ರ ಜೀವನ ನಡೆಸಬಹುದಾದರೆ ನಮ್ಮಲ್ಲೇ ಇರುವ ಹೆಚ್ಚಿನ ಹಣ ಸಮಾಜಸೇವೆಗೆ ಬಳಕೆಯಾಗಬಹುದಲ್ಲವೆ? ಇದು ನಾವು ದೇಶಕ್ಕೆ ಮಾಡುವ ಸೇವೆ.

ಇಲ್ಲಿ ತೀರ ಬಡವರಾದವರಿಗೆ ಸೇವೆ ಅಗತ್ಯವಿದೆ. ಇದ್ದವರೂ ನನಗೆ ಅಧಿಕಾರವಿದೆ ನಾನೂ ದೇಶದ ಪ್ರಜೆ ಎಂದು ಬಳಸಿದರೆ ಇದರಿಂದ ನಮ್ಮ ದೇಶದ ಋಣ ಹೆಚ್ಚಾಗುತ್ತದೆ. ಇದನ್ನು ನಾವೇ ತೀರಿಸಬೇಕಾದಾಗ ಅನಗತ್ಯವಾದ ಸೇವೆಯನ್ನು ಬಳಸದೆ ನಮ್ಮ ಸ್ವಾಭಿಮಾನ ಉಳಿಸಿಕೊಂಡು ಇದ್ದರೆ ಎಷ್ಟೋ ಉತ್ತಮ ಪ್ರಜೆಗಳು ನಮ್ಮನ್ನು ನೋಡಿ ಕಲಿತು ಮುಂದೆ ನಡೆಯಬಹುದು. ಇಲ್ಲಿ ಸರ್ಕಾರದ ಸೇವಾಕಾರ್ಯ ಎಷ್ಟು ಬೆಳೆದಿದೆಯೆಂದರೆ ವೃದ್ದಾಶ್ರಮ ಅನಾಥಾಶ್ರಮ,ಆರೋಗ್ಯ ಧಾಮ, ಸೇವಾ ಶ್ರಮ, ಬಿಕ್ಷುಕ ಸಂಘ, ಅನ್ನ ಧಾಮ, ಅಬಲಾಶ್ರಮ …ಇವುಗಳಲ್ಲಿ ಇರುವ ಪ್ರಜೆಗಳ ಸಂಖ್ಯೆ ಬೆಳೆದಿರುವುದು ದೇಶಕ್ಕೆ ಶೋಭೆ ತರುವ ವಿಚಾರವೆ? ಎಲ್ಲಿ ಅತಿಯಾದ ಸಹಕಾರ ಇರುವುದೋ ಅಲ್ಲಿ ಅಜ್ಞಾನಿಗಳು ಇರುತ್ತಾರೆ.

ಆತ್ಮನಿರ್ಭರ ಭಾರತಕ್ಕೆ ಸ್ವಾವಲಂಬನೆ, ಸ್ವಾಭಿಮಾನ, ಸತ್ಯ,ಧರ್ಮ, ಸರಳ ಜೀವನ, ಸ್ವತಂತ್ರ ಜ್ಞಾನ, ಇರುವ ಪ್ರಜೆಗಳ ಅಗತ್ಯವಿತ್ತು. ಇದನ್ನು ನಮ್ಮ ಭಾರತೀಯ ಶಿಕ್ಷಣದಲ್ಲಿಯೇ ಮೊದಲು ಕಲಿಸಿ ಬೆಳೆಸಲಾಗುತ್ತಿತ್ತು.

ಕಾಲ ಬದಲಾದಂತೆ ಮಾನವರು ಭೌತಿಕದೆಡೆಗೆ ಹೊರಟು ಆಂತರಿಕ ಶಕ್ತಿ ಕುಸಿಯುವ ವಿಜ್ಞಾನ ಶಿಕ್ಷಣಕ್ಕೆ ಜೋತುಬಿದ್ದು,ಈಗಲೂ ಹಣವಿದ್ದವರೂ ಸರ್ಕಾರದ ಸಾಲ,ಸೌಲಭ್ಯಗಳನ್ನು ಉಚಿತ ಸೇವೆಗಳನ್ನು ಬಳಸಿದರೆ ಇದರಲ್ಲಿ ಯಾವ ದೇಶಸೇವೆ ಇದೆ? ಒಟ್ಟಿನಲ್ಲಿ ಪ್ರಜೆಗೆ ಇರಬೇಕಾದ ಧರ್ಮಜ್ಞಾನ ಕುಸಿದು ಸ್ವಾರ್ಥ ಚಿಂತನೆ ಬೆಳೆದರೆ ಸರ್ಕಾರಗಳಾದರೂ ಏನೂ ಮಾಡಲಾಗೊದಿಲ್ಲ.ವಿದೇಶಿಗಳ ಮೊರೆ ಹೋಗೋದೆ ಸರಿಯಾಗುತ್ತದೆ. ಆದರೆ ಇದರಿಂದಾಗಿ ನಮ್ಮ ಜ್ಞಾನ ಬೆಳೆಯುವುದೆ? ನಮ್ಮ ಜೀವ ಉಳಿಯುವುದೆ ನಮ್ಮ ಆತ್ಮಕ್ಕೆ ಶಾಂತಿ ಸಿಗುವುದೆ?

ಜೀವನ ಎಂದರೆ ಸಾಲ ತೀರಿಸಿ ಹೋಗಬೇಕಿತ್ತು.ಈಗಿದು
ಸಾಲ ಬೆಳೆಸಿ ನಡೆದಿದೆ. ಹೀಗಾಗಿ ಜನರಿಗೆ ಶಾಂತಿ,ಸಮಾಧಾನ, ತೃಪ್ತಿ, ನೆಮ್ಮದಿಯ ಆರೋಗ್ಯವಿಲ್ಲದೆ ಅನಾರೋಗ್ಯಕರ ಸಮಾಜದಲ್ಲಿ ಹೆಚ್ಚು ರೋಗವೇ ಬೆಳೆಯುತ್ತಿದೆ.ಭ್ರಷ್ಟಾಚಾರವೆಂಬ ಮಹಾಮಾರಿ ಮಾನವನ ಒಳಗೆ ಹೊರಗೆ ಸೇರಿಕೊಂಡು
ಜೀವನ ನರಕವಾಗುತ್ತಿದೆ. ಇದರಿಂದ ಬಿಡುಗಡೆ ಪಡೆಯಲು ಆತ್ಮಜ್ಞಾನದ ಅಗತ್ಯವಿದೆ.ವಿಜ್ಞಾನ ಇದನ್ನು ಬೆಳೆಸಿರುವಾಗ ಅದರಿಂದ ಸಾಧ್ಯವಾದಷ್ಟು ದೂರವಿದ್ದು ಸತ್ಯ ತಿಳಿಯೋ ಪ್ರಯತ್ನ ಜ್ಞಾನಿಗಳಾದವರು ಮಾಡಿದರೆ ಉತ್ತಮ. ಸರ್ಕಾರವೇ ದಾರಿತಪ್ಪಿರುವಾಗ ಅದರ ಹಿಂದೆ ನಡೆದವರಿಗೆ ಸರಿದಾರಿ ಸಿಗುವುದೆ? ಕೆಲವರಷ್ಟೇ ಸರಿದಾರಿ ಹಿಡಿದು ದೇಶಸೇವೆ ಮಾಡುತ್ತಿದ್ದಾರೆ.

ಮಾಧ್ಯಮಗಳು ಅವರನ್ನು ಗುರುತಿಸದೆ ಕೇವಲ ರಾಜಕೀಯ ವ್ಯಕ್ತಿಗಳ ಹಿಂದೆ ನಿಂತು ತಮ್ಮ ವ್ಯವಹಾರ ಬೆಳೆಸಿಕೊಂಡರೆ ಇದನ್ನು ದೇಶಭಕ್ತಿ ಎಂದರೆ ಸರಿಯೆ? ಸೇವೆ ಮಾಡಿಸಿಕೊಳ್ಳುವುದೂ ಪ್ರಗತಿಯೆ? ಸೇವೆ ಮಾಡೋದು ಧರ್ಮ,ಆದರೆ ಯಾರಿಗೆ ಮಾಡಬೇಕು ಎನ್ನುವ ಜ್ಞಾನವಿರಬೇಕಷ್ಟೆ. ಹಿರಿತನ ಕೇವಲ ವಯಸ್ಸಿನಿಂದ ಬೆಳೆಯುವುದಿಲ್ಲ. ಜ್ಞಾನದಿಂದ ಬೆಳೆಯುತ್ತದೆ. ನಮ್ಮಲ್ಲಿ ಸ್ವತಂತ್ರ ಜ್ಞಾನವಿದ್ದರೆ ಸರ್ಕಾರದ ಸೇವೆಯೊಳಗಿರುವ ರಾಜಕೀಯತೆ ಕಾಣುತ್ತದೆ. ಅದನ್ನು ರಾಜಯೋಗದೆಡೆಗೆ ನಡೆಸಿಕೊಂಡರೆ ಉತ್ತಮ.

ಹಿಂದಿನ ಕಾಲದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ಸೇವೆ ಮಾಡಿದ ಮಹಾತ್ಮರೆಲ್ಲಿ ಈಗಿನ ವಿದೇಶಿ ಶಿಕ್ಷಣ ಪಡೆದು,ಸರ್ಕಾರದ ಸೇವೆ ಮಾಡಿಸಿಕೊಂಡು ಸರ್ಕಾರ ಸರಿಯಿಲ್ಲವೆನ್ನುವ ವಿರೋಧಿಗಳೆಲ್ಲಿ? ನಮ್ಮ ನಮ್ಮ ಕರ್ಮಕ್ಕೆ ತಕ್ಕಂತೆ ಫಲ ಆ ಮೇಲಿನ ಭಗವಂತ ನೀಡುವಾಗ ಸರ್ಕಾರ ಇರದು. ಅವಶ್ಯಕತೆ ಇದ್ದವರು ಪಡೆದು ಜೀವನ ನಡೆಸಬಹುದು. ಆದರೂ ಇದೊಂದು ಸಾಲವಾಗಿರುತ್ತದೆ. ಅದಕ್ಕೆ ತಕ್ಕಂತೆ ಸೇವೆ ಮಾಡದೆ ಸಾಲಮನ್ನಾ ಆಗೋದಿಲ್ಲವೆನ್ನುವ ಅಧ್ಯಾತ್ಮ ಸತ್ಯ ಪ್ರಜೆಗಳಿಗಿದ್ದರೆ ದೇಶದ ಉದ್ದಾರ ಸಾಧ್ಯ.

ಮಧ್ಯವರ್ತಿಗಳ ಕುತಂತ್ರದಿಂದ ಒಳಗಿನ ಸತ್ಯಜ್ಞಾನವೆ ಹಿಂದುಳಿದರೆ ಅದನ್ನು ತಿಳಿದು ಮತ್ತೆ ಬೆಳೆಸಿಕೊಳ್ಳಲು ಪ್ರಯತ್ನಪಡುವುದು ಪ್ರಜಾಧರ್ಮ.ಅಜ್ಞಾನಕ್ಕೆ ಜ್ಞಾನದ ಶಿಕ್ಷಣವೇ ಮದ್ದು. ಭ್ರಷ್ಟಾಚಾರ ಕ್ಕೆ ಶಿಷ್ಟಾಚಾರವೆ ಮದ್ದು. ಇದರಲ್ಲಿ ತಪ್ಪಿದ್ದರೆ ತಿಳಿಸಬಹುದು.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

RELATED ARTICLES

Most Popular

error: Content is protected !!
Join WhatsApp Group