ಸವದತ್ತಿ: ತಾಲೂಕಿನ ಹಿರೂರ ಗ್ರಾಮದಲ್ಲಿ ಬೆಳಗಾವಿ ಲೋಕಸಭೆಯ ಉಪಚುನಾವಣೆಯ ನಿಮಿತ್ತ ಮತದಾನಕ್ಕೆ ಬಳಸುವ ವ್ಹಿ.ವ್ಹಿ.ಪ್ಯಾಟ್ ಮತ್ತು ಇ.ವ್ಹಿ.ಎಂ.ಯಂತ್ರಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಮಷಿನ್‍ಗಳ ಕುರಿತು ಮತದಾರರ ಗೊಂದಲಗಳನ್ನು ಪರಿಹರಿಸಿ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಲಾಯಿತು. ಮತದಾನ ಹೊಂದಿದ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸುವಂತೆ ಚಿದಾನಂದ ಬಾರ್ಕಿ ಈ ಸಂದರ್ಭದಲ್ಲಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಸೆಕ್ಟರ್ ಆಫೀಸರ್ ವಿ.ಕೆ.ಮುದಿಗೌಡರ.ಪ್ರಧಾನ ಗುರುಗಳಾದ ಎಂ.ಡಿ.ಬಡಿಗೇರ, ಶಿಕ್ಷಕರಾದ ಪಿ.ಜಿ.ಸುಣಗಾರ.ಗ್ರಾಮ ಲೆಕ್ಕಾಧಿಕಾರಿಗಳಾದ ಬಿ.ಎಸ್.ಹೆಗಡೆ ಎಸ್.ಕೆ.ಕವಳಿ. ಗ್ರಾಮಸ್ಥರಾದ ಫಕೀರಪ್ಪ ಚಂದರಗಿ, ವಿಠ್ಠಲ ಮುರಗೋಡ.ಗದಿಗೆಪ್ಪ ಮುತ್ತೆಪ್ಪ ಪೂಜೇರ.ಅಶೋಕ ಕರೀಕಟ್ಟಿ.ಭೀಮಪ್ಪ ಮುತ್ತೆನ್ನವರ ಮೊದಲಾದ ಗ್ರಾಮದ ನಾಗರಿಕರು ಉಪಸ್ಥಿತರಿದ್ದು ಅಣುಕು ಮತದಾನ ಮಾಡುವ ಮೂಲಕ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಎಂ.ಐ.ಬಡಿಗೇರ ಮಾತನಾಡಿ ಮತದಾನ ಪ್ರತಿಯೊಬ್ಬರ ಹಕ್ಕು. ಚುನಾವಣೆ ಸಂದರ್ಭಗಳಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾವಣೆ ಮಾಡಬೇಕು.ಎಂದು ತಿಳಿಸಿದರು.