ಸ್ನೇಹಿತರೆ,
ರಾತ್ರಿಯಲ್ಲಿ ಪಕ್ಕನೆ ಉಂಟಾಗುವ ಮೃತ್ಯುವಿನಿಂದ ಹೇಗೆ ಪಾರಾಗಬಹುದು..? ವೈದ್ಯರೋರ್ವರು ತನ್ನ ಅಮೂಲ್ಯ ಸಲಹೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ನಿದ್ರಿಸುತ್ತಿರುವಾಗ ರಾತ್ರಿಯ ಸಮಯದಲ್ಲಿ ಮೂತ್ರವಿಸರ್ಜನೆ ಮಾಡಲು( ಟಾಯ್ಲೆಟ್ ಗೆ ಹೋಗಲು) ಪ್ರತಿಯೋರ್ವ ವ್ಯಕ್ತಿಯೂ ಮೂರೂವರೆ ನಿಮಿಷ ಜಾಗ್ರತೆವಹಿಸಬೇಕು ಇದು ಅತ್ಯಂತ ಅಮೂಲ್ಯ ಸಮಯವಾಗಿದೆ. ರಾತ್ರಿ ನಿದ್ದೆಯಿಂದ ತಕ್ಷಣ ಏಳುವಾಗ ಉಂಟಾಗುವ ಸಾವನ್ನು ಈ ಮೂರೂವರೆ ನಿಮಿಷದಲ್ಲಿ ಗಣನೀಯವಾಗಿ
ಕಡಿಮೆಗೊಳಿಸಬಹುದಾಗಿದೆ*ಆರೋಗ್ಯವಂತನಾಗಿದ್ದ ವ್ಯಕ್ತಿಯೋರ್ವ ನಿದ್ದೆಯಿಂದೇಳುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುವ ಸುದ್ದಿಯನ್ನು ಪದೇ ಪದೇ ಕೇಳುತ್ತಿದ್ದೇವೆ.
“ನಿನ್ನೆ ರಾತ್ರಿ ಹತ್ತು ಗಂಟೆಯವರೆಗೆ ಅವ ನನ್ನೊಂದಿಗೆ ಚಾಟಿಂಗ್ ಮಾಡಿದ್ದೆ.. ಹಾಗಿದ್ದವ ಸಾವನ್ನಪ್ಪಿದ್ದಾನೆಂಬ ಇವತ್ತು ಬೆಳಿಗ್ಗೆ ಕೇಳಿ ಬಂದ ಸುದ್ದಿಯನ್ನು ನಂಬಲಿಕ್ಕಾಗ್ತಾ ಇಲ್ಲ..!” ಇಂತಹ ಮಾತುಕತೆ ಸಾಮಾನ್ಯವಾಗಿ ನಾವು ಕೇಳ್ತಾ ಇದ್ದೇವೆ. ಹೀಗೊಂದು ಸಾವು ಬರಲು ಕಾರಣವಾದರೂ ಏನು? ಸಾಮಾನ್ಯವಾಗಿ ರಾತ್ರಿ ಹೊತ್ತು ಟಾಯ್ಲೆಟ್ ಗೋ,ಬಾತ್ ರೂಮಿಗೋ ಹೋಗಲು ಅವಸರದಿಂದ ಏಳುತ್ತೇವೆ. ಹೆಚ್ಚಿನ ಸಮಯ ಕೆಲವರಿಗೆ ಮಲಗಿ ನಿದ್ರಿಸುತ್ತಿದ್ದಲ್ಲಿಂದ ತಕ್ಷಣ ಎದ್ದು ನಿಲ್ಲುವಾಗ ಮೆದುಳಿಗೆ ರಕ್ತಸಂಚಾರ ಸಮರ್ಪಕವಾಗಿ ನಡೆಯುತ್ತಿರುವುದಿಲ್ಲ.!
ಇಂತಹ ಸಂದರ್ಭದಲ್ಲಿ ಮೂರುವರೆ ನಿಮಿಷ ಅತ್ಯಂತ ಅಮೂಲ್ಯವಾದದ್ದು ಹೇಗೆ?
ಮಧ್ಯರಾತ್ರಿಯಲ್ಲಿ ಮೂತ್ರ ವಿಸರ್ಜನೆಗಾಗಿ ನಾವು ಎದ್ದೇಳುವಾಗ ಉದಾಹರಣೆಗೆ ಎದೆಬಡಿತ ತಕ್ಷಣ ತಾಳತಪ್ಪುವ ಸಾಧ್ಯತೆ ಇದೆ. ಮಾತ್ರವಲ್ಲದೆ ತಕ್ಷಣ ಏಳುವಾಗ ಮೆದುಳಿಗೆ ರಕ್ತ ಸಂಚಾರವಿಲ್ಲದೆ ತಲೆಸುತ್ತುವಂತಾಗಿ ರಕ್ತ ಸಂಚಾರದ ಕೊರತೆಯಿಂದ ಹೃದಯಘಾತವಾಗುವ ಸಾಧ್ಯತೆಯೂ ಇದೆ. ಆದ್ದರಿಂದಲೇ ಇಂತಹ ವೇಳೆ ಮೂರುವರೆ ನಿಮಿಷ ಜಾಗ್ರತೆವಹಿಸಲು ಈ ಕೆಳಗಿನ ನಿರ್ದೇಶಗಳನ್ನು ಕೊಡಲಾಗಿದೆ.
- ನೀವು ನಿದ್ದೆಯಿಂದ ತಕ್ಷಣ ಏಳುವಾಗ ಮೊದಲ ಒಂದೂವರೆ ನಿಮಿಷ ಎಚ್ಚರವಾದರೂ ಹಾಸಿಗೆಯಲ್ಲೇ ಹಾಗೆಯೇ ಮಲಗಿ ಬಿಡಿ.
- 2 ನಿಮಿಷ ಹಾಸಿಗೆಯ ಮೇಲೆ ನಿಧಾನವಾಗಿ ಕುಳಿತುಕೊಳ್ಳಿ
- ನಿಮ್ಮ ಕಾಲುಗಳನ್ನು ಮಂಚದಿಂದ ಕೆಳಗೆ ಅಥವಾ ಚಾಪೆಯಲ್ಲಿಯೇ ಚಾಚಿ ಅರ್ಧ ನಿಮಿಷ ಕುಳಿತುಕೊಳ್ಳಿ.
ಈ ಮೂರು ನಿಮಿಷ ಕಳೆದ ಬಳಿಕ ತಲೆಸುತ್ತುವ(ಗಿರಕಿ ಹೊಡೆದಂತಾಗುವುದು) ಸಾಧ್ಯತೆ ಇರದು ಹೃದಯಘಾತ ಉಂಟಾಗದು ಕುಸಿದು ಬಿದ್ದು ತಕ್ಷಣ ಸಾವನ್ನಪ್ಪುವ ಸಾಧ್ಯತೆಯೂ ಇಲ್ಲದಾಗಲಿದೆ.
ಯಾಕೆಂದರೆ ಮೆದುಳಿಂದ ಹಿಡಿದು ಪ್ರಮುಖ ಅಂಗಾಂಗಗಳಿಗೆ ರಕ್ತ ಸಂಚಾರ ಸಮರ್ಪಕಗೊಳಿಸಲು ಈ ಮೂರು ನಿಮಿಷ ವನ್ನು ಈ ರೀತಿ ಮಾಡಲು ಉಪಯೋಗಿಸುವುದರಿಂದ ಸಾಧ್ಯವಿದೆ
ನಿಮ್ಮ ಕುಟುಂಬ ಸದಸ್ಯರು,ಸ್ನೇಹಿತರಲ್ಲಿ ಈ ವಿಷಯವನ್ನು ಹಂಚಿಕೊಳ್ಳಿ. ಒಂದು ಪ್ರಾಣವನ್ನು ಕಾಪಾಡಿದ ಪುಣ್ಯಕಾರ್ಯವನ್ನು ಮಾಡಿದಂತಾಗುತ್ತದೆ
ಸರ್ವೇ ಜನಾ ಸುಖಿನೋ ಭವಂತು