೧೧೯ ಜನರಿಗೆ ಪದ್ಮ ಪ್ರಶಸ್ತಿ ; ಇವರಲ್ಲಿ ಐವರು ಕನ್ನಡಿಗರು

Must Read

ಗಣರಾಜ್ಯೋತ್ಸವ ದ ಸಂದರ್ಭದಲ್ಲಿ ಭಾರತ ಸರ್ಕಾರ ಹಲವು ಕಲಾವಿದರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು ಕರ್ನಾಟಕದ ಐವರಿಗೆ ಪ್ರಶಸ್ತಿ ಸಿಕ್ಕಿದೆ.

ಜ್ಞಾನಪೀಠ ಪ್ರಶಸ್ತಿ ವಿಜೇತ, ಜಾನಪದ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಪದ್ಮಭೂಷಣ, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಡಾ.ಬಿ ಎಮ್ ಹೆಗಡೆ ಅವರಿಗೆ ಪದ್ಮವಿಭೂಷಣ, ಕೆ ವೈ ವೆಂಕಟೇಶ ಅವರಿಗೆ ಕ್ರೀಡಾ ಪದ್ಮಶ್ರೀ, ಮಂಜಮ್ಮ ಜೋಗತಿ ಅವರಿಗೆ ಕಲಾ ಪದ್ಮಶ್ರೀ,ರಂಗಸ್ವಾಮಿ ಕಶ್ಯಪ್ ಅವರಿಗೆ ಶಿಕ್ಷಣ ಪದ್ಮಶ್ರೀ ಹಾಗೂ ಗಾಯಕ ದಿ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಒಟ್ಟು ೧೧೯ ಮಹನೀಯರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. 

ಇವರಲ್ಲಿ ದಿ. ರಾಮ್ ವಿಲಾಸ ಪಾಸ್ವಾನ ಅವರಿಗೆ ಮರಣೋತ್ತರ ಪದ್ಮಭೂಷಣ, ಸುಮಿತ್ರಾ ಮಹಾಜನ ಅವರಿಗೆ ಪದ್ಮಭೂಷಣ ಹಾಗೂ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.

ಸರಳ ಗಣರಾಜ್ಯೋತ್ಸವ ಆಚರಣೆ

ಇತ್ತ ಬೆಂಗಳೂರಿನ ಮಾಣಿಕ್ ಷಾ ಮೈದಾನ ಗಣರಾಜ್ಯೋತ್ಸವದ ಪರೇಡ್ ಗೆ ಸಜ್ಜಾಗಿದ್ದು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಗಿದೆ.

ಬೆಂಗಳೂರಿನಲ್ಲಿ ರೈತರ ಟ್ರಾಕ್ಟರ್ ಪರೇಡ್ ಕೂಡ ಇರುವುದರಿಂದ ಎಲ್ಲೆಡೆ ಭದ್ರತೆ ಹೆಚ್ಚಿಸಲಾಗಿದೆ. ಒಂದು ಮೂಲದ ಪ್ರಕಾರ ರೈತರ ಟ್ರಾಕ್ಟರ್ ಮೆರವಣಿಗೆಗೆ ಪೊಲೀಸ್ ಇಲಾಖೆ ಪರವಾಣಿಗೆ ನೀಡಿಲ್ಲ ಎನ್ನಲಾಗುತ್ತಿದ್ದು ರೈತರು ಸರ್ಕಾರದ ವಿರುದ್ಧ ಹೋರಾಟಕ್ಕೆ ಹಟತೊಟ್ಟು ಸಜ್ಜಾಗಿದ್ದಾರೆ. ಯಾವುದೇ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸ್ ಪಡೆಯನ್ನು ಹೆಚ್ಚಿಸಲಾಗಿದೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group