ಸಿಂದಗಿ; ಡಾ.ಎಂ.ಎಂ.ಕಲಬುರ್ಗಿಯವರು ಅನೇಕ ಗ್ರಂಥಗಳನ್ನು ಸಂಪಾದನೆ ಮಾಡಿದ ಗ್ರಂಥಗಳಿಗೆ ಕೇಂದ್ರ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದುಕೊಂಡಂತವರು ಬಂದ ಪ್ರಶಸ್ತಿಗಳಿಂದ ಡಾ. ಕಲಬುರ್ಗಿಯವರಿಗೆ ಗೌರವ ಬರಲ್ಲಿಲ್ಲ ಆ ಎಲ್ಲ ಪ್ರಶಸ್ತಿಗಳಿಗೆ ಗೌರವ ಬಂದಿವೆ ಆ ಎಲ್ಲ ಪ್ರಶಸ್ತಿಗಳಿಗೆ ಗೌರವವನ್ನು ಕೊಟ್ಟಂತವರು ಒಬ್ಬ ವ್ಯಕ್ತಿಯಾಗಿದೇ ಕನ್ನಡದ ನಿಘಂಟುವಾಗಿದ್ದರು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ಅಭಿಮತ ವ್ಯಕ್ತ ಪಡಿಸಿದರು.
ಪಟ್ಟಣದ ಬಸವ ಮಂಟಪದಲ್ಲಿ ಡಾ. ಎಂ ಎಂ.ಕಲಬುರ್ಗಿಯವರ ೧೦ನೇ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ೧೨ನೇ ಶತಮಾನದ ಶರಣರ ವಚನಗಳನ್ನು ಬದುಕುವ ರೀತಿಯನ್ನು ಬದುಕಿದ ದಿಮಂತ ಕನ್ನಡ ಪಂಡಿತ ಎಂ.ಎಂ.ಕಲಬುರ್ಗಿಯವರು. ಶರಣರು ಸಮ ಸಮ ಸಮಾಜವನ್ನು ಕಟ್ಟಬೇಕು ಎಂದು ಹೊರಟಂಥ ಶರಣ ಕ್ರಾಂತಿಯನ್ನು ಕೆಲವರಿಗೆ ಸಹಿಸಕ್ಕಾಗದಂತ ರೀತಿಯಲ್ಲಿ ಕಟು ಸತ್ಯವನ್ನು ಪ್ರತಿಪಾದಿಸಿದವರಿಗೆ ಸೈದಾಂತಿಕ ಹೋರಾಟಗಳು ಅವರಿಗೆ ಕಗ್ಗಂಟಾಗಿ ಹೋಯಿತು. ಅವರು ಕಳೆದು ಹೋದರು ಕೂಡಾ ಅವರು ರಚಿಸಿ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಅವರ ತತ್ವಗಳನ್ನು ನಮ್ಮ ಮುಂದಿನ ಪಿಳೀಗೆ ತಿಳಿದುಕೊಳ್ಳಬೇಕಾದರೆ ಸ್ವಲ್ಪಾದರು ಅಧ್ಯಯನ ಮಾಡಿದ್ದಾದರೆ ಅವರನ್ನು ಸ್ಮರಿಸಿದಂತಾಗುತ್ತದೆ ವಿಚಾರಗಳನ್ನು ಕೊಲೆ ಮಾಡಬೇಕೆ ವಿನಃ ವಿಚಾರಗಳನ್ನು ಪ್ರತಿಪಾದಿಸಿದ ವ್ಯಕ್ತಿಗಳನ್ನು ಕೊಲೆ ಮಾಡಿದ್ದು ದುರದೃಷ್ಟಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ಡಾ.ಎಂ.ಎಂ.ಕಲಬುರ್ಗಿಯವರು ಕನ್ನಡದಲ್ಲಿ ಎಂ.ಎ.ಪದವಿ ಪಡೆದು ಕಲಿತ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದಂತವರು. ಅನೇಕ ಸಾಹಿತಿಗಳು ಈ ರಾಜ್ಯದಲ್ಲಿದ್ದರು ಕೂಡ ನೂರಾರು ಗ್ರಂಥಗಳನ್ನು ರಚಿಸಿ ಹಂಪಿ ವಿವಿಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದಂತವರು ಇಂತಹ ಕನ್ನಡ ಪಂಡಿತರನ್ನು ಪಡೆದುಕೊಂಡ ನಾವೇ ಅದೃಷ್ಟ ವಂತರು. ಫ.ಗು.ಹಳಕಟ್ಟಿ ಸಂಶೋದನಾ ಕೇಂದ್ರ ಕಟ್ಟುವಲ್ಲಿ ಇವರ ಪಾತ್ರ ಹಿರಿದು ಅಲ್ಲದೆ ಹಲಸಂಗಿ ಜನಪದ ಸಾಹಿತಿಗಳನ್ನು ಪುಸ್ತಕದ ಮೂಲಕ ಹೊರ ತಂದವರು ಇಂತವರ ಸಾಹಿತ್ಯ ಕೆಲವರಿಗೆ ಕಗ್ಗಂಟಾಗಿ ಅವರನ್ನು ಮುಗಿಸುವ ಹಂತಕ್ಕೆ ತಲುಪಿದ್ದು ಶೋಚನೀಯ ಎಂದರು.
ಸಿ.ಎಂ.ಮನಗೂಳಿ ಕಾಲೇಜಿನ ನಿವೃತ್ತ ಗ್ರಂಥಪಾಲಕ ಸಿದ್ದಬಸವ ಕುಂಬಾರ, ಶಿವಾನಂದ ಕಲಬುರ್ಗಿ, ಗುರುಪಾದ ತಾರಾಪುರ, ಶಿವಕುಮಾರ ಶಿವಶಿಂಪಿ ಮಾತನಾಡಿದರು.
ರಾಷ್ಟ್ರೀಯ ಬಸವದಳ ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ವಿಶ್ವನಾಥ ಜೋಗುರ, ಕಾಳಪ್ಪ ಬಗಲಿ, ಬಸವರಾಜ ಐರೋಡಗಿ, ದಾನಪ್ಪ ಜೋಗುರ, ಗುರು ಬಸರಕೋಡ, ಪತ್ರಕರ್ತ ಪಂಡಿತ ಯಂಪೂರೆ, ಆರ್.ಪಿ.ಬಿರಾದಾರ, ಸಂಗಣ್ಣ ಬ್ಯಾಕೋಡ ಸೇರಿದಂತೆ ಅನೇಕರಿದ್ದರು.