ಬೆಳಗಾವಿ: ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪರೀಕ್ಷೆಯ ನಂತರ ಫಲಿತಾಂಶಕ್ಕೆ ಕಾಯುತ್ತ ಕುಳಿತ ವಿದ್ಯಾರ್ಥಿಗಳ ಮುಖದಲ್ಲಿ ಇಂದು ಮಂದಹಾಸ ಮೂಡಿದ್ದು ಈ ಬಾರಿಯ ಪಲಿತಾಂಶ ಒಂದು ಮಾದರಿ ದಾಖಲೆಯಂತಿದೆ.
ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಸಂಪೂರ್ಣ ಅಂಕಗಳನ್ನು ಪಡೆದು ಟಾಪರ್ ಗದ್ದುಗೆ ಗಿಟ್ಟಿಸಿಕೊಂಡಿದ್ದಾರೆ.
145 ಟಾಪರ್ ಗಳ ಪೈಕಿ 10 ಜನ ವಿದ್ಯಾರ್ಥಿಗಳು ಬೆಳಗಾವಿ ಜಿಲ್ಲೆಯವರಾಗಿದ್ದು ಜಿಲ್ಲೆಗೆ ಒಂದು ಹೆಮ್ಮೆಯ ಸಂಗತಿಯಾಗಿದೆ. 3 ಜನ ಕನ್ನಡ ಮಾದ್ಯಮ ವಿದ್ಯಾರ್ಥಿಗಳಾಗಿದ್ದರೆ 7 ಜನ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಬಾಚಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸವದತ್ತಿ ತಾಲೂಕಿನ ಸತ್ತಿಗೇರಿ ಕೆಪಿಎಸ್ ವಿದ್ಯಾರ್ಥಿನಿ ಸಹನಾ ಮಹಾಂತೇಶ ರಾಯರ, ಖಾನಾಪುರ ತಾಲೂಕಿನ ನಂದಗಡ ಸಂಗೊಳ್ಳಿ ರಾಯಣ್ಣ ಮೆಮೋರಿಯಲ್ ಸ್ಕೂಲ್ ನ ಸ್ವಾತಿ ಸುರೇಶ್ ತೊಲಗಿ, ರಾಮದುರ್ಗ ಕ್ಯಾಂಬ್ರಿಜ್ ಆಂಗ್ಲ ಮಾಧ್ಯಮ ಶಾಲೆಯ ಆದರ್ಶ ಬಸವರಾಜ ಹಾಲಬಾವಿ,
ಬೆಳಗಾವಿ ಎಂ.ವಿ.ಹೆರವಾಡ್ಕರ ಆಂಗ್ಲ ಮಾಧ್ಯಮ ಶಾಲೆಯ ಅಮೋಘ ಎನ್. ಕೌಶಿಕ್,ರಾಮದುರ್ಗ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ರೋಹಿಣಿ ಗೌಡರ, ಬೆಳಗಾವಿ ಕೆಎಲ್ ಎಸ್ ಆಂಗ್ಲಮಾಧ್ಯಮ ಶಾಲೆಯ ವೆಂಕಟೇಶ ಯೋಗೇಶ್ ಡೋಂಗ್ರೆ ಅವರು 625 ಕ್ಕೆ ಅಂಕ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.