ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ 2021-22 ನೆಯ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.100 ರಷ್ಟಾಗಿದೆ. ಲಕ್ಷ್ಮೀ ಬಸಪ್ಪ ತಡಸಲೂರ (616) ಪ್ರಥಮ, ಅಭಿಷೇಕ ಬಸಯ್ಯ ನರೇಂದ್ರಮಠ (611) ದ್ವಿತೀಯ, ಅಪೂರ್ವ ರಮೇಶ ಸೂರ್ಯವಂಶಿ (604) ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟೂ 31 ವಿದ್ಯಾರ್ಥಿಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 12 ಡಿಸ್ಟಿಂಕ್ಷನ್, 19 ಪ್ರಥಮ ಶ್ರೇಣಿ ಪಡೆದಿದ್ದಾರೆ. ಪರೀಕ್ಷಾ ಮಂಡಳಿ ನಿಗದಿಪಡಿಸಿದ ಗುಣಾತ್ಮಕ ಫಲಿತಾಂಶದಲ್ಲಿ ಶಾಲೆಯು ಶೇ.92.52 ರಷ್ಟು ಪಡೆದು ಎ ಗ್ರೇಡ್ ದಾಖಲಿಸಿದೆ. ಹಿಂದಿ ವಿಷಯದಲ್ಲಿ 06, ಗಣಿತ ವಿಷಯದಲ್ಲಿ 01, ಸಮಾಜ ವಿಜ್ಞಾನ ವಿಷಯದಲ್ಲಿ 04 ವಿದ್ಯಾರ್ಥಿಗಳು 100 ಅಂಕ ಹಾಗೂ ಕನ್ನಡ ವಿಷಯದಲ್ಲಿ 02 ವಿದ್ಯಾರ್ಥಿಗಳು 125 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಶಿಕ್ಷಕ ಎನ್.ಆರ್. ಠಕ್ಕಾಯಿ ಹಾಗೂ ಎಲ್ಲ ಸಿಬ್ಬಂದಿ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಬೂದಿಹಾಳ ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.100
0
928
RELATED ARTICLES