spot_img
spot_img

ಹರಿದಾಸ ಅನುಗ್ರಹಿತ ಪ್ರಶಸ್ತಿ ಪುರಸ್ಕೃತರ ವಿವರ

Must Read

- Advertisement -

ಎಸ್.ಕೆ.ಶೇಷಚಂದ್ರಿಕಾ; ನಾಡಿನ ಹಿರಿಯ ಪತ್ರಕರ್ತರು;

ಚುನಾವಣೆ-ವಿಶ್ಲೇಷಣಾ ತಜ್ಞರು. ರಾಷ್ಟ್ರದ ಅಭಿವೃದ್ಧಿ ಪ್ರಯೋಗಗಳನ್ನು ದೇಶದ ಉದ್ದಗಲಕ್ಕೆ, ಮುಖ್ಯವಾಗಿ ಕನ್ನಡ ನಾಡಿನ ಲಕ್ಷಾಂತರ ಗ್ರಾಮೀಣ ಜನಸಮೂಹಕ್ಕೆ ಸುಲಭವಾಗಿ ತಿಳಿಯಲು ರೇಡಿಯೋ ಮಾಧ್ಯಮವನ್ನು ಯಶಸ್ವಿಯಾಗಿ ಬಳಕೆ ಮಾಡಿದ್ದು ಇವರ ಹೆಗ್ಗಳಿಕೆ. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಪದವಿಗಳಿಸಿ ಮುಂಬೈನ ಟೈಮ್ಸ್ ಆಫ್ ಇಂಡಿಯಾದಲ್ಲಿ ವೃತ್ತಿ ಆರಂಭ; ನಂತರ ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ತಮ್ಮ ವೃತ್ತಿ ನೈಪುಣ್ಯತೆ ತೋರಿ ಕೇಂದ್ರ ವಾರ್ತಾ ಸೇವೆಗೆ ಸೇರಿ ವೃತ್ತಿ ಮತ್ತು ಪ್ರವತ್ತಿಗಳನ್ನು ಒಂದಾಗಿಸಿಕೊಂಡವರು. ಕರ್ನಾಟಕ ಮುಖ್ಯಮಂತ್ರಿಯವರ ಪತ್ರಿಕಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶೇಷಣ್ಣ; ಮಾಧ್ಯಮ ಕ್ಷೇತ್ರದ ಬೋಧಕರಾಗಿಯೂ ಜನಪ್ರಿಯ .85ರ ಹಿರಿಯ ಚೇತನ.

ಶ್ರೀಧರ ರಾಯಸಂ

ಶ್ರೀಧರ ರಾಯಸಂ ಬಿ.ಎಸ್ಸಿ.(ಸಿ ಎಂ ಐ ಐ ಬಿ) ಹಿಂದಿ ವಿಶಾರದ., ನಿವೃತ್ತ ಬ್ಯಾಂಕ್ ಅಧಿಕಾರಿ, ಇದುವರೆಗೂ ೨೬ ಕೃತಿಗಳನ್ನು ಬರೆದಿದ್ದಾರೆ ಆಧ್ಯಾತ್ಮಿಕ, ಸಾಹಿತ್ಯ ದಲ್ಲಿ ಆಸಕ್ತಿ. ಪ್ರವಾಸ,  ಚಾರಿತ್ರಿಕ, ಪ್ರಬಂಧ,ರೂಪಕ, ಕಥೆಗಳು, ಕವನಗಳ ಈ ಪ್ರಾಕಾರದಲ್ಲೂ ಸಾಹಿತ್ಯ ಕೃಷಿ ಮಾಡಿದ್ದಾರೆ .ದೂರದರ್ಶನ, ಆಕಾಶವಾಣಿಯಲ್ಲಿ,  ಸಂದಶ೯ನ, ಚಿಂತನ,  ಭಾಷಣ, ಕವನಗಳು, ಪ್ರಸಾರವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ ಜಿಲ್ಲೆಯ ಮಾಜಿ ಗೌರವ ಕಾಯ೯ದಶಿ೯,ಬಳ್ಳಾರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ,ಮೈಸೂರು ಬ್ಯಾಂಕ್ ಕೇಂದ್ರ ಸಮಿತಿ  ಸದಸ್ಯರು,ಸೋದೆಯಲ್ಲಿ  ದಾಸಸಾಹಿತ್ಯ ರಸಪ್ರಶ್ನೆಯನ್ನು ಸತತ ೧೮ ವಷ೯ಗಳಿಂದ ನಡೆಸಿ ಕೊಡುತ್ತಿದ್ದಾರೆ. ಭಾಗ೯ವ ಪ್ರಶಸ್ತಿ,ಕೆಂಪೇ ಗೌಡ ಪ್ರಶಸ್ತಿ (ವಾಡ್೯ ),ದೂರದರ್ಶನ ಪ್ರಶಸ್ತಿ,ಕಲ್ಯಾಣ ಕನಾ೯ಟಕ ಪ್ರಶಸ್ತಿಬ್ಯಾಂಕ್  ಕಥಾ,ಕವನ ಪ್ರಶಸ್ತಿ,ಕಥಾ ರಂಗಂ ಪ್ರಶಸ್ತಿ  ಲಭಿಸಿದೆ.ಮಧ್ವ ರಾಮಾಯಣದ ರಸಪ್ರಶ್ನೆ ಕಾರ್ಯಕ್ರಮ  ಬೆಂಗಳೂರು, ಭಂಡಾರಕೇರಿ ಮಠದಲ್ಲಿ ನಡೆಸಿದ್ದಾರೆ.

ಸುಮಿತ್ರ ಜಯತೀರ್ಥ ಪ್ರತಿನಿಧಿ

- Advertisement -

ಶ್ರೀಮತಿ ಸುಮಿತ್ರ ಜಯತೀರ್ಥ ಪ್ರತಿನಿಧಿ ಮೂಲತಃ ರಾಯಚೂರಿನವರು. ಗುಲ್ಬರ್ಗಾದಲಿ ಕೇಂದ್ರ ಸರ್ಕಾರದ ಪಿ & ಟಿಯಲ್ಲಿ ಉದ್ಯೋಗಿಯಾಗಿ ಜೂನಿಯರ್ ಇಂಜಿನಿಯರ್ ಆಗಿ ಸ್ವಯಂ ನಿವೃತ್ತಿ ಪಡೆದಿರುತ್ತಾರೆ. ನಿವೃತ್ತಿಯ ನಂತರ ಅಧ್ಯಾತ್ಮ ಸಾಧನೆಯಲ್ಲಿ ತೊಡಗಿ ಪ್ರಭಂಜನ ಭಜನಾ ಮಂಡಳಿಯ ಸದಸ್ಯರಾಗಿ ಸಕ್ರಿಯವಾಗಿ ಭಾಗವಹಿಸಿ ಹರಿಕಥಾಮೃತಸಾರ ಮೌಖಿಕ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿರುತ್ತಾರೆ. ಸೌರಭ ಹರಿದಾಸ ಸಾಹಿತ್ಯದವರು ನಡೆಸುವ ಐದು ವರ್ಷ ಕೋರ್ಸನ್ನು ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅನೇಕ ಯತಿಗಳ ಪೂಜೆ, ಜ್ಞಾನ ಕಾರ್ಯಗಳನ್ನು ನಡೆಸಿ ವಿಶೇಷವಾಗಿ ವಿಜಯದಾಸರ ಆರಾಧನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಸರ್ವಜ್ಞ ಪತ್ರಿಕೆಗೆ ಅಂಕಣ ಬರಹಗಾರ್ತಿಯಾಗಿ ಹಲವಾರು ಲೇಖನಗಳನ್ನು ಬರೆದಿರುತ್ತಾರೆ.

ಅನಂತರಾವ್ ದಂಡಿನ್

ಶ್ರೀಯುತರು ಮೂಲತಃ ಇಂಜಿನಿಯರಿಂಗ್ ಪದವೀಧರರು. ಉದ್ಯಮಿಯಾಗಿ ಲೌಕಿಕ ವೃತ್ತಿಯಲ್ಲಿದ್ದು ಪುರಂದರ ದಾಸರ ಕೀರ್ತನೆಗಳ ಕುರಿತಾಗಿ ಪ್ರಸ್ತುತ ವೆಬ್‍ಸೈಟ್‍ವೊಂದನ್ನು ಸಿದ್ಧಪಡಿಸಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯವರು. ಇವರ ಪೂರ್ವಿಕರು ಹಂಪಿಯ ಪುರಂದರ ಮಂಟಪವನ್ನು ಜೀರ್ಣೋದ್ಧಾರಗೊಳಿಸಿರುತ್ತಾರೆ. ಹಲವು ದಶಕಗಳಿಂದ ಅಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿರುವ ಕುಟುಂಬದ ಹಿನ್ನೆಲೆ ಇದ್ದು, ಈಗ ದಾಸರ ಸೇವೆಗೆ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಭಕ್ತಿ ನೀತಿ ಪ್ರಧಾನವಾದ ದಾಸರ ಕೀರ್ತನೆಗಳು ಅಪಾರವಾಗಿದ್ದು ಹಲವಾರು ಗಾಯಕರು ಅವುಗಳನ್ನು ಹಾಡಿ, ಜನಪ್ರಿಯಗೊಳಿಸಿರುತ್ತಾರೆ. ಈ ಕೀರ್ತನೆಗಳನ್ನು ಒಂದೇ ವೇದಕೆ ಅಡಿ ತಂದು ಶುದ್ಧ ಪಾಠದೊಂದಿಗೆ ಅವುಗಳ ಧ್ವನಿಮುದ್ರಣವನ್ನು ಈ ವೆಬ್‍ಸೈಟ್‍ನಲ್ಲಿ ಅಳವಡಿಸಿ, ಅದಕ್ಕೆ ಸಂಬಂಧಿಸಿದ ಪ್ರವಚನಗಳು ಸಹ ಲಭ್ಯವಾಗುವಂತೆ ಮಾಡಿರುತ್ತಾರೆ. ಹಲವು ವಿದ್ವಾಂಸರ ನೆರವಿನೊಂದಿಗೆ ಈ ವೆಬ್‍ಸೈಟ್ ತಯಾರಾಗಿದ್ದು ಮುಂದಿನ ಪೀಳಿಗೆಗೆ ಇದೊಂದು ಆಕರವಾಗಲಿದೆ.

ಬಿ.ಎನ್. ರಾಜೇಂದ್ರ

- Advertisement -

ಬಿ.ಎನ್. ರಾಜೇಂದ್ರರವರು ಬಸವನಗುಡಿ ನ್ಯಾಶನಲ್ ಕಾಲೇಜಿನಲ್ಲಿ ಪದವೀಧರರಾಗಿ ಉದ್ಯಮಿಯಾಗಿ ಅಷ್ಟಲಕ್ಷ್ಮಿ ದೇವಸ್ಥಾನವನ್ನು ನಿರ್ಮಿಸಿ, ಎರಡು ದಶಕಗಳಿಂದ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಶ್ರೀನಿವಾಸ ಲೋಕಕಲ್ಯಾಣ ಟ್ರಸ್ಟ್ ಆರಂಭಿಸಿ ತನ್ಮೂಲಕ ಶ್ರೀನಿವಾಸ ಕಲ್ಯಾಣೋತ್ಸವವನ್ನು ಬಹು ವಿಜೃಂಭಣೆಯಿಂದ ಪ್ರತಿವರ್ಷ ಆಚರಿಸುತ್ತಿದ್ದಾರೆ.

ಟ್ರಸ್ಟ್ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುವುದು. ಉಚಿತ ಆರೋಗ್ಯ ತಪಾಸಣೆ ಕಣ್ಣು ಮತ್ತು ದಂತ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರಗಳನ್ನು ಟ್ರಸ್ಟ್ ನಡೆಸುತ್ತದೆ. ನೆರೆಪೀಡಿತ ಜನರಿಗೆ ಉಚಿತ ಆಹಾರ ಮತ್ತು ಬಟ್ಟೆ ವ್ಯವಸ್ಥೆ, ಕೊರೋನಾ ಸಂದರ್ಭದಲ್ಲಿ ಉಚಿತ ಆಮ್ಲಜನಕ ಸಿಲಿಂಡರ್ ಮತ್ತು ಅಗತ್ಯವಿರುವ ಜನಗಳಿಗೆ ಫುಡ್ ಕಿಟ್ ಮುಂತಾದವುಗಳನ್ನು ನೀಡಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ನಡುವಿನ ವಿಶಿಷ್ಟ ಸಾಧಕರು.

ಕೃಷ್ಣಾಚಾರ್ಯ ಹುನಗುಂದ

ಶ್ರೀವ್ಯಾಸರಾಜ ಮಠಾಧೀಶರಾದ ಶ್ರೀ ವಿದ್ಯಾಪಯೋನಿಧಿ ತೀರ್ಥರಿಂದ ಅಜನಪಿತ ವಿಠಲ ಅಂಕಿತ ಪಡೆದು ಹಾಡುಗಳು ಉಗಾಭೋಗ ಸುಳಾದಿ ಸೇರಿ 300 ಕ್ಕೂ ಹೆಚ್ಚು ಕೃತಿ ರಚನೆ. ಹರಿದಾಸರ ಕುರಿತಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ನೂರಾರು ಲೇಖನ. 1985ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕಾರ. ಮಾಸಪತ್ರಿಕೆಯೊಂದಕ್ಕೆ 3 ವರ್ಷಗಳ ಕಾಲ “ನಂದಾದೀಪ” ಎಂಬ ಅಂಕಣ ಬರಹ.

ಶ್ರೀ ಮದುತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಪ್ರಮೋದ ತೀರ್ಥರ ಸುವರ್ಣ ಮಹೋತ್ಸವದಲ್ಲಿ “ಪರಮಹಂಸ” ಸ್ಮರಣ ಸಂಚಿಕೆಯ ಸಹ ಸಂಪಾದಕರಾಗಿ ಸೇವೆ. ನಂತರ ಪೂರ್ಣಪ್ರಜ್ಞ…. ಪರಿಮಳ.. ಪಾರಿಜಾತ … ಸ್ವರಾಧಿಭಾಸ್ಕರ ಸ್ಮರಣ ಸಂಚಿಕೆಗಳ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದು ಅವು ಬಿಡುಗಡೆ ಯಾಗಿ ಜನಮನ್ನಣೆ ಗಳಿಸಿವೆ.

“ರಾಗ ಸುಧಾ” ಮತ್ತು ” ಮಂತ್ರಾಕ್ಷತೆ” ಪುಸ್ತಕಗಳ ಲೇಖಕರು. ಶ್ರೀಲಕ್ಷ್ಮೀ ನರಸಿಂಹದೇವರು ಪುಸ್ತಕ 3 ಮುದ್ರಣ ಕಂಡಿವೆ. ಶ್ರೀಹರಿವಾಯು ಸಿದ್ಧಾಂತ ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಶ್ರೀಮದಾನಂದತೀರ್ಥ ಸೇವಾ ಸಂಘದ ಪದಾಧಿಕಾರಯಾಗಿ, ಶ್ರೀಮನ್ ಮಾಧ್ವಸಂಘ ರಾಜರಾಜೇಶ್ವರಿ ನಗರದ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ.

“ದಾಸತಪಸ್ವಿ ವಿಜಯ ವಿಠಲ ಪ್ರಶಸ್ತಿ, ” ಶ್ರೀಕರ ವಿಠಲ” ಪ್ರಶಸ್ತಿ, “ವೇದಶ್ರೀ” ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ. ಹಾರ್ಮೋನಿಯಂ ವಾದಕರಾಗಿ ನಾಡಿನ ಪ್ರಸಿದ್ಧ ಗಾಯಕ/ಕಿಯರಿಗೆ ಸಾಥ್ ನೀಡಿರುವ ದು ಬದರಿಯಿಂದ ಚೆನ್ನೈ, ಬೆಂಗಳೂರು ಮೈಸೂರು , ಅನಂತಪುರ ನಾನಾ ಕಡೆಗೆ ಕಾರ್ಯಕ್ರಮ ನೀಡಿರುವರು. ಇಬ್ಬರೂ ಮಕ್ಕಳು ಶ್ರೀ ಶ್ರೀ ಸತ್ಯಾತ್ಮತೀರ್ಥರ ಬಳಿ ಸುಧಾ ಅಧ್ಯಯನ ಮಾಡಿರುವರು.

ವಟ್ಟಂಗಾಡು ಕೃಷ್ಣಾಚಾರ್ಯರು

ಬ್ರಾಹ್ಮಣಾರಾಧನೆ ಜ್ಞಾನಸತ್ರಗಳು ಎಂದ ಕೂಡಲೇ ನೆನಪಾಗುವವರು ಪಂ. ಪೂ. ವಟ್ಟಂಗಾಡು ಹಯಗ್ರೀವಾಚಾರ್ಯರು. ಅಹಂ ಸರ್ವೇಷು ಭೂತೇಷು ಭೂತಾತ್ಮಾ ಅವಸ್ಥಿತಃ – ಕಪಿಲನಾಮಕ ಭಗವಂತ ಹೇಳುವ ಮಾತು. ಜಡ ಅಧಿಷ್ಠಾನಗಳಾದ ಸಾಲಿಗ್ರಾಮ-ಪ್ರತಿಮೆಗಳಿಗಿಂತಲೂ ಹೆಚ್ಚಿನ ನನ್ನ ಸನ್ನಿಧಾನ ಚೇತನರಲ್ಲಿ, ವಿದ್ವಾಂಸರಲ್ಲಿ ಇದೆ ಎಂದು. ಆ ಅನುಸಂಧಾನವನ್ನು ತಮ್ಮ ನಿತ್ಯಜೀವನದಲ್ಲಿ ಕಾರ್ಯಗತವಾಗಿ ತಂದು, ಅಸಾಧಾರಣರೀತಿಯಲ್ಲಿ ಬ್ರಾಹ್ಮಣರನ್ನು ಆರಾಧಿಸಿ ಭಗವಂತನ ವಿಶೇಷ ಅನುಗ್ರಹಕ್ಕೆ ಪಾತ್ರರಾದವರು. ಧರ್ಮಶಾಸ್ತ್ರದಲ್ಲಿ ಏನೇ ಪ್ರಶ್ನೆ ಬಂದರೂ ಹಯಗ್ರೀವಾಚಾರ್ಯರನ್ನು ಎಲ್ಲರೂ ಸಂಪರ್ಕಿಸುತ್ತಿದ್ದರು. ಇದು ಅವರ ವಿದ್ವತ್ತಿಗೆ ನಿದರ್ಶನ.

ಮುಳಬಾಗಿಲಿನಲ್ಲಿ ಅನೇಕವರ್ಷಗಳವರೆಗೆ ಇದ್ದು, ಶ್ರೀನರಸಿಂಹದೇವರ, ಶ್ರೀಶ್ರೀಪಾದರಾಜರ ವಿಶೇಷಸೇವೆ ಮಾಡಿದವರು. ಇವರ ಸಾಧನೆಯನ್ನು ಗುರುತಿಸಿ ಪರಮಪೂಜ್ಯ ಶ್ರೀಸತ್ಯಾತ್ಮತೀರ್ಥರು ಇವರಿಗೆ ಧ್ಯಾನಪ್ರಮೋದಪ್ರಶಸ್ತಿ ನೀಡಿ ಗೌರವಿಸಿದರು.

ಅವರ ತರುವಾಯ ಅವರ ಮಕ್ಕಳಾದ ಪಂ. ವಟ್ಟಂಗಾಡು ಕೃಷ್ಣಾಚಾರ್ಯರು ತಂದೆಯವರ ಎಲ್ಲ ಕನಸುಗಳನ್ನು ನನಸುಗೊಳಿಸುತ್ತಾ ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾಧನೆ ಮಾಡುತ್ತಿರುವ ಅಪರೂಪದ ಸಾಧಕರು.

ಅವರು ನಡೆಸುವ ಜ್ಞಾನಸತ್ರಗಳು ಎಲ್ಲರಿಗೂ ಮಾದರಿಯಾಗಿವೆ ಎಂದರೆ ಅತಿಶಯೋಕ್ತಿ ಅಲ್ಲ. ಯಾವುದೇ ಊರಿನಲ್ಲಿ ಜ್ಞಾನಸತ್ರ ಮಾಡಿದರೂ, ನೂರಾರು ವಿದ್ವಾಂಸರನ್ನು ಕರೆಸಿ, ಅವರಿಗೆ ಎಲ್ಲವಿಧವಾದ ಸೌಕರ್ಯಗಳನ್ನು ಕಲ್ಪಿಸಿ, ಅವರಿಂದ ವಿಶೇಷವಾಗಿ ಪಾರಾಯಣ-ಪ್ರವಚನಗಳನ್ನು ಮಾಡಿಸಿ, ಸುವರ್ಣಪಾತ್ರೆ-ರಜತಪಾತ್ರೆಗಳೊಂದಿಗೆ ಕೈತುಂಬ ಸಂಭಾವನೆ ನೀಡಿ ವಿಶಿಷ್ಟ ರೀತಿಯಲ್ಲಿ ವಿದ್ವಾಂಸರ ಸತ್ಕಾರ – ಜ್ಞಾನಸತ್ರ ನಡೆಸುವುದು ಲೋಕೋತ್ತರವೇ ಸರಿ. ಗೃಹಸ್ಥರಾಗಿ ಮಠಾಧೀಶರು ನಡೆಸುವಂತೆ ಜ್ಞಾನಸತ್ರ-ಅನ್ನದಾನಾದಿಗಳನ್ನು ಮಾಡುತ್ತಿರುವುದು ನಿಜಕ್ಕೂ ಪ್ರಶಂಸಾರ್ಹವಾಗಿದೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

Today Horoscope: ಭಾನುವಾರ, ಫೆಬ್ರವರಿ 25, 2024 ರಂದು ನಿಮ್ಮ ರಾಶಿ ಭವಿಷ್ಯ

ಇಂದು ಫೆಬ್ರವರಿ 25, 2024, ಭಾನುವಾರ. ಈ ದಿನ 3 ವಿಶೇಷ ಯೋಗಗಳ ಸಂಯೋಜನೆಯಾಗಿದೆ: ಸುಕರ್ಮ ಯೋಗ, ತ್ರಿಪುಷ್ಕರ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ....
- Advertisement -

More Articles Like This

- Advertisement -
close
error: Content is protected !!
Join WhatsApp Group