spot_img
spot_img

ಶ್ರೀ ಕನ್ನಯ್ಯಾ ಮುತ್ಯಾ ಅವರ 102 ನೇ ಪುಣ್ಯಸ್ಮರಣೆ

Must Read

spot_img
- Advertisement -

ಸಿಂದಗಿ; ಹಿಂದಿನ ಶರಣರಲ್ಲಿ ದೈವಿ ಭಕ್ತಿ ಇದ್ದಿದ್ದರಿಂದ ಸಿದ್ಧಿ ವಾಕ್ ಪುರುಷ ಶ್ರೀ ಕನ್ನಯ್ಯಮುತ್ಯಾ ಅವರು ತಮ್ಮ ನಡೆ,ನುಡಿ,ಶುದ್ಧವಾಗಿರಿಸಿಕೊಂಡು ಪರಮೇಶ್ವರರನ್ನು ಸ್ಮರಿಸುತ್ತ ಬರಗಾಲದ ಪರಿಸ್ಥಿತಿಯಲ್ಲಿ ಗ್ರಾಮದ ಕೆರೆಯ ದಡದ ಮೇಲೆ ನಿಂತು ಕಂಬಳಿ ಬೀಸಿ ಮಳೆರಾಯನನ್ನು ಧರೆಗಿಳಿಸಿದ ಕೀರ್ತಿ ಆ ದೇವರಿಗೆ ಸಲ್ಲುತ್ತದೆ ಎಂದು ಗ್ರಾಮದ ಹಿರಿಯ ಮುಖಂಡ ನಿಂಗನಗೌಡ ಪಾಟೀಲ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದ ಆರಾಧ್ಯ ದೇವ ಶ್ರೀ ಕನ್ನಯ್ಯಮುತ್ಯಾ ದೇವರ 102 ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೊಲೆ ,ದರೋಡೆ, ಮೋಸ , ವಂಚನೆ , ಅತ್ಯಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಇಂತಹ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಕರುಗಳು ನಿಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ಸರಕಾರ ಉಚಿತವಾಗಿ ಓದಲು ಗ್ರಾಮ ಪಂಚಾಯತಿಗೊಂದು ಗ್ರಂಥಾಲಯಗಳು ತೆರೆದಿವೆ ಮಹಾತ್ಮರ ಚರಿತ್ರೆ, ವಚನಗಳು, ಸಾಂಸಾರಿಕ ಜೀವನದ ಕತೆ ಕಾದಂಬರಿಗಳು, ಸೇರಿದಂತೆ ಅನೇಕ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಲು ಮಕ್ಕಳಿಗೆ ಸೂಚಿಸಬೇಕು ಎಂದು ಹೇಳಿದ ಅವರು ಉಂಡ ಊಟ ಕಂಡ ಕನಸು ಹೇಳಿ ಮುಟ್ಟಿದೆಲ್ಲ ಚಿನ್ನ ಮಾಡಿ ತೋರಿಸಿದ ಸಿದ್ಧಿ ಪುರುಷ ಶ್ರೀ ಕನ್ನಯ್ಯ ಮುತ್ಯಾರವರ ತತ್ವ ಆದರ್ಶಗಳನ್ನು ನಿಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು .

ಡೊಳ್ಳು ಕುಣಿತ ಬಾಜಾ ಭಜಂತ್ರಿಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶ್ರೀ ಕನ್ನಯ್ಯಮುತ್ಯಾ ಪಲ್ಲಕ್ಕಿ ಮೆರವಣಿಗೆ ನಡೆಯಿತು

- Advertisement -

ಜನಮನ ಗೆದ್ದ ಡೊಳ್ಳಿನ ಗಾಯನ:

ಆಕಾಶವಾಣಿ ಕಲಾವಿದರಾದ ಕಲ್ಮೇಶ ಅರಟಾಳ್ ಮತ್ತು ಇಸ್ಲಾಮ ಸಮಾಜದ ದಕ್ಷಿಣ ಸೋಲಾಪುರ ಜಿಲ್ಲೆಯ ಕಾರ್ಕಲ್ ಗ್ರಾಮದ ಜಾಕೀರಸಾಬ ಜೊತೆ ಶಿವಶಕ್ತಿ ವಿಷಯ ಕುರಿತು ಜಿದ್ದಾ ಜಿದ್ದಿನ ಡೊಳ್ಳಿನ ಗಾಯನ ನಡೆಯಿತು ಬೆಳಿಗ್ಗೆ 5 ಘಂಟೆಗೆ ಮುಕ್ತಾಯಗೊಂಡ ಗಾಯನದಲ್ಲಿ ಅರಟಾಳ್ ಕಲ್ಮೇಶ ಅವರು ಗೆಲುವು ಸಾಧಿಸಿ ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ಶ್ರೀ ರಾವತದೇವರು ವಹಿಸಿದ್ದರು ಗ್ರಾ,ಪಂ,ಅಧ್ಯಕ್ಷ ಬಸಲಿಂಗಪ್ಪ ಬೋನಾಳ, ಸೋಮಯ್ಯ ವಡಿಯರ್, ಸತ್ಯನಾರಾಯಣ ತಿವಾರಿ, ಜಿ.ಕೆ.ನೆಲ್ಲಗಿ, ಶ್ರೀಶೈಲ ಕೋಣಶಿರಸಗಿ, ಶಿವನಂದ ಕೆರಿಗೊಂಡ, ಇನಾಯತ್ ದೊಡಮನಿ, ನಾಗು ಕೆರಿಗೊಂಡ, ರವಿಕಾಂತ ನಡವಿನಕೇರಿ, ಅಮೋಗಿ ವಡಿಯರ್, ಶ್ರೀಮಂತ ಮಳಗಿ, ಅಮ್ಮಣ್ಣ ವಾಲಿಕಾರ, ಹಲವರು ಇದ್ದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group