Monthly Archives: July, 2021

ನೂತನ ಸದಸ್ಯರಿಗೆ ಸನ್ಮಾನ

ಸಿಂದಗಿ: ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ನೂತನ ಸದಸ್ಯರಿಗೆ ಪುರಸಭೆ ವತಿಯಿಂದ ಸನ್ಮಾನಿಸಿ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ನೂತನ ಸದಸ್ಯರಾದ ರಾಕೇಶ ಕಂಠಿಗೊಂಡ, ಕಾಜು ಬಂಕಲಗಿ, ರಜಾಕ ಮುಜಾವರ, ಸುನೀಲ ಕಾಂಬಳೆ, ಶಿವಾಜಿ ಕೊಡಗೆ ಸೇರಿದಂತೆ ಅನೇಕರು ಇದ್ದರು.

ಸಮನ್ವಯ ಶಿಕ್ಷಣ ಕುರಿತು ಮುರಗೋಡ ಮತ್ತು ಯರಗಟ್ಟಿ ವಲಯದ ಪ್ರಧಾನ ಗುರುಗಳ ಗೂಗಲ್ ಮೀಟ್

ಸವದತ್ತಿ - 2021-22 ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯ ಚಟುವಟಿಕೆಗಳ ಕುರಿತಂತೆ ಗೂಗಲ್ ಮೀಟ್ ಮೂಲಕ ಮುರಗೋಡ ಮುಂಜಾನೆ 11 ರಿಂದ 12.30 ರ ವರೆಗೆ ಮತ್ತು ಯರಗಟ್ಟಿ ವಲಯ ಮದ್ಯಾಹ್ನ 3 ರಿಂದ 4.30 ರ ವರೆಗೆ ಸರಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಜರುಗಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುರಗೋಡ ಮತ್ತು...

ಸೈಕಲ್‌ ಜಾಥಾದಲ್ಲಿ ಪಾಲ್ಗೊಳ್ಳಲು ಮನವಿ

ಸಿಂದಗಿ: ಮತಕ್ಷೇತ್ರ್ರದಲ್ಲಿ ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ 7 ರಂದು ಸಿಂದಗಿ ನಗರದಲ್ಲಿ ಬೆಳಿಗ್ಗೆ 10:30 ಗಂಟೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನನಿತ್ಯ ಏರಿಸುತ್ತಿರುವುದರಿಂದ ಜನಸಾಮಾನ್ಯರಿಗೆ ತುಂಬಾ ಹೊರೆಯಾಗುತ್ತಿದ್ದು ತೈಲ ಬೆಲೆ ಏರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಂದಗಿಯಲ್ಲಿ ಸೈಕಲ್ ಜಾಥಾ ರ್ಯಾಲಿಯನ್ನು ಕೆಪಿಸಿಸಿ ಆದೇಶದಂತೆ...

ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ – ಅಶೋಕ ಮನಗೂಳಿ

ಸಿಂದಗಿ - ಇಡೀ ದೇಶದಲ್ಲಿ ಕಳೆದ 2 ವರ್ಷಗಳಿಂದ ಮಹಾಮಾರಿ ಕರೋನಾ ಹರಡಿ ಜನಜೀವನ ಅಸ್ತವ್ಯಸ್ತಗೊಂಡಿದೆ ಅಲ್ಲದೆ ಈವಾಗ್ಗೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದ್ದು ಕಾರಣ 18 ವರ್ಷದ ಪ್ರತಿಯೊಬ್ಬ ವಿದ್ಯಾರ್ಥಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂಸ್ಥೆಯ ಅಧ್ಯಕ್ಷರು ಮತ್ತು ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಸಲಹೆ ನೀಡಿದರು.ಪಟ್ಟಣದ...

ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿದಾಗ ಹೃದಯದ ಆರೋಗ್ಯದಲ್ಲಿ ಸುಧಾರಣೆ – ಯಶವಂತ ಗೌಡರ

ಸವದತ್ತಿ- ನಮ್ಮ ದಿನನಿತ್ಯದ ಬದುಕಿನಲ್ಲಿ ನಾಮ ಜಪ ಮಂತ್ರದ ಮೂಲಕ ಸಕಾರಾತ್ಮಕ ಶಕ್ತಿಯನ್ನು ಹಚ್ಚಿಸಿಕೊಳ್ಳುವುದರಿಂದ ಹೃದಯದ ಆರೋಗ್ಯದಲ್ಲಿ ಸುಧಾರಣೆಯನ್ನು ನಾವು ಕಾಣಬಹುದಾಗಿದೆ.ಸುಖ ಎಂಬ ಶಬ್ದಕ್ಕೆ ಪರ್ಯಾಯವಾಗಿ ನಾವು ಬಳಸುವ ಇನ್ನೊಂದು ಶಬ್ಧವೇ ಆನಂದ.ಆನಂದಮಯ ಜೀವನವನ್ನು ನಮಗೆ ಅಧ್ಯಾತ್ಮ ಕಲಿಸುತ್ತದೆ.ನಾಮಜಪವನ್ನು ನಾವು ಮಾಡುವುದರಿಂದ ಮನಸ್ಸು ಶಾಂತವಾಗಿರುವುದರಿಂದ ಮಾನಸಿಕ ಒತ್ತಡದಿಂದ ನಿರ್ಮಾಣವಾಗುವ ಶಾರೀರಿಕ ರೋಗಗಳು ಬರುವುದಿಲ್ಲ.ಇದರಿಂದ ಮನಸ್ಸಿನ...

ಚುಳಕಿಯ ಕಲ್ಮೇಶ್ವರ ಮಹಾ ಗವಿಯನ್ನು ಅಭಿವೃದ್ದಿ ಪಡಿಸಲಾಗುವುದು – ಆನಂದ ಮಾಮನಿ

ಸವದತ್ತಿ - “ತಾಲೂಕಿನ ಚುಳಕಿ ಗ್ರಾಮದ ಅವಧೂತ ಗವಿಯು ಇತಿಹಾಸದ ಪರಂಪರೆ ಹೊಂದಿದ ಗವಿಯಾಗಿದ್ದು ಇಲ್ಲಿನ ಹಿಂದಿನ ಪೂಜ್ಯರಾದ ಅವಧೂತ ಕಲ್ಮೇಶ್ವರರು ಮನಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದವರು.‌ಚುಳಕಿ ಗ್ರಾಮವೆಂದರೆ ಶ್ರೀಗಳ ಗವಿಯು ಎಲ್ಲರ ಕಣ್ಮುಂದೆ ಬರುತ್ತದೆ.ಈ ಗವಿಯ ಅಭಿವೃದ್ದಿ ಪಡಿಸುವ ಬಗ್ಗೆ ಇಂಚಲ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಸೂಚನೆ...

ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆಗೆ ಹಕ್ಕೊತ್ತಾಯ

ಭಾರತ ರತ್ನ ಡಾ ಭಿದಾನ್ ಚಂದ್ರ ರಾಯ್ ( ಬಿ.ಸಿ ರಾಯ್ ) ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಕುರಿತಂತೆ ಇಂದು ಬೆಳಗ್ಗೆ ಕನ್ನಡ ಜಾಗೃತಿ ಸಮಿತಿ ಮೈಸೂರಿನ ಸದಸ್ಯರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಡಾ.ಗುಬ್ಬಿಗೂಡು ರಮೇಶ್ ಅವರ ನೇತೃತ್ವದಲಿ ಕೃಷ್ಣರಾಜೇಂದ್ರ...

ವೃತ್ತಿಪರ ನೇಕಾರರಿಗೆ ಕಾರ್ಮಿಕ ದರ್ಜೆ ನೀಡಿ ಸೌಲಭ್ಯ ನೀಡಬೇಕು – ಶಿವಲಿಂಗ ಟಿರಕಿ

ಮೂಡಲಗಿ - ನಮ್ಮ ದೇಶದಲ್ಲಿ ೬೬ ಲಕ್ಷ ವೃತ್ತಿಪರ ನೇಕಾರರಿದ್ದು ೫-೬ ಲಕ್ಷ ಕೂಲಿ ಕಾರ್ಮಿಕ ವರ್ಗದವರಿದ್ದಾರೆ ಇವರಿಗೆ ಸರ್ಕಾರದಿಂದ ಯಾವುದೇ ಕಾರ್ಮಿಕ ಯೋಜನೆಗಳ ಮಾಹಿತಿ ಇಲ್ಲದೆ ಸೌಲಭ್ಯಗಳು ಸಿಗುತ್ತಿಲ್ಲ. ಅದರಮೇಲೆ ಲಾಕ್ ಡೌನ್ ಹಮ್ಮಿಕೊಂಡಿದ್ದರಿಂದ ಎಲ್ಲರ ಬದುಕು ಹೀನಾಯವಾಗಿದೆ. ರಾಷ್ಟ್ರೀಕೃತ, ಕೆಎಸ್ಎಫ್ ಸಿ, ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಪಡೆದವರಿಗೆ ಸಾಲ ಮನ್ನಾ...

ಶಾಸಕರ ಅನುದಾನದಲ್ಲಿ ಸವದತ್ತಿ ಪೊಲೀಸ ಠಾಣೆಗೆ ಬೊಲೇರೋ ಜೀಪ್ ವಿತರಣೆ

ಸವದತ್ತಿ - “ಸಾರ್ವಜನಿಕರ ರಕ್ಷಣೆ ಮಾಡುತ್ತಿರುವ ಮತ್ತು ಕಾನೂನನ್ನು ಬಹಳಷ್ಟು ಜವಾಬ್ದಾರಿಯುತವಾಗಿ ಸುವ್ಯವಸ್ಥಿತವಾಗಿ ನಡೆಯಿಸಿಕೊಂಡು ಹೋಗುತ್ತಿರುವ ಪೋಲೀಸ ಇಲಾಖೆ ಮತ್ತು ಕಂದಾಯ ಇಲಾಖೆಗಳಿಗೆ ವಾಹನಗಳ ತೊಂದರೆ ಇರಬಾರದು ಅದರಲ್ಲೂ ಪೊಲೀಸ ಇಲಾಖೆಯು ರಸ್ತೆ ಸಂಚಾರ ಸುಗಮ ವಾಗಿಡಲು ಮತ್ತು ಬಹು ಮುಖ್ಯವಾಗಿ ಯಲ್ಲಮ್ಮನಗುಡ್ಡದ ಜಾತ್ರೆಯ ಸಂದರ್ಭದಲ್ಲಿ ಟ್ರಾಫಿಕ್ ಕಿರಿಕಿರಿಯನ್ನು ಸರಿಪಡಿಸುವಾಗ ಅತಿಮುಖ್ಯವಾಗಿ ಪೊಲೀಸ ಜೀಪ್...

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೆಂಕಟ್ ರಾವ್ ದೇಶಪಾಂಡೆ ನಿರ್ಲಕ್ಷತನದಿಂದ ರಾಷ್ಟ್ರಧ್ವಜಕ್ಕೆ ಅವಮಾನ

ಬೀದರ್ - ಜಿಲ್ಲೆಯ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತವರೂರಾದ ಔರಾದ ತಾಲೂಕಿನ ಎಕಲಾರ ಗ್ರಾಮದಲ್ಲಿ ಪಂಚಾಯತ ಅಧಿಕಾರಿ ನಿರ್ಲಕ್ಷತನದಿಂದ ಸುಮಾರು ದಿನಗಳಿಂದ ಮಳೆ ಗಾಳಿಯಲ್ಲಿ ಗ್ರಾಮ ಪಂಚಾಯತ್ ಮೇಲೆ 24 ಗಂಟೆಗಳ ಕಾಲ ಹಾರಾಡುತ್ತಿರುವ ರಾಷ್ಟ್ರಧ್ವಜ.ನಮ್ಮ ದೇಶದ ಗಡಿ ವಾಘಾ ಬಾರ್ಡರ್ ನಲ್ಲಿ 365 ದಿನಗಳೂ ದಿನನಿತ್ಯ ಸಾವಿರಾರು ಜನರ ಸಮ್ಮುಖದಲ್ಲಿ ರಾಷ್ಟ್ರಧ್ವಜವನ್ನು...
- Advertisement -spot_img

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...
- Advertisement -spot_img
error: Content is protected !!
Join WhatsApp Group