Monthly Archives: February, 2023
ಸುದ್ದಿಗಳು
ಮೂಡಲಗಿ: ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ಉದ್ಘಾಟನೆ
ಮೂಡಲಗಿ: ಪಟ್ಟಣದ ನಾಗಲಿಂಗ ನಗರದ ಹತ್ತಿರ ಗುರ್ಲಾಪೂರ ರಸ್ತೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಉದ್ಘಾಟನಾ ಸಮಾರಂಭ ರವಿವಾರದಂದು ಜರುಗಿತು.ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಪೂಜೆಸಲ್ಲಿಸಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ನಾಡು ಕಂಡ ಅಪ್ರತಿಮ ಅರಸ. ಹಿಂದೂ ಸ್ವರಾಜ ನಿರ್ಮಾಣದ ಕನಸಾಗಿತ್ತು. ಶಿವಾಜಿ...
ಸುದ್ದಿಗಳು
ಅಂಧಕಾರದ ಕತ್ತಲೆ ಕಳೆಯುವದೇ ನಿಜ ಶಿವರಾತ್ರಿ
ಸಿಂದಗಿ: ಮಹಾಶಿವರಾತ್ರಿಯ ನೈಜ ಸಂದೇಶ ಲೋಕಕಲ್ಯಾಣಕ್ಕಾಗಿಯೇ ನಮ್ಮ ಜೀವನ ಮುಡುಪಾಗಿರಬೇಕೆಂಬುದು ಕ್ಷಣಕ್ಷಣವೂ ಭಗವಂತನ ಪ್ರಜ್ಞೆಯಿಂದ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ರಾಜಯೋಗಿನಿ ಪವಿತ್ರಾ ಅಕ್ಕನವರು ಹೇಳಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ 87ನೇ ತ್ರಿಮೂರ್ತಿ ಶಿವಜಯಂತಿ ಪ್ರಯುಕ್ತ ಕೇಕ್ ಕತ್ತರಿಸಿ ಮತ್ತು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಈಶಾವಾಸ್ಯಂ ಇದಂ ಸರ್ವಂ. ಎಲ್ಲವೂ ಶಿವಮಯ....
ಸುದ್ದಿಗಳು
ಫೆ19 ರಂದು ಕಡೋಲಿಯಲ್ಲಿ ಕವಿಗೋಷ್ಠಿ
ಬೆಳಗಾವಿ: ತಾಲೂಕಿನ ಕಡೋಲಿ ಗ್ರಾಮದ ಶ್ರೀ ದುರದುಂಡೀಶ್ವರ ಮಠದಲ್ಲಿ ಫೆ-19 ರಂದು ಮುಂಜಾನೆ ೧೦ ಗಂಟೆಗೆ ಅಖಿಲ ಕರ್ನಾಟಕ ಸರ್ವ ಕಲಾವಿದರ ಹಿತ ರಕ್ಷಣಾ ಸಂಘ(ರಿ) ಬೆಳಗಾವಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ಕವಿಗೋಷ್ಠಿ ಜರುಗಲಿದೆ.ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ...
ಸುದ್ದಿಗಳು
ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಿ: ಕಾರ್ಯಕರ್ತರಿಗೆ ಕರೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಅವರ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಿ : ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಎರಡು ತಿಂಗಳೊಳಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪ್ರತಿ ಮತಗಟ್ಟೆಗಳ ಮೂಲಕ ಕಾರ್ಯಕರ್ತರ ಪಡೆಯನ್ನು ಸಂಘಟಿಸಿ ಅರಭಾವಿ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಲು ಕಾರ್ಯಕರ್ತರು...
ಸುದ್ದಿಗಳು
ಮೋದಿ ಸರ್ಕಾರ ಮುಸ್ಲಿಂ ವಿರೋಧಿ ಅಲ್ಲ- ಪದ್ಮಶ್ರೀ ಪ್ರಶಸ್ತಿ ವಿಜೇತ ಶಾ ರಶೀದ್ ಖಾದ್ರಿ ಹೇಳಿಕೆ
ಬೀದರ: ನರೇಂದ್ರ ಮೋದಿ ಸರ್ಕಾರದ ಮೇಲೆ ಮೊದಲು ನನಗೆ ನಂಬಿಕೆ ಇರಲಿಲ್ಲ. 2014 ರ ನರೇಂದ್ರ ಮೋದಿ ಸರ್ಕಾರ ಮುಸ್ಲಿಂ ವಿರೋಧಿ ಎಂದು ಭಾವಿಸಿದ್ದೆ. ನನ್ನ ವಿಚಾರ ನನ್ನ ಭಾವನೆ ನಾನು ನರೇಂದ್ರ ಮೋದಿ ಮತ್ತು ಶಾ ವಿರುದ್ಧ ತಪ್ಪು ಕಲ್ಪನೆ ಮಾಡಿಕೊಂಡಿದ್ದೆ ಎಂದು ಖ್ಯಾತ ಬಿದರಿ ಕಲಾವಿದ ಪದ್ಮಶ್ರೀ ವಿಜೇತ ಶಾ ರಶೀದ ಹೇಳಿದರು.ರಾಜ್ಯ...
ಸುದ್ದಿಗಳು
ಗಾಳಿಯಲ್ಲಿ ಗುಂಡು ಹಾರಿಸಿ ಜಾತ್ರೆಗೆ ಚಾಲನೆ ನೀಡಿದ ಸ್ವಾಮೀಜಿ
ಬೀದರ: ಗಾಳಿಯಲ್ಲಿ ಗುಂಡು ಹಾರಿಸಿ ವಿಚಿತ್ರ ರೀತಿಯಲ್ಲಿ ಬಸವತೀರ್ಥ ಮಠದ ಜಾತ್ರಾಮಹೋತ್ಸವಕ್ಕೆ ಬಸವತೀರ್ಥ ಮಠದ ಡಾ. ಸಿದ್ಧಲಿಂಗ ಮಹಾಸ್ವಾಮೀಜಿ ಚಾಲನೆ ನೀಡಿದ ಘಟನೆ ನಡೆದಿದೆ.ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಬಸವತೀರ್ಥ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲು ಗಾಳಿಯಲ್ಲಿ ಗುಂಡು ಹಾರಿಸಿದರು.ಚಾಲನೆಗೆ ಗಾಳಿಯಲ್ಲಿ ಗುಂಡು ಹಾರಿಸಲು ಅವಕಾಶ ಇದೆಯಾ...?ಪಿಸ್ತೂಲ್...
ಸುದ್ದಿಗಳು
ಭಾಲ್ಕಿ ಜನರ ಮಾನ ತೆಗೆದ ಈಶ್ವರ ಖಂಡ್ರೆ- ಪ್ರಕಾಶ ಖಂಡ್ರೆ ಆಕ್ರೋಶ
ಬೀದರ- ಸದನದಲ್ಲಿ ಭಾಲ್ಕಿ ಜನತೆಯ ಮಾನ ಹರಾಜು ಹಾಕಿದ್ದಾರೆ ಎಂದು ರಾಜ್ಯ ಕೆಪಿಸಿಸಿ ರಾಜ್ಯ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಚಿತ್ರದ ಕೊರಳಿಗೆ ಚಪ್ಪಲಿ ಹಾರ ಹಾಕಿ ಪ್ರಕಾಶ ಖಂಡ್ರೆ ಪ್ರತಿಭಟನೆ ಮಾಡಿದರು.ಸದನದಲ್ಲಿ ಈಶ್ವರ ಖಂಡ್ರೆ ಕಾಲ ಹರಣ ಮಾಡಿದ್ದಲ್ಲದೆ ಸ್ಪೀಕರ್ ಅವರಿಂದ ಹೊರಗೆ ಹಾಕಿಸಿಕೊಳ್ಳುವ ಮಾತು ಬರುವಂತೆ ಮಾಡಿದ ಈಶ್ವರ ಖಂಡ್ರೆಯವರಿಂದಾಗಿ ಭಾಲ್ಕಿ ಜನತೆಯ...
ಸುದ್ದಿಗಳು
ಸಾಹಿತಿ ಡಾ.ಭೇರ್ಯ ರಾಮಕುಮಾರ್ ಗೆ ಸನ್ಮಾನ
ಮೈಸೂರು ಜಿಲ್ಲೆ ಸಾಲಿಗ್ರಾಮದ ಸಾ.ರಾ.ವಿದ್ಯಾ ಸಂಸ್ಥೆಯಲ್ಲಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು ಹಾಗೂ ಡಾ.ರಾಜಕುಮಾರ್ ವೇದಿಕೆಗಳ ವತಿಯಿಂದ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅವರನ್ನು ಕನ್ನಡ ನಾಡು-ನುಡಿ ಸೇವೆಗಾಗಿ ಸನ್ಮಾನಿಸಲಾಯಿತು.ಸಾ.ರಾ. ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಸಾ.ರಾ. ರವೀಶ್,...
ಸುದ್ದಿಗಳು
ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಕ್ರೀಡಾ ಹಬ್ಬ ಆಯೋಜನೆ
ಬೈಲಹೊಂಗಲ: ತಾಲೂಕಿನ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2022-23 ನೆಯ ಸಾಲಿನ ಕ್ರೀಡಾ ಹಬ್ಬ ಹಮ್ಮಿಕೊಳ್ಳಲಾಗಿತ್ತು.ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಕ್ರೀಡೆಗಳು ಬದುಕಿನ ಉತ್ಸಾಹವನ್ನು ಹೆಚ್ಚಿಸುವುದಲ್ಲದೇ ಉತ್ತಮ ಆರೋಗ್ಯ ಕಾಪಾಡಲು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.ಮನರಂಜನೆಯ ಜೊತೆಗೆ ಶಿಸ್ತು, ಸಂಯಮದ ಗುಣಗಳನ್ನು ಬೆಳೆಸಿ ವ್ಯಕ್ತಿತ್ವ ರೂಪಿಸುವಲ್ಲಿ ಕ್ರೀಡೆಗಳ ಪಾತ್ರ ಹಿರಿದು ಎಂದು ಅವರು...
ಸುದ್ದಿಗಳು
ಕಮಲ ಬಿಟ್ಟು ತೆನೆ ಹಿಡಿದ ಖೂಬಾ
ಬೀದರ: ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾರಣದಿಂದ ಬಸವಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತೆ ಜೆಡಿಎಸ್ ಪಕ್ಷದತ್ತ ವಾಲಿದ್ದಾರೆ.ಈ ಮುಂಚೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾತು ಕೇಳಿ ಬಿಜೆಪಿ ಸೇರಿದ್ದರು ಆದರೆ ಅಸಮಾಧಾನದಿಂದಾಗಿ ಕಮಲದ ಹೂವು ಕೆಳಗೆ ಇಳಿಸಿ ಜೆಡಿಎಸ್ ನ ತೆನೆ ಕಡೆ ಮುಖ ಮಾಡಿದ್ದಾರೆ.ಚನ್ನಪಟ್ಟಣಕ್ಕೆ ತೆರಳಿ ಜೆಡಿಎಸ್ ನಾಯಕ ಮಾಜಿ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...