Monthly Archives: June, 2025
ಕವನ
ಕವನ : ರಜಿಯಾ ಬಾನೋ
ರಜಿಯಾ ಬಾನೊ ರಜಿಯಾ ನನ್ನ ನಿನ್ನ
ಸ್ತ್ರೀ ಯಾಗಿ ಬಾಳುವ ಜೀವನ
ಒಂದೇ ಅಲ್ಲವೇ?
ನಾನು ತಿನಿಸುತ್ತೇನೆ ಭಕ್ಕರಿ ಗೋವಿಗೆ
ನೀನು ಫಕೀರನಿಗೆ
ನಮ್ಮ ತನವಕಳೆದು
ಪುರುಷನ ನಿತ್ಯಭೋಗಕ್ಕೆ
ಹೆರುವ ಹೆರಿಗೆನೋವು
ಇಬ್ಬರಿಗದೂ ಒಂದೇ
ಸಾಯುವಾಗ ನಿನಗೂ
ಕುಡಿಸುತ್ತಾರೆ, ಪವಿತ್ರ ಜಲ
ನನಗೂ ಗಂಗಾಜಲ
ನಿನ್ನ ಪಯಣ ಕಬರಸ್ತಾನಕೆ
ನನ್ನದು ಸ್ಮಶಾನಕೆ
ಈ ಎಲ್ಲಾ ಸಮಾನತೆಗಳಿದ್ದು
ವಿಷಮತೆ ಏಕೆ?
ಏಕೆ ಯುದ್ಧ? ಸಾಯುವರಾರು?
ನಿನ್ನ ಗಂಡ , ನನ್ನ ಮಗ
ನಾವೇ ತಬ್ಬಲಿ ಗಳು
ಸಾಕು ಏಳಿನ್ನು
ತೆಗೆದೊಗೆಯಬೇಕು ಸ್ತ್ರೀಗೆ
ಹೇರಿದ ಮುಖವಾಡ
ನಂದಿಸಬೇಕಿದೆ ಕೋಮುವಾದದ ಜ್ವಾಲೆ
ಒಗ್ಗಟ್ಟಿನಲ್ಲಿ...
ಸಂಪಾದಕೀಯ
ಶಿವಾಪೂರ (ಹ) ತೋಟದ ನಂ.೧ ಪ್ರಾಥಮಿಕ ಶಾಲೆಯ ವಿವಾದ ಬಗೆಹರಿಯುವುದು ಯಾವಾಗ ?
ಮೂಡಲಗಿ - ತಾಲೂಕಿನ ಶಿವಾಪೂರ (ಹ) ಗ್ರಾಮದ ತೋಟ ನಂ.೧ ಶಾಲೆಯ ಜಾಗ ಹಾಗೂ ಕಟ್ಟಡ ಕುರಿತಂತೆ ಜಾಗದ ಮಾಲೀಕರು ಹಾಗೂ ಶಿಕ್ಷಣ ಇಲಾಖೆಯ ನಡುವೆ ಹಗ್ಗ ಜಗ್ಗಾಟ ನಡೆದಿದ್ದು ಇದು ಯಾವಾಗ ಬಗೆಹರಿಯಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.ಜಾಗದ ಮಾಲೀಕರಾದ ಮಲ್ಲಪ್ಪ ಜುಂಜರವಾಡ ಅವರು ಹೇಳುವಂತೆ, ಶಿವಾಪೂರ ಸರ್ಕಾರಿ ಪ್ರಾಥಮಿಕ ಶಾಲೆ ತೋಟ...
ಸುದ್ದಿಗಳು
ಬಯಲಿನಲ್ಲಿ ಬೆಳೆವ ಹಸಿರು ಧ್ವನಿ: ಡಾ ಸಂತೋಷ ಪೂಜಾರ.
ಬಾಗಲಕೋಟೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ಕೆಲವರ ಸುದ್ದಿಸಮಾರಂಭಗಳು ಕಂಚಿನ ಕೊಠಡಿಗಳಲ್ಲಿ ನಡೆಯುತ್ತಿದ್ದರೆ, ಜಿಲ್ಲೆಯ ಇಳ್ಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ಒಂದು ವಿಶಿಷ್ಟ ದೃಶ್ಯ ಕಂಡುಬಂತು.ವರದಿಗಾರರ ಸಮೂಹವೊಂದು ತಮ್ಮ ಮೈಕ್ರೋಫೋನ್‌ಗಳನ್ನು ಹಿಡಿದು ನೈಸರ್ಗಿಕ ಹಸಿರು ಬಯಲಿನಲ್ಲಿ ನಿಂತು ಭೂಮಿಗೆ ನಮನ ಸಲ್ಲಿಸುತ್ತಿದ್ದರು—ಪಠ್ಯವನ್ನಷ್ಟೆ ಅಲ್ಲದೆ,ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ...
Uncategorized
ಕಲಿಯುಗದ ಹರನೇ, ಮರ..!
ಸುರನದಿ ಗಂಗೆಯನ್ನು ಭೂಲೋಕಕ್ಕೆ ತರಲು ಭಗೀರಥ ಪ್ರಯತ್ನ ಮಾಡುತ್ತಾನೆ. ಭೂಮಿಗೆ ಬರಲೊಪ್ಪದ ಗಂಗೆ, ತಾನು ಧುಮ್ಮಿಕ್ಕುವ ರಭಸದ ವೇಗಕ್ಕೆ ಭೂಮಿ ನುಚ್ಚು ನೂರಾಗುವ ಸಾಧ್ಯತೆಯನ್ನು ಭಗೀರಥನಿಗೆ ತಿಳಿಹೇಳುತ್ತಾಳೆ.ಛಲ ಬಿಡದ ಭಗೀರಥ ಹರನನ್ನು ಪ್ರಾರ್ಥಿಸಿ, ಹರ ತನ್ನ ಜಟೆ ಯಲ್ಲಿ ಸುರನದಿಯನ್ನು ತಡೆದು ಹನಿಹನಿಯಾಗಿ ಬಿಡುತ್ತಾನೆ. ಗಂಗಾಧರ ನಾಗುತ್ತಾನೆ..!ವ್ಯಥಿತಳಾದ ಗಂಗೆ ಶಿವನನ್ನು ಕುರಿತು ತಾನು ಕಲಿಯುಗದಲ್ಲಿ...
ಸುದ್ದಿಗಳು
ಎಸ್.ಎಸ್.ಎಲ್.ಸಿಯಲ್ಲಿ ರೂಪಾ ಪಾಟೀಲ ಅವರ ಸಾಧನೆ ತಾಲೂಕಿನ ಹೆಮ್ಮೆ : ಎನ್.ಆರ್. ಠಕ್ಕಾಯಿ
ಬೈಲಹೊಂಗಲ: 2025 ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತಾಲೂಕಿನ ದೇವಲಾಪೂರ ಗ್ರಾಮದ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ(ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿನಿ ರೂಪಾ ಚನಗೌಡ ಪಾಟೀಲ ಅವರ ಸಾಧನೆ ತಾಲೂಕಿನ ಹೆಮ್ಮೆ ಎಂದು ಕಸಾಪ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಪ್ರಶಂಸೆ ವ್ಯಕ್ತಪಡಿಸಿದರು.ಬೈಲಹೊಂಗಲ ಕನ್ನಡ ಸಾಹಿತ್ಯ...
ಕವನ
ಕವನ : ಕಪ್ ನಮ್ಮದೆ
ಕಪ್ ನಮ್ಮದೆನಿನ್ನೆ ಮೊನ್ನೆ ಮುಗಿದ
ಐ ಪಿ ಎಲ್ ಕ್ರಿಕೆಟ್ ಮ್ಯಾಚ್
ಕಪ್ ನಮ್ಮದೆ
ಕೂಗಾಡಿ ಕಿರುಚಾಡಿ
ಮೈದಾನದುದ್ದಕ್ಕೂ ಉರುಳಾಡಿ
ಮೋಸದ ಭಾಜಿಯ ಆಟ
ಹೂಡಿಕೆದಾರ ಕೈ ಗೊಂಬೆಗಳು
ನಮ್ಮ ಕ್ರಿಕೆಟ್ ಪಟುಗಳು
ಆರಂಭದಲ್ಲಿ ಇವರ ಹರಾಜು
ದುಡ್ಡಿಗಾಗಿ ಆಟ ಜೂಜಾಟ
ಕ್ರಿಕೆಟ್ ಎಂದರೆ ದೇಶ ಪ್ರೇಮ
ಇದು ಕೌರವ ಪಾಂಡವರ ಪಗಡೆ
ಕುತಂತ್ರ ಕುಟಿಲ ನೀತಿ
ಲಕ್ಷ ಕೋಟಿ ವಹಿವಾಟು
ಹರಿದು ಬರುವ ಜಾಹಿರಾತು
ಉದ್ಯಮಿ ಕಳ್ಳರು ಲೂಟಿಕೋರರು
ಜನರಿಗೆ ಉದ್ದೀಪನ ಮದ್ದು
ಜನ ಮರುಳೋ ಜಾತ್ರೆ...
ಲೇಖನ
ಕನಸಿನೆಡೆಗೆ ಕಾವ್ಯದ ಹೆಜ್ಜೆ ರೇಖಾ ಪ್ರಕಾಶ್
ಕವಯಿತ್ರಿ ಶ್ರೀಮತಿ ರೇಖಾ ಪ್ರಕಾಶ್ ಅವರ ಚೊಚ್ಚಲ ಕೃತಿ ಕನಸಿನೆಡೆಗೆ ಒಂದು ಹೆಜ್ಜೆ. ಇದೊಂದು ಕವನ ಸಂಕಲನ. ಇದರಲ್ಲಿ ಸರಿಸುಮಾರು 84 ಕವಿತೆಗಳಿವೆ. ಮೇಡಂ, ಮೊನ್ನೆ ಭಾನುವಾರ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಈ ಪುಸ್ತಕ ಕೊಟ್ಟರು. ಓದಿ ಏನಾದರೂ ಬರೆಯಿರಿ ಎಂದರು.ನಾನು ಬರೆಯುವುದನ್ನು 64ರ ಇಳಿ ವಯಸ್ಸಿನಲ್ಲೂ ಬಿಟ್ಟಿಲ್ಲ. ಬಾಲ್ಯದ ವಿದ್ಯಾರ್ಥಿ ದಿನಗಳಲ್ಲಿ...
ಸುದ್ದಿಗಳು
ಹಬ್ಬದ ನೆಪದಲ್ಲಿ ಗೋವಧೆ: ಗೋವುಗಳನ್ನು ರಕ್ಷಿಸಿದ ಶಾಸಕ ಶರಣು ಸಲಗರ
ಬೀದರ - ಬಕ್ರೀದ್ ಹಬ್ಬದ ನೆಪದಲ್ಲಿ ಜಿಲ್ಲೆಯಲ್ಲಿ ಅನಧಿಕೃತ ಗೋವು ಒಂಟೆಗಳ ಸಾಗಾಟ ಮತ್ತು ವಧೆ ಮಾಡುವುದನ್ನು ನಿಷೇಧಿಸಲಾಗಿದೆ ಎಂಬ ಜಿಲ್ಲಾಡಳಿತದ ಆದೇಶವಿದ್ದರೂ ಬಸವಕಲ್ಯಾಣದಲ್ಲಿ ಗೋವಧೆ ಮಾಡುತ್ತಿದ್ದವರ ಮನೆಗೆ ಹೋಗಿ ಬಿಜೆಪಿ ಶಾಸಕ ಶರಣು ಸಲಗರ ಗೋವಧೆ ಮಾಡದಂತೆ ಎಚ್ಚರಿಕೆ ನೀಡಿದರು.ಪೊಲೀಸರೊಂದಿಗೆ ಗೋ ಕಟುಕರ ಮನೆಗಳಿಗೆ ಹೋಗಿ ಗೋವಧೆಯನ್ನು ನಿಲ್ಲಿಸಿದ ಶಾಸಕರು, ನಾನು ಇರುವವರೆಗೂ...
ಸುದ್ದಿಗಳು
ಪರಿಸರ ಕಾಪಾಡಲು ಗಿಡ-ಮರ ಬೆಳೆಸಿ- ಬಿಇಓ ಯಡ್ರಾಮಿ
ಸಿಂದಗಿ: ಗಿಡ ಮರಗಳು ಪರಿಸರದ ಜೀವನಾಡಿಗಳು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದರು.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂಭಾಗ ಪರಿಸರ ದಿನಾಚರಣೆ ಮಾಡುವ ಮೂಲಕ ಮಾತನಾಡಿದ ಅವರು ಭೂಮಿ ತಾಯಿಯ ಒಡಲಲ್ಲಿ ಗಿಡ ಮರ ಬೆಳೆಸಿದರೆ ನಮಗೆ ಶುದ್ಧವಾದ ಗಾಳಿ, ಸಕಾಲಕ್ಕೆ ಮಳೆ ಬೆಳೆ ಹಾಗೂ ಪರಿಸರದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸಹಕಾರಿಯಾಗಿದ್ದು,...
ಸುದ್ದಿಗಳು
11 ಜನ ಅಭಿಮಾನಿಗಳ ಸಾವಿಗೆ ಸರ್ಕಾರದ ನಿರ್ಲಕ್ಷ್ಯವೆ ಕಾರಣ: ಶ್ರೀಶೈಲಗೌಡ
ಸಿಂದಗಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹತ್ತಿರ ನಡೆದ ಕಾಲ್ತುಳಿತದಲ್ಲಿ ಸುಮಾರು 11 ಜನ ಕ್ರಿಕೆಟ್ ಅಭಿಮಾನಿಗಳು ಮೃತಪಟ್ಟಿದ್ದು, ಇದಕ್ಕೆಲ್ಲ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದು ಸಿಂದಗಿ ವಿಧಾನ ಸಭಾ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರ ಕಿಡಿಕಾರಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಹಲ್ಗಾಂವನಲ್ಲಿ ನಡೆದ ದಾಳಿಯ ಕುರಿತು ಭದ್ರತೆ ವೈಫಲ್ಯ ಮತ್ತು...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



