ಸಿಂದಗಿ; ಲೋಕ ಅದಾಲತ್ ನಲ್ಲಿ ನಾಲ್ಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೬೬೬೭ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು ಅವುಗಳಲ್ಲಿ ಒಟ್ಟು ೪೩೯೩ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ನಾಗೇಶ ಮೊಗೇರ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಸಿಂದಗಿ ವತಿಯಿಂದ ಸಿಂದಗಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ಲೋಕ ಅದಾಲತನ್ನು ಉದ್ಘಾಟಿಸಿ ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ ಗಳು, ಮೆಂಟೇನೆನ್ಸ್ ಪ್ರಕರಣಗಳು , ಪಾಲು ವಾಟ್ನಿ ದಾವೆಗಳು, ಎಲ್ ಎ ಸಿ ಇಪಿ ಪ್ರಕರಣಗಳು , ಎಮ್ ವಿ ಸಿ, ಇ ಪಿ ಪ್ರಕರಣಗಳು , ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು ಮತ್ತು ಪೂರ್ವದಾವೆ. ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಹಾಗೂ ಬ್ಯಾಂಕಿನ ಪ್ರಕರಣಗಳು, ಒಟ್ಟು ೮೬೨ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಸದರಿ ಮೇಲ್ಕಾಣಿಸಿದ ಪ್ರಕರಣಗಳನ್ನು . ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಹರೀಶ ಜಾಧವ ಮತ್ತು ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರಾದ ಎ ಆರ್ ಎ ಮುಲ್ಲಾ ಗೌರವಾನ್ವಿತ ನ್ಯಾಯಾಧೀಶರು ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಿರುತ್ತಾರೆ.
ಸದರಿ ಲೋಕ ಅದಾಲತ್ ನಲ್ಲಿ ನ್ಯಾಯಾಂಗ ಸಂಧಾನಕಾರರಾಗಿ ಬಿ.ಎಸ್. ಪಾಟೀಲ, ಕೆ.ಎಸ್.ಬಿರಾದಾರ, ಜಿ ಎಲ್.ಕೆಳಗಿನಮನಿ ವಕೀಲರುಗಳು ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ಬಿ ಪಾಟೀಲ, ಅಪರ ಸರ್ಕಾರಿ ವಕೀಲರಾದ ಬಿ.ಜಿ.ನೆಲ್ಲಗಿ , ಸಹಾಯಕ ಅಭಿಯೋಜಕ ಆನಂದ ರಾಠೋಡ, ಕುಮಾರಿ ಎಫ್ ಝ ಖತೀಬ, ಕುಮಾರಿ ಎಮ್ ಎಸ್ ಗೊಳಸಂಗಿಮಠ, ನ್ಯಾಯವಾದಿಗಳಾದ ಆರ್. ಆಯ್ ಮೊಗಲಾಯಿ ಎ.ಕೆ. ಕನ್ನೂರ, ಎಸ್. ಎಸ್. ಸಿಂಗಾಡಿ ಆರ್. ಎಮ್ ಚೌರ, ಶಿರಸ್ತೇದಾರ ಸಿದ್ದಲಿಂಗ ಬಳೊಂದಾಗಿ, ನಜೀರ ಮಾಲಿಕಾರ ಎಲ್ಲ ನ್ಯಾಯವಾದಿಗಳು ನ್ಯಾಯಾಲಯದ ಎಲ್ಲ ಸಿಬ್ಬಂದಿಗಳು ಭಾಗವಹಿಸಿದ್ದರು .