spot_img
spot_img

ಅಪರೂಪದ ಶಿಕ್ಷಕ ಸಾಹಿತಿ ಶ್ರೀಮತಿ ಲೀಲಾ ರಾಜಪೂತ

Must Read

- Advertisement -

(ಸೃಜನಶೀಲ ಬರಹಗಾರ್ತಿ, ನಿರೂಪಕಿ,)

ಹಿನ್ನೆಲೆ

ಶ್ರೀಮತಿ ಲೀಲಾ ಅವರು ಬೆಳಗಾವಿ ಜಿಲ್ಲೆಯ ಹಿರಿಯ ಸಾಹಿತಿಗಳು.

- Advertisement -

ಶಿಕ್ಷಣ

B.A.B ed.

ಜನನ

- Advertisement -

26-01-1965

ಪತಿ

ಅಶೋಕ ರಜಪೂತ

(ನಿವೃತ್ತ ಸೈನ್ಯಾಧಿಕಾರಿಗಳು ಭಾರತೀಯ ನೌಕಾ ಪಡೆ)

ವೃತ್ತಿ

ಶಿಕ್ಷಕಿ.

ಲೇಖಕಿಯಾಗಿ

ತೊಟ್ಟಿಲು ತೂಗುವ ಕೈ ಲೇಖನಿಯನ್ನು ಹಿಡಿಯಬಲ್ಲದು ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿ ನಿಂತಿದ್ದಾರೆ. ಪತಿ ಮರಾಠಿಗರಾಗಿದ್ದರೂ ಕೂಡ ಪತ್ನಿಯ ಅಭಿರುಚಿಗೆ ಯಾವತ್ತೂ ತೊಂದರೆ ಮಾಡಿದವರಲ್ಲ.ಜೊತೆಯಲ್ಲಿ ನಿಂತು ಇವರ ಸಾಧನೆಗೆ ಕಾರಣವಾಗಿದ್ದಾರೆ.ನೂರಾರು ಪದ್ಯ, ಗದ್ಯಗಳು ಇವರ ಲೇಖನಿಯಿಂದ ಹೊರಬಂದಿವೆ.

ವಿಶೇಷತೆ

ಶ್ರೀಮತಿ ಲೀಲಾ ರಜಪೂತ್ ಅವರಿಗೆ ಹಾಡು, ನೃತ್ಯ, ನಿರೂಪಣೆ, ಓದು, ಬರಹ, ನೃತ್ಯ ಸಂಯೋಜನೆ, ಛದ್ಮವೇಷದಲ್ಲಿ ವಿಶೇಷ ಆಸಕ್ತಿ.ಅವರದು ಸಮಾಜಮುಖಿ ವ್ಯಕ್ತಿತ್ವ. ಶಿಕ್ಷಕಿಯಾಗಿ ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೇರಣೆ ಕೊಡುವುದರಲ್ಲಿ ಸಂತೋಷಪಡುತ್ತಾರೆ. ಯಾರೇ ಕಷ್ಟದಲ್ಲಿದ್ದರೂ ಅವರ ಸಹಾಯಕ್ಕೆ ಅವರು ತೋರುವ ಕಾಳಜಿ ಅಪರೂಪದ್ದು. ಮಕ್ಕಳಿಗೆ, ಸಮಾಜಕ್ಕೆ, ಅನೇಕ ರೀತಿಯಲ್ಲಿ ಧನಸಹಾಯ ಸಾಂಸ್ಕೃತಿಕ, ಕಾರ್ಯಕ್ರಮಗಳಲ್ಲಿ,ನಿರಂತರವಾಗಿ ಶಾಲಾ ಮಕ್ಕಳು, ಪ್ರಥಮ ಸ್ಥಾನ ಗಿಟ್ಟಿಸುತ್ತ ಬಂದಿರುವದು, ವಿಶೇಷ,ಯೋಗ ಶಿಕ್ಷಕಿಯಾದ ಲೀಲಾರವರು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಶಾಲಾಮಕ್ಕಳಿಗೆ ಯೋಗಾಸನ, ಪ್ರಾಣಾಯಾಮ ಅಭ್ಯಾಸ ಮಾಡಿಸಿದ್ದಾರೆ. ಪತಂಜಲಿ ಯೋಗ ಸಮಿತಿಯ ಮಹಿಳಾ ಪ್ರಭಾರಿಯಾದ ಇವರು ಅನೇಕ ಯೋಗ ಶಿಬಿರ ಗಳನ್ನು ನಡೆಸಿದ್ದಾರೆ. 

ಸಾಮಾಜಿಕ ಚಟುವಟಿಕೆಗಳು

ಶ್ರೀಮತಿ ಲೀಲಾ ಅವರು ಹುಕ್ಕೇರಿ ಜನಪದ ಪರಿಷತ್ತಿನ ನಿರ್ದೇಶಕಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯೆ. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಜೀವ ಸದಸ್ಯೆ, ಸಿದ್ಧಿವಿನಾಯಕ ಭಜನಾ ಮಂಡಳಿ ಸದಸ್ಯೆ..ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಉಪಾಧ್ಯಕ್ಷೆಯಾದ ಅವರು ಸೃಜನಶೀಲ ಬರಹಗಾರ್ತಿ; ಹಲವು ಪತ್ರಿಕೆಗಳಲ್ಲಿ ಲೇಖನ,ಕವನ,ಗಳನ್ನು ಪ್ರಕಟಿಸಿದ್ದಾರೆ.ಅಲ್ಲದೇ ಇವರ ಒಂದು ಕವನ ಸಂಕಲನ ಪ್ರಕಟಣಾ ಹಂತದಲ್ಲಿದೆ. 

ಚಲನಚಿತ್ರ ಕ್ಷೇತ್ರದಲ್ಲಿ ಸೇವೆ

ಶ್ರೀಮತಿ ಲೀಲಾ ಅವರು ಕರೋನಾಕ್ಕೆ ಸಂಬಂಧಿಸಿದಂತೆ ಸಮುದಾಯಕ್ಕೆ ಸಂದೇಶ ನೀಡುವ ಕಿರು ಫಿಲ್ಮ್ ʻದಯಾʼಕ್ಕೆ ಸಾಹಿತ್ಯ ರಚನೆ ಮಾಡಿದ್ದಾರೆ.

ಸಾಹಿತ್ಯಕ ಸಾಧನೆ

ಶ್ರೀಮತಿ ಲೀಲಾ ರಜಪೂತ ಇವರು ಹಿಂದಿ ಮತ್ತು ಕನ್ನಡ  ಎರಡು ಭಾಷೆಗಳಲ್ಲಿ ಬರೆಯುವ ಕೌಶಲ್ಯ  ಬೆಳೆಸಿಕೊಂಡಿದ್ದಾರೆ.

ಅವರ ಕೆಲವು ಸಾಹಿತ್ಯಕ  ರಚನೆಗಳು ಎರಡು ಭಾಷೆಗಳಲ್ಲಿ ಬಿತ್ತರಗೊಂಡಿವೆ. ಕತೆ,ಚುಟುಕು, ಹಾಯ್ಕು, ಕವನ, ಲೇಖನ, ಹೀಗೆ, ಅವರು ಸಾಹಿತ್ಯ ಸೇವೆ ನೀಡುತ್ತಿದ್ದು, ಸಾಮಾಜಿಕ ಸಂದೇಶ ನೀಡುವ ಇವರ ಕವನ ಓದುಗರಿಗೆ ತುಂಬಾ ಇಷ್ಟ. ಅನೇಕ ಕನ್ನಡಸಾಹಿತ್ಯ ಪರಿಷತ್ತುಗಳಲ್ಲಿ ಭಾಗವಹಿಸಿದ್ದಾರೆ

ಅವರು ಹುಕ್ಕೇರಿ, ಪಶ್ಚಾಪೂರ ಯರನಾಳ, ಹಾವೇರಿ, ಹಿರೇಬಾಗೇವಾಡಿ, ಹಿಡ್ಕಲ್‌ ಡ್ಯಾಮ್‌, ಯರನಾಳ, ಜಾಲಿಕೊಪ್ಪ, ಯರಗಟ್ಟಿ ಮುಂತಾದ ಸ್ಥಳಗಳಲ್ಲಿ ನಡೆದ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

ಗೌರವಗಳು

ಶ್ರೀಮತಿ ಲೀಲಾ ರಜಪೂತ್ ಅವರ, ಸಾಹಿತ್ಯಿಕ, ಶೈಕ್ಷಣಿಕ ಸೇವೆ ಗಾಗಿ ಬೆಳಗಾವಿಯ ಸದ್ಗುರು ಪ್ರತಿಷ್ಠಾನದ ವತಿಯಿಂದ ”ಸದ್ಗುರು ಕಾಯಕಶ್ರೀ” ಪ್ರಶಸ್ತಿ’ ಇತ್ತೀಚೆಗೆ ಪ್ರಾಪ್ತವಾಗಿದೆ.

ಉತ್ಸಾಹಿ , ಶ್ರೀಮತಿ ಲೀಲಾ ಅವರ ಕ್ರಿಯಾಶೀಲತೆಯಿಂದಾಗಿ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದಿವೆ. ಅವರಿಗೆ ಶಿಕ್ಷಣ ಇಲಾಖೆಯಿಂದ “ಜಿಲ್ಲಾ ಅತ್ಯುತ್ತಮ ಶಿಕ್ಷಕಿ, “ಅಲಕನಂದಾ ಪ್ರಶಸ್ತಿ” ( ರಾಜಸ್ಥಾನ), ರಾಷ್ಟ್ರ ಮಟ್ಟದ “ಗಡಿನಾಡು ಧ್ವನಿ ಕವಿಭೂಷಣ ಪ್ರಶಸ್ತಿ, “ಗುಲ್ ಮೊಹರ್‌ ಪ್ರಶಸ್ತಿ (ಹಿಂದಿ)ಸ್ವರ್ಣಾಭ ಪ್ರಶಸ್ತಿ..ಭರತಪುರ ರಾಜಸ್ಥಾನ ಪ್ರಶಸ್ತಿಗಳು ಸಂದಿವೆ. ರಾಜ್ಯಮಟ್ಟದ ಮಿತ್ರಕೂಟ ಕಲಾ ಸಾಂಸ್ಕೃತಿಕ ಪ್ರಶಸ್ತಿ, ಗುರುನಮನ ಪ್ರಶಸ್ತಿ (ಉ ಕನ್ನಡ ಜಿಲ್ಲೆ), ಸುಹಾನಾ ಕಾವ್ಯಾಲಯ ಪ್ರಶಸ್ತಿ, ಚಿತ್ರದುರ್ಗ, ಕರ್ನಾಟಕ ರಾಜ್ಯ ಪ್ರತಿಭಾ ಪರಿಷತ್ತಿನಿಂದ ಹೀಗೆ ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಶ್ರೀಮತಿ ಲೀಲಾವತಿ ಅಶೋಕ ಸಿಂಗ್‌ ರಜಪೂತ್‌ ಅವರದು ಸಂವೇದನಾಶೀಲ ಮತ್ತು ಆತ್ಮೀಯ ವ್ಯಕ್ತಿತ್ವ. ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆ ಅವರ ಹೆಗ್ಗುರುತು. ಜನಪರವಾದ ಕಾರ್ಯಕ್ರಮಗಳಲ್ಲಿ ಅವರು ಸದಾ ಮುಂದು. ಸದಾ ಲವಲವಿಕೆಯಿಂದ ಇರುವ ಅವರ ಸಂಘಟನಾ ಚಾತುರ್ಯ ಮೆಚ್ಚತಕ್ಕದ್ದು.  ಅವರ ಮಾತು,ಮತ್ತು ಅವರ ವ್ಯಕ್ತಿತ್ವ ಎಲ್ಲರಿಗೂ ಅಚ್ಚುಮೆಚ್ಚು.

ಶಿಕ್ಷಕ ವೃತ್ತಿ ಯನ್ನು ಅತಿಯಾಗಿ ಪ್ರೀತಿಸುವ ಇವರು, ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನಾನು ಭಾಗ್ಯವಂತೆ. ಗಂಟುಮುಖಹಾಕದೇ, ವಯಕ್ತಿಕ ಸಮಸ್ಯೆಗಳೇನಿದ್ದರೂ ಅವುಗಳನ್ನು ಹೊರಗೆ ಬಿಟ್ಟು ನಗುನಗುತ್ತಾ,ಪ್ರೀತಿ,ಮಮತೆ ತೋರಿ ಮಕ್ಕಳಿಗೆ ನಾಲ್ಕು ಅಕ್ಷರ ಕಲಿಸಿದ್ದಾದರೆ ಮಕ್ಕಳು ನಮ್ಮನ್ನು ಎಂದು ಮರೆಯುವದಿಲ್ಲ. ಹೆತ್ತ ಮಕ್ಕಳಗಿಂತಲೂ,ನಮ್ಮ ಶಾಲೆಯ ಮಕ್ಕಳು ನಮಗೆ ಪ್ರೀತಿ ನೀಡುತ್ತಾರೆ ಅನ್ನ ನೀಡುತ್ತಾರೆ, ಎನ್ನುವ ಅಂಶ ನಾವು ಶಿಕ್ಷಕರಾದವರು ಮರೆಯಬಾರದು, ಎಂದು ಮನದುಂಬಿ ಶಿಕ್ಷಕಿ ಲೀಲಾ ಅವರು ಹೇಳುತ್ತಾರೆ … 

ಸಮಾಜ ನಮಗೇನು ನೀಡಿತು ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಮಾಡಿದೆವೆನ್ನುವ ವಿಚಾರ ಮುಖ್ಯ ಎಂಬ ಧೋರಣೆಯ ಲೀಲಾ ರವರು ಕರೋನಾ ಸಮಯದಲ್ಲಿ ಹಾಗೂ ಪ್ರವಾಹ ಸಮಯದಲ್ಲಿ ತಮ್ಮ ಅಳಿಲುಸೇವೆ ಯನ್ನು ಮಾಡಿದ್ದಾರೆ.

ಅಪರೂಪದ ಶಿಕ್ಷಕಿ

ಇವತ್ತು ತನ್ನ ವೃತ್ತಿ ಜೀವನ ಯಾವಾಗ ಮುಗಿಯುತ್ತೋ ಅನ್ನೋ ಅವಸರ, ಧಾವಂತ. ಆದರೆ ಈ ಲೀಲಾವತಿ ಅನ್ನುವ ಶಿಕ್ಷಕಿ ತಾನು ಕಲಿಸಿದ ಕೊನೆಯ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂಪಾಯಿಯಂತೆ ಅವರ ವೈಯಕ್ತಿಕ ಖಾತೆಗೆ ಹಣ ಸಂದಾಯ ಮಾಡಿ ವಿದ್ಯಾರ್ಥಿಗಳ ಮುಂದಿನ ದಿನಗಳಲ್ಲಿ ಅವರ ಶಿಕ್ಷಣಕ್ಕೆ ಕಾರಣರಾಗಿದ್ದಾರೆ.

ಜೊತೆಗೆ ತಮ್ಮ ವೃತ್ತಿ ಜೀವನ ಇದೇ ಜನವರಿ 26-01-2024 ಕ್ಕೆ ತಮ್ಮ ವೃತ್ತಿ ಜೀವನ ಮುಗಿಸಿದ್ದರೂ ಕೂಡ ಈ ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ.ಇಂತಹ ಶಿಕ್ಷಕಿ ಸಿಗುವುದು ಅಪರೂಪ.ಇಂತಹ ಶಿಕ್ಷಕಿ‌ ನಮ್ಮ ಶಿಕ್ಷಣ ಇಲಾಖೆಗೆ ಸಿಕ್ಕಿರುವುದೂ ಒಂದು ಭಾಗ್ಯ. ಎಲ್ಲಕ್ಕಿಂತ ಮಿಗಿಲಾಗಿ ಹುಕ್ಕೇರಿ ತಾಲೂಕಿನ ಹಣಜ್ಯಾನಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತುಂಬಾ ಭಾಗ್ಯವಂತರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಒಬ್ಬ ಶಿಕ್ಷಕಿಯನ್ನು ಪಡೆದ ನಮ್ಮ ಶಿಕ್ಷಣ ಇಲಾಖೆ ಧನ್ಯ. ಹಾಗೂ ಈ ಶಿಕ್ಷಕಿಯನ್ನು ಪಡೆದ ಆ ಮಕ್ಕಳು ಧನ್ಯ.

ಶಾಲಾ ದೇಣಿಗೆ

ತಾವು ಕಲಿಸಿದ  ಕನ್ನಡ ಗಂಡು ಮಕ್ಕಳ ಶಾಲೆ ಗಾಂಧೀ ನಗರ ಹುಕ್ಕೇರಿ ಈ ಶಾಲೆಗೆ 10000 ರೂಪಾಯಿ ದೇಣಿಗೆ ನೀಡಿದ್ಸಾರೆ.

ವಿದ್ಯಾರ್ಥಿಗಳ ಕಣ್ಮಣಿ:

ಶ್ರೀಮತಿ ಲೀಲಾವತಿ ರಜಪೂತ ತಾವು ಸೇವೆ ಸಲ್ಲಿಸಿದ ಕೊನೆಯ ಶಾಲೆಯ ತಮ್ಮ ತರಗತಿಯ ಮಕ್ಕಳಿಗೆ ತಲಾ ಒಂದು ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ಜಮಾ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಭರವಸೆ ನೀಡುವ ಮೂಲಕ ತಮ್ಮ ವಿದ್ಯಾಭ್ಯಾಸ ಮುಂದುವರೆಸಲು ಧನಸಹಾಯ ಮಾಡಿದ್ದಾರೆ.ರಜಪೂತ್‌ ಅವರ ಸಕಾರಾತ್ಮಕ ವಿಚಾರ ಧೋರಣೆ,ಹೊಂದಿದ ಇವರ ಕ್ರಿಯಾಶೀಲ ಚಟುವಟಿಕೆಗಳು, ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ, ಹೀಗೆ, ಸಮಾಜಮುಖಿ ಸೇವೆ ಮಾಡುತ್ತಿರುವ ಇವರ ಕಾರ್ಯ ಪಯಣ ಹೀಗೆ ಸಾಗಲಿ ಮತ್ತು ಸಾಹಿತ್ಯ ಬರಹಗಳ ಕೊಡುಗೆ ಸಮಾಜಕ್ಕೆ ದೊರೆಯಲಿ.ಅವರಿಗೆ ಶುಭವಾಗಲಿ, ಎಂದು ಹಾರೈಸೋಣ.


ಇಂಗಳಗಿ ದಾವಲಮಲೀಕ

ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group