spot_img
spot_img

ಷಷ್ಠ್ಯಬ್ದಿ – ಸತ್ಕಾರ

Must Read

- Advertisement -

ಬೆಳಗಾವಿ – ದಿ  27.05.2024 ರಂದು ಡಾ. ಪ.ಗು ಹಳಕಟ್ಟಿ ಭವನ ಮಹಾಂತೇಶ ನಗರದಲ್ಲಿ ಷಷ್ಟ್ಯಬ್ದಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಗಂದಿಗವಾಡದ ರಾಜಗುರು ಪೀಠದ ಪರಂಪರೆಯಲ್ಲಿ ಬಂದಿರುವ ಮೃತ್ಯುಂಜಯ ಹಿರೇಮಠ ಇವರು ವಿವಿಧ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ 60 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಅವರನ್ನು ಸತ್ಕರಿಸಲಾಯಿತು.

ಸಮಾರಂಭದಲ್ಲಿ ಹಿರೇಮಠ ಅವರು  ತಮ್ಮ ಅನುಭವಗಳನ್ನು ಹಂಚಿಕೊಂಡರು ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣವು ಬದಲಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಮುಂದೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಈ ಸತ್ಕಾರವನ್ನು ನೆರವೇರಿಸಿದವರನ್ನು ನಾನೆಂದಿಗೂ ಮರೆಯಲಾರೆನು ಎಂದು ಹೇಳಿದರು.

- Advertisement -

ಈ ಸತ್ಕಾರ ಸಮಾರಂಭದಲ್ಲಿ ಅಶೋಕ ಉಳ್ಳೆಗಡ್ಡಿ ಸ.ರಾ. ಸುಳಕೂಡೆ, ಎಂ ವಾಯ್ ಮೆಣಸಿನಕಾಯಿ, ಬಿ ಜಿ ಪಾಟೀಲ್ ಶಿಕ್ಷಕ ಮರ್ಲಕ್ಕನವರ್, ಡಾ. ಸುನೀಲ ಪರೀಟ,ಸುಮನ್ ಪರೀಟ್ ಮುಂತಾದವರು  ಭಾಗವಹಿಸಿದ್ದರು.

ಗುರುಗಳಾದ ಮೃತ್ಯುಂಜಯ ಹಿರೇಮಠ ಸಾರ್ಥಕ ಸೇವೆಯನ್ನು ಹಾರ್ದಿಕವಾಗಿ ನೆನಪಿಸಿಕೊಂಡು ಅಭಿನಂದಿಸಲಾಯಿತು. ಈ ಸಮಾರಂಭವು ತನ್ಮಯ ಚಿಂತನ ಚಾವಡಿ, ರಾಮತೀರ್ಥ್ ನಗರ್, ಬೆಳಗಾವಿ ಇವರಿಂದ ಹಮ್ಮಿಕೊಳ್ಳಲಾಗಿತ್ತು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group