ಸತೀಶ ಶುಗರ‍್ಸದಲ್ಲಿ ೭೩ನೇ ಗಣರಾಜ್ಯೋತ್ಸವ, ಪ್ರಗತಿಪರ ರೈತರಿಗೆ ಸನ್ಮಾನ

Must Read

ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಹತ್ತಿರದ ಸತೀಶ ಶುಗರ‍್ಸ ಕಾರ್ಖಾನೆಯಲ್ಲಿ ಬುಧವಾರ ಜರುಗಿದ ೭೩ನೇ ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಅತಿ ಹೆಚ್ಚು ಕಬ್ಬು ಪೂರೈಸಿದ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಖಾನೆಯಲ್ಲಿನ ೭೩ನೇಯ ಗಣರಾಜ್ಯೋತ್ಸವ ಧ್ವಜಾರೋಹಣ ನೇರವೇರಿಸಿದ ಪ್ರಗತಿಪರ ರೈತರಾದ ಬಡಿಗವಾಡದ ಪರಸಪ್ಪಾ ಯಲ್ಲಪ್ಪಾ ಕುಡ್ಡಗೋಳ ಮತ್ತು ಮಕ್ಕಳಗೇರಿಯ .ನಾಗರಾಜ ತುಕಾರಾಮ ಕಾಗಲ ಸತ್ಕರಿಸಿ ಗೌರವಿಸಿದರು.

ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಪಿ.ಡಿ.ಹಿರೇಮಠ ಮಾತನಾಡಿ, ಕಳೆದ ಕೆಲವು ವಾರಗಳಲ್ಲಿ ಕೊರೋನ ವೈರಸ್ ಓಮಿಕ್ರಾನ್ ಹೊಸ ರೂಪಾಂತರ ಪ್ರಕರಣಗಳು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ೭೩ನೇ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು ಎಂದರು.

ಇನ್ನೋರ್ವ ಕಾರ್ಖಾನೆಯ ಉಪಾಧ್ಯಕ್ಷ ವಿ.ಎಮ್.ತಳವಾರ ಮಾತನಾಡಿ, ಭಾರತ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾರ್ಖಾನೆಯ ಅಧಿಕಾರಿಗಳಾದ ಹಣಕಾಸು ಅಧಿಕಾರಿ ಡಿ.ಆರ್.ಪವಾರ, ಮಾನವ ಸಂಪನ್ಮೂಲ ಅಧಿಕಾರಿ ಅಶೋಕ ಅಲಕರಣಿ, ಕಬ್ಬು ಅಭಿವೃದ್ಧಿ ವಿಭಾಗ ಅಧಿಕಾರಿ ಮಲ್ಲಿಕಾರ್ಜುನ ಸಸಾಲಟ್ಟಿ, ಸುಭಾಸ ಕೊಟಗಿ ಮತ್ತು ವಿವಿಧ ವಿಭಾಗದ ಅಧಿಕಾರಿಗಳು ಹಾಗೂ ಕಾರ್ಮಿಕ ಸಿಬ್ಬಂದಿಯವರು ಮತ್ತು ರೈತಬಾಂಧವರು ಉಪಸ್ಥಿತರಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group