ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ೯೯ನೇ ಅನ್ನದಾಸೋಹ

Must Read

ಅನ್ನದಾನವು ಶ್ರೇಷ್ಠ ದಾನವಾಗಿದೆ’

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ ೯೯ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.

ಲಯನ್ಸ್ ಪರಿವಾರ ಅಧ್ಯಕ್ಷ ಸಂಜಯ ಮೋಕಾಶಿ ಮಾತನಾಡಿ ‘ಅನ್ನದಾನವು ಶ್ರೇಷ್ಠ ದಾನವಾಗಿದ್ದು ಲಯನ್ಸ್ ಕ್ಲಬ್‌ದಿಂದ ಕಳೆದ ಹಲವು ವರ್ಷಗಳಿಂದ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಅನ್ನದಾನ ಸೇವೆಯನ್ನು ಸಲ್ಲಿಸುತ್ತಿರುವೆವು’ ಎಂದರು.

ಲಯನ್ಸ್ ಪರಿವಾರದ ಖಜಾಂಚಿ ಕೃಷ್ಣಾ ಕೆಂಪಸತ್ತಿ ಅವರು ತಮ್ಮ ಚಿರಂಜೀವ ವಿಜಯನ ಹುಟ್ಟು ಹಬ್ಬವನ್ನು ರೋಗಿಗಳಿಗೆ ದಾಸೋಹ ಸೇವೆ ಮಾಡುವ ಮೂಲಕ ಆಚರಿಸಿದರು.

ಸಮುದಾಯ ಆರೋಗ್ಯ ಕೇಂದ್ರದ ಶಿವಲಿಂಗ ಪಾಟೀಲ ಅವರು ಅನ್ನದಾಸೋಹ ಸೇವೆಗೆ ಚಾಲನೆ ನೀಡಿದರು.
ವೆಂಕಟೇಶ ಸೋನವಾಲಕರ, ನಿಂಗಪ್ಪ ಫೀರೋಜಿ, ಮಹಾವೀರ ಸಲ್ಲಾಗೋಳ, ಅಪ್ಪಣ್ಣ ಬಡಿಗೇರ ಭಾಗವಹಿಸಿದ್ದರು.
೩೫೦ಕ್ಕೂ ಅಧಿಕ ಸಂಖ್ಯೆಯಲ್ಲಿ ಅನ್ನದಾಸೋಹದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಒಳ, ಹೊರ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ಭಾಗವಹಿಸಿದ್ದರು. ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ನಿರೂಪಿಸಿದರು.

Latest News

ಡಿ.೨೪ರಂದು ಡಾ.ಅನೀಲ ಕಾಕೋಡ್ಕರ್ ಅವರಿಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸಿಂದಗಿ: ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ ಕೊಡ ಮಾಡುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪದ್ಮವಿಭೂಷಣ ಭಾರತೀಯ ಪರಮಾಣು ವಿಜ್ಞಾನಿ ಡಾ.ಅನೀಲ ಕಾಕೋಡ್ಕರ್ ಅವರಿಗೆ...

More Articles Like This

error: Content is protected !!
Join WhatsApp Group