ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದಲ್ಲಿ ಶ್ರೀ ವಿಜಯಲಕ್ಷ್ಮಿ ಸೊಸಾಯಿಟಿ ಲಿ;ಗುರ್ಲಾಪೂರ ಇದರ ಪ್ರಾರಂಭೋತ್ಸವವು ಬುಧವಾರ ದಿನಾಂಕ-16 ರಂದು
ಮುಂಜಾನೆ.10.ಗಂಟೆಗೆ ಗ್ರಾಮದ ಡುಮ್ಮಾಳಿ ಕಾಂಪ್ಲೇಕ್ಸದಲ್ಲಿ ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ಮಹಾಸರಸ್ವತಿ ಪೂಜೆಯೊಂದಿಗೆ ಪ್ರಾರಂಭೋತ್ಸವ ನಡೆಯಲಿದೆ.
ಸೊಸಾಯಿಟಿಯ ಉದ್ಟಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿಗಳು ಪೀಠಾಧಿಪತಿಗಳು ಸಿದ್ಧ ಸಂಸ್ಥಾನ ಮಠ
ಮೂಡಲಗಿ, ಶ್ರೀಮ.ನಿ.ಪ್ರ.ಸ್ವ. ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಜಡಿಸಿದ್ದೇಶ್ವರ ಮಠ ಸುಣಧೋಳಿ, ಪ ಪೂ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ
ಮೈಲಾರಲಿಂಗೇಶ್ವರ ದೇವಸ್ಥಾನ ಶ್ರೀ ಸಿದ್ದೇಶ್ವರ ಆಶ್ರಮ ಇಟನಾಳ ಇವರು ವಹಿಸಲಿದ್ದಾರೆ.
ಸಾನ್ನಿಧ್ಯವನ್ನು ಗ್ರಾಮದ ಶ್ರಿಗಳಾದ ವೇ,ಮೂ.ಶ್ರೀ ಈರಯ್ಯಾ ಹಿರೇಮಠ, ಶ್ರೀ ಬಸಯ್ಯಾ ಮೊಜನಿದಾರ, ಶ್ರೀ ಶಿವರುದ್ರಯ್ಯ ಹಿರೇಮಠ, ಶ್ರೀ ಶಿವಾನಂದ ಹಿರೇಮಠ ವಹಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿಜಯಲಕ್ಷ್ಮಿ ಅರ್ಬನ್ ಕೋ-ಆಪರೇಟಿವ ಸೊಸೈಟಿ ಅಧ್ಯಕ್ಷರಾದ ಡಾ.ಪರುತಯ್ಯ ಹಿರೇಮಠ ವಹಿಸಲಿದ್ದಾರೆ. ಸಭೆಯಲ್ಲಿ
ಶಿವಬಸು ಭಿ ಕದಮ ಪುಂಡಲೀಕ ಗೌರಾಣಿ ಮಲ್ಲಪ್ಪ ಮುಗಳಖೊಡ, ಮಲ್ಲಪ್ಪ ಮುತ್ತಪ್ಪಗೋಳ, ಮಡಿವಾಳಪ್ಪ ನೇಮಗೌಡರ, ಚಂದು ಜಂಡೆಕುರಬರ, ಪೂಜಾ
ಮೋಜನಿದಾರ, ಗೀತಾ ಪಾದಗಟ್ಟಿ, ಸಂಜು ಹಳ್ಳೂರ ನಾಗೇಂದ್ರ ಗೌರಾಣಿ,ವಿಠ್ಠಲ ಮಾಂಗ, ಪರುಶರಾಮ ನಾಯಿಕ ಹಾಗು ಶೇರುದಾರರು ಠೇವುದಾರರು ಗ್ರಾಮದ
ಗುರುಹಿರಿಯರು ಆಗಮಸಲಿದ್ದಾರೆ ಎಂದು ಸೊಸೈಟಿಯ ಮುಖ್ಯ ಕಾರ್ಯನಿವಾಹಕರಾದ ಮಂಜುನಾಥ ಶಂ ಮುಗಳಖೋಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.