spot_img
spot_img

Bigg Boss Kannada: ಎಲಿಮಿನೇಟ್ ಆದ ಸದಸ್ಯನೇ ಬೇರೆ ಮನೆಯಿಂದ ಹೊರ ಬಂದವರೇ ಬೇರೆ

Must Read

- Advertisement -

ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲಿಮಿನೇಷನ್ ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯೇ ಬೇರೆ.. ಆದರೆ ಮನೆಯಿಂದ ಹೊರ ಬಂದ ಸ್ಪರ್ಧಿಯೇ ಬೇರೆಯಾಗಿದ್ದಾರೆ.. ಹೌದು ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಆರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮನೆಯಿಂದ ಒಬ್ಬ ಸ್ಪರ್ಧಿ ಹೊರ ಬಂದಿದ್ದಾರೆ.. ಆದರೆ ಎಲಿಮಿನೇಷನ್ ನಲ್ಲಿ ಎಲ್ಲರಿಗೂ ಆಶ್ಚರ್ಯವಾಗುವಂತಹ ಘಟನೆಯೊಂದು ನಡೆದಿದೆ..

ಹೌದು ಬಿಗ್ ಬಾಸ್ ಆರನೇ ವಾರ ಮನೆಯಿಂದ ಹೊರ ಹೋಗಲು ಒಟ್ಟು ಏಳು ಮಂದಿ ನಾಮಿನೇಟ್ ಆಗಿದ್ದರು.. ಶುಭಾ ಪೂಂಜಾ.. ದಿವ್ಯಾ ಸುರೇಶ್.. ನಿಧಿ ಸುಬ್ಬಯ್ಯ.. ಅರವಿಂದ್.. ಪ್ರಶಾಂತ್.. ಶಮಂತ್.. ಹಾಗೂ ರಾಜೀವ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು.. ಎಂದಿನಂತೆ ವೋಟಿಂಗ್ ಪ್ರಕ್ರಿಯೆಯೂ ನಡೆಯಿತು.. ಜನರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಕೂಡ ಮಾಡಿದರು.

ವೋಟಿಂಗ್ ಆಧಾರದ ಮನೆಯಲ್ಲಿ ರಾಜೀವ್ ಪ್ರಶಾಂತ್ ಅರವಿಂದ್ ಶುಭಾ ಪೂಂಜಾ ದಿವ್ಯಾ ಸುರೇಶ್ ನಿಧಿ ಸುಬ್ಬಯ್ಯ ಸೇಫ್ ಆದರೆ ಶಮಂತ್ ಮನೆಯಿಂದ ಎಲಿಮಿನೇಟ್ ಆದರು.. ಆದರೆ ಕೊನೆ ಘಳಿಗೆಯಲ್ಲಿ ಅಲ್ಲಿ ಬೇರೆಯೇ ನಡೆದಿದೆ.. ಹೌದು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಆಯ್ಕೆಯಾದ ವ್ಯಕ್ತಿ ಶಮಂತ್ ಗೌಡ ಅವರೇ ಆಗಿದ್ದರು.. ಸುದೀಪ್ ಅವರು ಸಹ ಎಂದಿನ ರೀತಿಯಲ್ಲಿ ಶಮಂತ್ ಅವರು ಕಡಿಮೆ ವೋಟ್ ಪಡೆದ ಕಾರಣ ಮನೆಯಿಂದ ಹೊರ ಹೋಗುವ ವಿಚಾರವನ್ನು ತಿಳಿಸಿದರು..

- Advertisement -

ಆದರೆ ಆ ಸಮಯದಲ್ಲಿ ಮತ್ತೊಬ್ಬ ಸ್ಪರ್ಧಿ ತಾನೇ ಮನೆಯಿಂದ ಹೊರ ಹೋಗುವೆ ಎಂದಿದ್ದು ಶಮಂತ್ ಬಿಗ್ ಬಾಸ್ ಮನೆಯಲ್ಲಿಯೇ ಉಳಿಯಲು ಸೇಫ್ ಆಗಿದ್ದಾರೆ.. ಹೌದು ಈ ರೀತಿ ಬಿಗ್ ಬಾಸ್ ಅವಕಾಶವನ್ನು ಬೇಡವೆಂದು ಮನೆಯಿಂದ ಹೊರ ಹೋಗಲು ನಿರ್ಧಾರ ಮಾಡಿದ್ದು ಮತ್ಯಾರೂ ಅಲ್ಲ ವೈಜಯಂತಿ ಅಡಿಗ.. ಹೌದು ಕಳೆದ ಎರಡು ದಿನಗಳ ಹಿಂದಷ್ಟೇ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದ ಸ್ಪರ್ಧಿ ವೈಜಯಂತಿ ಅಡಿಗ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ತೀರ್ಮಾನ ಮಾಡಿದ್ದಾರೆ..

ಶಮಂತ್ ಬದಲಾಗಿ ತಾನು ಮನೆಯಿಂದ ಹೊರ ಹೋಗುವ ವಿಚಾರವನ್ನು ಸುದೀಪ್ ಅವರಿಗೆ ತಿಳಿಸಿದ್ದಾರೆ.. ಇನ್ನು ಬಿಗ್ ಬಾಸ್ ಮನೆಯಲ್ಲಿಯೇ ಇನ್ನಷ್ಟು ದಿನ ಉಳಿದುಕೊಳ್ಳಲು ನಾನಾ ರೀತಿಯ ಪ್ರಯತ್ನ ಮಾಡುವವರ ನಡುವೆ ವೈಜಯಂತಿ ತೆಗೆದುಕೊಂಡ ತೀರ್ಮಾನ ಮನೆಯ ಇತರ ಸದಸ್ಯರಲ್ಲಿ ಆಶ್ಚರ್ಯ ಮೂಡಿಸಿದೆ..

Bigg Boss Kannada
Bigg Boss Kannada

ಇನ್ನು ಬಲ್ಲ ಮೂಲಗಳ ಪ್ರಕಾರ ವೈಜಯಂತಿ ಅವರ ಈ ನಿರ್ಧಾರಕ್ಕೆ ಸುದೀಪ್ ಅವರು ಸಹ ಒಪ್ಪಿದ್ದು ಶಮಂತ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ.. ಅತ್ತ ವೈಜಯಂತಿ ಅಡಿಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿದ್ದು.. ಇದು ಶಮಂತ್ ಅವರ ಅದೃಷ್ಟ ಎನ್ನಬಹುದು.. ಕಳೆದ ವಾರದಿಂದ ಓಪನ್ ಅಪ್ ಆಗುತ್ತಿರುವ ಶಮಂತ್ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಮತ್ತಷ್ಟು ದಿನ ಬಿಗ್ ಬಾಸ್ ನಲ್ಲಿ ಉಳಿಯಬಹುದಾಗಿದೆ.. ಒಟ್ಟಿನಲ್ಲಿ‌ ಯಾರು ಉಳಿದರು ಯಾರು ಹೋದರು ಎಂಬ ಲೆಕ್ಕಾಚಾರಕ್ಕೆ ಇಂದಿನ ಸಂಚಿಕೆಯಲ್ಲಿ‌ ತೆರೆ ಬೀಳಲಿದೆ..

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group