ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಕೋರೋನಾ ಹಾಹಾಕಾರ. ಕೊರೋನಾ ಎರಡನೇ ಅಲೆ ಇನ್ನಷ್ಟು ವೇಗ ಪಡೆದುಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಆತಂಕ ಮಡುಗಟ್ಟಿದ್ದು ಆಸ್ಪತ್ರೆಯಲ್ಲಿ ಬೆಡ್ ಇಲ್ಲದಕ್ಕೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಿ ಎಂದು ವೈದ್ಯರನ್ನು ಗೋಗರೆಯುತ್ತಿದ್ದಾರೆ.
ರೋಗಿಯ ಸಂಬಂಧಿಕರು ಗೋಗರೆದರೂ ಕೇಳಿಸಿಕೊಳ್ಳದಂತೆ ವೈದ್ಯರು ಒಳಗೆ ಹೋದ ವಿಡಿಯೋ ಒಂದು ಹರಿದಾಡುತ್ತಿದ್ದು ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ.
ಕೋವಿಡ್ ರೋಗಿಗಳು ಬೀದರ ಬ್ರಿಮ್ಸ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಕರೋನಾ ರೋಗಿಯ ಸಂಬಂಧಿಗಳು ವೈದ್ಯರಿಗೆ ಅಂಗಾಲಾಚಿ ಬೇಡುವ ಸ್ಥಿತಿ ಬೀದರ ಬ್ರಿಮ್ಸ ಆಸ್ಪತ್ರೆಯಲ್ಲಿ ನಿರ್ಮಾಣವಾಗಿದ್ದು ಬೆಡ್ ಇಲ್ಲವೆಂದರೂ ನೆಲದ ಮೇಲೆ ಹಾಕಿ ಚಿಕಿತ್ಸೆ ನೀಡುವಂತೆ ರೋಗಿಯ ಸಂಬಂಧಿಕರು ವೈದ್ಯರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ದಿನ 300 ರಿಂದ 400ರ ಮೇಲೆ ಪ್ರಕರಣ ದಾಖಲಾಗುತ್ತಿವೆ ಪ್ರತಿ ದಿನ ಒಂದು ಎರಡು ಕರೋನಾ ದಿಂದ ಸಾವನ್ನಪ್ಪುತ್ತಿರುವ ವರದಿಯಾಗುತ್ತಿದೆ.ಇತ್ತ ಕಡೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಗಳು ಸ್ಥಿತಿ ಚಿಂತಾಜನಕವಾಗಿದ್ದು ಒಳರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ದೊರಕುತ್ತಿಲ್ಲ. ಒಂದು ದಿನ ವೈದ್ಯರು ಬಂದರೆ ಮತ್ತೆ ಎರಡನೆಯ ದಿನಕ್ಕೆ ಬರುತ್ತಾರೆ ಹಾಗೂ ಚಿಕಿತ್ಸೆ ಸರಿಯಾಗಿ ನೀಡುತ್ತಿಲ್ಲ ಕೆಲವು ಔಷಧಿ ಹೊರಗಿಂದ ತರುವ ಸ್ಥಿತಿ. ಯಾರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಇಂತಹ ಅಧಿಕಾರಿಗಳು ನಮಗೆ ಬೇಕಾ ಅನ್ನೋ ಮಾತು ಸಾಮಾಜಿಕ ಚರ್ಚೆ ವಿಷಯ ವಾಗಿದ್ದು…ಜಿಲ್ಲಾ ಆಡಳಿತ ಯಾವ ರೀತಿ ಕೋರೋನಾ ಹತೋಟಿಗೆ ತರುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ