ಬೀದರ – ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳ ಪ್ರಕಾರ ಬೀದರ ನಗರದಾದ್ಯಂತ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ. ಮೇ. ೪ ರವರೆಗೆ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ನಿರ್ದೇಶನ ನೀಡಲಾಗಿದೆ.
ಏಕಾಏಕಿ ಪೊಲೀಸರು ಲಾಠಿ ಬೀಸಲಾರಂಭಿಸಿದ್ದು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಆದರೆ ವೀಕೆಂಡ್ ಲಾಕ್ ಡೌನ್ ಎಂದು ಹೇಳಿ ಈಗಲೇ ಹೇಳದೆ ಕೇಳದೆ ಬಂದ್ ಮಾಡಿಸುತ್ತಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದ್ದು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳ ಶಟರ್ಸ್ ಗಳನ್ನು ಬಲವಂತದಿಂದ ಮುಚ್ಚಿಸಲಾಗುತ್ತಿದೆ. ಜನರು ಗುಂಪುಸೇರುವುದಕ್ಕೂ ಪ್ರತಿಬಂಧ ಹಾಕಲಾಗಿದೆ.
ಲೇಡಿ ಸಿಂಗಂ ಎಂದು ಖ್ಯಾತರಾಗಿರುವ ಪಿಎಸ್ಐ ಸಂಗೀತ ಅವರು ಖಡಾಖಂಡಿತ ಕ್ರಮಕ್ಕೆ ಮುಂದಾಗಿದ್ದು ನಗರದಲ್ಲಿ ಲಾಕ್ ಡೌನ್ ಹಮ್ಮಿಕೊಂಡಿದ್ದಾರೆ. ಹೆಚ್ಚುತ್ತಿರುವ ಕೊರೋನಾ ನಿಯಂತ್ರಣ ಕ್ಕೆ ಜನರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ