- Advertisement -
ಮೂಡಲಗಿ – ಕೋವಿಡ್ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾರಾಂತ್ಯದ ಲಾಕ್ ಡೌನ್ ಕೈಗೊಳ್ಳಲಾಗಿದ್ದು ಜನಜಂಗುಳಿದ ತುಂಬಿರುತ್ತಿದ್ದ ಮೂಡಲಗಿ ಪಟ್ಟಣ ಸ್ತಬ್ಧಗೊಂಡಂತಿತ್ತು.
ಅಲ್ಲಲ್ಲಿ ಬೈಕ್ ಮೇಲೆ ತಿರುಗಾಡುವ ಬೆರಳೆಣಿಕೆಯ ಜನರನ್ನು ಹೊರತುಪಡಿಸಿ ಇಡೀ ನಗರ ಮೌನವಾಗಿತ್ತು. ಕಲ್ಮೇಶ್ವರ ಸರ್ಕಲ್, ಕಾಯಿಪಲ್ಯ ಮಾರುಕಟ್ಟೆ, ಡಬಲ್ ರಸ್ತೆ, ಗುರ್ಲಾಪೂರ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ಖಾಲಿ ಖಾಲಿಯಾಗಿ ಬಿರುಬಿಸಿಲಿನಲ್ಲಿ ಭಣಗುಟ್ಟುತ್ತಿದ್ದವು.
- Advertisement -
ಕೊರೋನಾ ತಡೆಯುವ ನಿಟ್ಟಿನಲ್ಲಿ ಪುರಸಭೆ, ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರಿಂದ ಅಂಗಡಿಕಾರರಿಂದಲೂ ಸ್ಪಂದನೆ ವ್ಯಕ್ತವಾಗಿದೆ. ನಗರದಲ್ಲೀಗ ಬೆಳಿಗ್ಗೆ ೧೦ ರವರೆಗೆ ಅಗತ್ಯ ವಸ್ತುಗಳು ದೊರೆಯುವಂತೆ ಮಾಡಲಾಗಿದೆ. ಆಮೇಲೆ ಲಾಕ್ ಡೌನ್ ಘೋಷಿಸಲಾಗಿದೆ.