ಬೀದರ – ಕೊರೋನಾ ಮಹಾಮಾರಿಯಿಂದಾಗಿ ಬೀದರ್ ಜಿಲ್ಲೆಯಲ್ಲಿ ರೋಗಿಗಳಿಗೆ ಒಂದು ಬೆಡ್ ಸಿಗದೇ ಪರದಾಡುವಂತ ಪರಿಸ್ಥಿತಿ ಇದ್ದರೆ ಮತ್ತೊಂದು ಕಡೆ ಲಾಕ್ ಡೌನ್ ನಡುವೆಯೂ ಅದ್ದೂರಿ ಜಾತ್ರೆ ಮಾಡುತ್ತಿದ್ದಾರೆ ಬಸವಕಲ್ಯಾಣ ತಾಲೂಕಿನ ಅತಲಾಪೂರ್ ಗ್ರಾಮದ ಜನ.
ಅತಲಾಪೂರ ಗ್ರಾಮದಲ್ಲಿ ನಿನ್ನೆ ಮಹಾದೇವ ಮಂದಿರದ ಜಾತ್ರೆ ಸಂಭ್ರಮವಿದ್ದು ಕಟ್ಟುನಿಟ್ಟಿನ ಲಾಕ್ ಡೌನ್ ಇದ್ರೂ ಜನರು ಮಾತ್ರ ಸರ್ಕಾರದ ಆದೇಶ ಗಾಳಿಗೆ ತೂರಿ ಜಾತ್ರೆ ಮಾಡುತ್ತಿದ್ದಾರೆ.
ಜಾತ್ರೆಯಲ್ಲಿ ವೃದ್ಧರು, ಮಕ್ಕಳು, ಮಹಿಳೆಯರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದಾರೆ. ಆದರೆ ಇಂತಹ ಸಮಾರಂಭಗಳಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ
ಈಗಾಗಲೇ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ರಣಕೇಕೆ ಹಾಕುತ್ತಿದೆ. ಜಿಲ್ಲೆಯಲ್ಲಿ ದಿನಾಲು 400ಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಕಂಡು ಬರುತ್ತಿವೆ. ನಿನ್ನೆ ಒಂದೇ ದಿನ 365 ಕೇಸ್ ಗಳು ಕಂಡು ಬಂದಿವೆ.
ಜಿಲ್ಲೆಯಲ್ಲಿ ಒಟ್ಟು 3217 ಸಕ್ರಿಯ ಪ್ರಕರಣಗಳು ವರದಿಯಾಗಿದ್ದು ಸೋಂಕಿತರಿಗೆ ಬೆಡ್ ಸಿಗದೇ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂಥ ಸಂದರ್ಭದಲ್ಲಿ ಅತಲಾಪೂರ ಗ್ರಾಮಸ್ಥರಿಂದ ಬೇಜವಾಬ್ದಾರಿತನ ಕಂಡುಬಂದಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ