- Advertisement -
ಬೀದರ – ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಕ್ವಿಡ್ ರೆನಾಲ್ಟ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಮೂರು ಜನರು ಸಿನಿಮೀಯ ರೀತಿ ಪ್ರಾಣ ಅಪಾಯ ದಿಂದ ಪಾರು ಆಗಿರುವ ಘಟನೆ ಕಪ್ಪರಗೌಂವ ಗ್ರಾಮದಲ್ಲಿ ನಡೆದಿದೆ.ಒಂದು ಚಿಕ್ಕ ಮಗು ರನ್ನಿಂಗ್ ಕಾರಿನಿಂದ ಜಂಪ್ ಮಾಡಿ ಪಕ್ಕದ ಹೊಲದಲ್ಲಿ ಬಿದ್ದಿದ್ದು ಮಗುವಿಗೆ ಏನೂ ಆಗಿಲ್ಲ ಎಂದು ಸ್ಥಳೀಯ ಜನರು ಹೇಳಿದ್ದಾರೆ.
ಕಾರು ನೋಡ ನೋಡುತ್ತಲೆ ಸುಟ್ಟು ಕರಕಲಾಗಿದ್ದು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಮೂರು ಜನರು ಪ್ರಾಣ ಅಪಾಯ ದಿಂದ ಪಾರಾಗಿದ್ದು ಸಮಾಧಾನಕರ ಸಂಗತಿಯಾಗಿದೆ.
ಹೈದರಾಬಾದ್ ದಿಂದ ಸೊಲ್ಲಾಪುರ ಹೋಗುವ ವೇಳೆ ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಆದರೆ ಯಾರಿಗೂ ಪ್ರಾಣಾಪಾಯವಾಗಿಲ್ಲ. ಸ್ವಲ್ಪ ಗಾಯಗಳಾಗಿದ್ದು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಮ್ನಾಬಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.