ರಾಜಕೀಯ ಮೇಲಾಟದಲ್ಲಿ ನಿರ್ಲಕ್ಷ್ಯದಿಂದ ಜಿಲ್ಲೆಯ ಐವತೈದು ಶಿಕ್ಷಕರನ್ನು ಕರೋನಾ ಮಹಾಮಾರಿಗೆ ಬಲಿ ನೀಡಿದ ರಾಜ್ಯ ಸರ್ಕಾರ.
ಬೀದರ ಜಿಲ್ಲೆಯಲ್ಲಿ ಈ ವರ್ಷ ಒಟ್ಟು ೩೫೦ ಜನರು ಕೋರೋನಾ ವೈರಸ್ ನಿಂದ ಸಾವಿನ್ನಪ್ಪಿದರೆ ಅದರಲ್ಲಿ ೫೫ ಜನ ಶಿಕ್ಷಕರಾಗಿದ್ದಾರೆ ಎಂಬ ವಿಪರ್ಯಾಸಕರ ಪ್ರಸಂಗ ಬಹಿರಗವಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರನ್ನು ದೇಶದಲ್ಲಿ ಕರೋನಾ ಮಹಾಮಾರಿ ಹರಡುವ ಸಮಯದಲ್ಲಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಬಳಸಿಕೊಂಡು ಚುನಾವಣೆ ನಡೆಸಿ ಶಿಕ್ಷಕರಿಗೆ ಚುನಾವಣಾ ತರಬೇತಿ,ನೀಡಿ ಚುನಾವಣೆಯಲ್ಲಿ ದುಡಿಸಿಕೊಂಡು ಕರೊನಾ ಸೋಂಕಿಗೆ ದೂಡಿರುವದು ಬೀದರ್ ಜಿಲ್ಲೆಯ ೫೫ ಕ್ಕಿಂತ ಹೆಚ್ವಿನ ಶಿಕ್ಷಕರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂಬ ಮಾತುಗಳು ಕೇಳಿಬರುತ್ತಿವೆ.
ಭಾರತದ ಉಜ್ವಲ ಭವಿಷ್ಯದ ಬುನಾದಿ ಹಾಕುವವರು ಶಿಕ್ಷಕರು, ಅಂತಹ ಶಿಕ್ಷಕರನ್ನು ಬರೀ ಶಿಕ್ಷಣ ಕಲಿಸಲು ಬಿಡದೆ ಸರಕಾರಗಳು ಅವರ ಕೈಯಿಂದ ಜನಗಣತಿ ಮಾಡಿಸುತ್ತವೆ. ಚುನಾವಣೆಯಲ್ಲಿ ಅವರೇ ದುಡಿಯಬೇಕು, ತರಕಾರಿ ತರಬೇಕು ಬಿಸಿ ಊಟ ಮಾಡಿಸಬೇಕು,ಹಾಲು ಕುದಿಸಬೇಕು, SDMC ಅನ್ನೊ ಭ್ರಷ್ಟ ಸಮಿತಿಗೆ ತಲೆಬಾಗಿ ಸರಕಾರದಿಂದ ಶಾಲೆಗೆ ಬರುವ ದುಡ್ಡು ಸಮಿತಿಯ ರಾಜಕೀಯ ನಾಯಕರ ಬಾಲ ಬಡುಕರಿಗೆ ಶಿಕ್ಷಕ ನೀಡಿ ತಾನು ಸಿಕ್ಕಿಬಿದ್ದು ನರಳಾಡಬೇಕು.
ಸರ್ಕಾರದ ಯಾವುದೇ ಯೋಜನೆಗೂ ಅವರೇ ಹೆಗಲು ಕೊಡಬೇಕು, ಇಷ್ಟು ದುಡಿದ ಜೀವಗಳಿಗೆ ಕರೊನಾ ಮಹಾಮಾರಿಯಲ್ಲು ನೆಮ್ಮದಿ ಯಿಂದ ಮನೆಯಲಿ ಇರಲು ಬಿಡದೆ ತಮ್ಮ ಸ್ವಾರ್ಥಕ್ಕೆ ರಾಜಕೀಯ ವ್ಯವಸ್ಥೆ ಬಳಸಿಕೊಂಡು ನೂರಾರು ಶಿಕ್ಷಕರ ಪ್ರಾಣ ಹೀರಿತು. ಜೊತೆಯಲ್ಲಿ ಸತ್ತ ಸೂತಕದ ಮನೆಯಲ್ಲಿ ಸಾಂತ್ವನ ಹೇಳದೆ ಪರಿಹಾರವನ್ನು ನೀಡದಿರುವುದು ತೀರಾ ಖಂಡನೀಯ.
ಸರ್ಕಾರ ಇನ್ನೂ ಮುಂದೆಯಾದರು ಶಿಕ್ಷಕರನ್ನು ಕಲಿಕೇತರ ಕೆಲಸಕ್ಕೆ ಬಳಸದೆ ಈಗಾಗಲೆ ಕಳೆದ ಎರಡು ವರ್ಷದಿಂದ ಶಿಕ್ಷಣದಿಂದ ದೂರ ಉಳಿದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವರೋ ಅಥವಾ ಸರ್ಕಾರಿ ಶಾಲೆಗೆ ಹೋಗುವರೆಲ್ಲ ನಮ್ಮ ಮಕ್ಕಳಲ್ಲ ಬಡ ಕೂಲಿ ಕಾರ್ಮಿಕರ ಮಕ್ಕಳು ಎಂದು ಭ್ರಷ್ಟಾಚಾರಿಗಳೆ ತುಂಬಿಕೊಂಡು ಸರ್ಕಾರ ನಡೆಸುತಿರುವ ಭಾರತೀಯ ಜನತಾ ಪಕ್ಷದ ಸರ್ಕಾರ ಬಡ ಕಾರ್ಮಿಕ ಮಕ್ಕಳಿಗೇಕೆ ಶಿಕ್ಷಣ ಎಂದು ಶಿಕ್ಷಕರನ್ನು ಕಲಿಕಾಯೇತರ ಚಟುವಟಿಕೆ ಗಳಿಗೆ ಬಳಸುವದನ್ನು ಮುಂದುವರಿಸುವರೋ ಕಾದು ನೋಡಬೇಕು.
ಸರ್ಕಾರವು ಶಿಕ್ಷಕರನ್ನು ಚುನಾವಣೆ ಕೆಲಸಕ್ಕೆ ಬಳಸಿಕೊಂಡಿದ್ದರಿಂದ ಅನೇಕ ಶಿಕ್ಷಕ ದಂಪತಿಗಳು ಕೂಡ ಕೊರೋನಾಕ್ಕೆ ಬಲಿಯಾಗಿ ಅವರ ಮಕ್ಕಳು ಅನಾಥರಾಗಿದ್ದಾರೆ. ಕರ್ತವ್ಯ ಮಾಡುವಾಗ ಮಡಿದ ಶಿಕ್ಷಕ ಕುಟುಂಬಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಚುನಾವಣಾ ಆಯೋಗ ಯೋಚನೆ ಮಾಡಬೇಕು
– ವಿರುಪಾಕ್ಷ ಗಾದಗಿ, ಸಾಮಾಜಿಕ ಕಾರ್ಯಕರ್ತ