- Advertisement -
“ಇದು ಬದುಕಿನ ಉದಾತ್ತ ಗುಣಗಳಾದ ಪ್ರೀತಿ ಮತ್ತು ಕ್ಷಮೆಯ ಕುರಿತಾದ ಕವಿತೆ. ಬರೆಯುತ್ತಲೇ ದಿವ್ಯಾನುಭೂತಿಯ ಅವರ್ಣನೀಯ ಆನಂದ ನೀಡಿದೆ ಕವಿತೆ. ಓದಿ ನೋಡಿ.. ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಆಳಕ್ಕಿಳಿದಷ್ಟೂ ಇಲ್ಲಿ ಭಾವದ ಹರಿವಿದೆ. ಅರ್ಥೈಸಿದಷ್ಟೂ ಅರಿವಿನ ವಿಸ್ತಾರವಿದೆ. ಪ್ರೀತಿ, ಕ್ಷಮೆ ಜೀವದ ಮಾಧುರ್ಯವಷ್ಟೇ ಅಲ್ಲ. ಜೀವನ ಸೌಂದರ್ಯವೂ ಹೌದು. ಏನಂತೀರಾ.?”
-ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಪ್ರೀತಿ-ಕ್ಷಮೆ.!
ಹಂಚಿಬಿಡಿ ಪ್ರೀತಿ
ಯಾವೊಂದೂ..
ಫಲಾಫಲಗಳ
ಪ್ರತೀಕ್ಷೆ
ನಿರೀಕ್ಷೆಗಳಿಲ್ಲದೆ.!
- Advertisement -
ಕೊಡಲಿ ಎತ್ತಿ
ನಿಂದವನಿಗೂ
ಹಣ್ಣು ನೆರಳು
ನೀಡುವ…
ವೃಕ್ಷದಂತೆ.!
ಕೊಟ್ಟುಬಿಡಿ ಕ್ಷಮೆ
ಏನೊಂದೂ
ಮರಳಿಪಡೆವ
ಅಪೇಕ್ಷೆ
ಆಕಾಂಕ್ಷೆಗಳಿಲ್ಲದೆ.!
ಕತ್ತಿ ಹಿಡಿದು
ಬಂದವನಿಗೂ
ಒಡಲಕ್ಷೀರ
ಕೊಡುವ…
ಗೋವಿನಂತೆ.!
- Advertisement -
ಎ.ಎನ್.ರಮೇಶ್. ಗುಬ್ಬಿ.