Homeಕವನತಂಬಾಕು ರಹಿತ ದಿನದ ಕವನಗಳು

ತಂಬಾಕು ರಹಿತ ದಿನದ ಕವನಗಳು

ತಂಬಾಕು ನಿಷೇಧ ಜಾಗೃತಿ

ತಂಬಾಕು ಸೇವನೆ ತರುತ್ತದೆ
ನಾನಾ ರೀತಿಯ ಕಾಯಿಲೆ

ಬೀಡಿ ಸಿಗರೇಟು ಹುಕ್ಕಾ
ನಿಲ್ಲಿಸುತ್ತದೆ ಉಸಿರನ್ನು ಪಕ್ಕಾ
ಇವುಗಳ ಸೇವನೆಯಿಂದ ಶ್ವಾಸಕೋಶ ಕ್ಯಾನ್ಸರ್ ಪಕ್ಕಾ

ನೀವಲ್ಲದೆ ನಿಮ್ಮ ಕುಟುಂಬಕ್ಕೂ ಸುತ್ತಲಿನವರಿಗೂ ಕಾಯಿಲೆ ಪಕ್ಕಾ
ಇದು ಮೆದುಳಿಗೂ ತರುತ್ತದೆ ಹಾನಿ
ಅದಕ್ಕಾಗಿ ತಂಬಾಕು ಸೇವನೆ ಬಿಟ್ಟುಬಿಡಿ

ಇದು ಗಂಟಲು ಬಾಯಿ ಶ್ವಾಸಕ್ಕೂ ತರುತ್ತದೆ ಕ್ಯಾನ್ಸರ್
ಬಿಪಿ ಷುಗರ್ ಅಲ್ಲದೆ
ದೇಹಕ್ಕೂ ತರುತ್ತದೆ ಸ್ಟ್ರೋಕ್

ಬೀಡಿ ಸಿಗರೇಟ್ ಹುಕ್ಕಾ ಗುಟ್ಕಾ ಜರದಾ ದೂರವಿಡೋಣ
ನಮ್ಮ ಸುತ್ತಲಿನವರಿಗೂ
ಜಾಗೃತಿ ಮೂಡಿಸೋಣ
ತಂಬಾಕಿನಿಂದ ಮುಕ್ತರಾಗೋಣ
ಉತ್ತಮ ಆರೋಗ್ಯ ಪಡೆಯುವಂತಾಗೋಣ

ಪಾತಮುತ್ತಕಹಳ್ಳಿ ಮು.ಚಲಪತಿಗೌಡ(ಪಾ.ಮು.ಚ.)ಸಾಹಿತಿ ಚಿಕ್ಕಬಳ್ಳಾಪುರ


ಚುಟುಕು

ಮಾಡಬೇಡಿರಿ ಅತಿಯಾದ ದೂಮಪಾನ
ಅದರಿಂದ ಬೇಗಬರುತ್ತದೆ ಸಾವಿಗೆ ಆಹ್ವಾನ
ಉಸಿರಾಟಕ್ಕೆ ಬಹಳ ತೊಂದರೆಯಾಗುತ್ತದೆ
ಹೃದಯ ಸ್ಥಂಭನವಾಗುವ ಸಂಭವವಿರುತ್ತದೆ

ಬೋರೇಗೌಡ ಅರಸೀಕೆರೆ


ಚುಟುಕು

“ನಾಶ ಲೋಕದಿಂದ ಹೊರ ಬನ್ನಿ
ತಂಬಾಕು ನಮ್ಮ ವಿನಾಶಿ
ಸಮಾಜದ ಒಳಿತಿಗೆ ಶ್ರಮಿಸಿ
ಆಗುವ ದುಷ್ಪರಿಣಾಮ ದಿಟ್ಟಿಸಿ
ತಂಬಾಕು ಮುಕ್ತ ದೇಶವಾಗಿಸಿ……..

” ಆರೋಗ್ಯ ಮತ್ತು ನೈರ್ಮಲ್ಯ ನಮ್ಮೆಲ್ಲರ ಹೊಣೆ ಎಂಬುದನ್ನು ಅರಿತು ಬಾಳೋಣವೇ”……

ರೇಣುಕ.ಶಿವಪ್ಪ
ಶಿವಮೊಗ್ಗ


ಹೀಗೊಂದು ಪ್ರಾರ್ಥನೆ

ತಂಬಾಕು ಸೇವನೆಯೆಂಬುದು
ದುಶ್ಚಟವು ಮನುಜರಿಗೆ
ನಮ್ಮ ಶ್ವಾಸಕೋಶಕ್ಕೆ ಅದುವೇ
ಮಹಾ ಮಾರಕವು ನೋಡಾ
ಆರೋಗ್ಯ ಭಾಗ್ಯವೆಂಬುದು ಅವಶ್ಯವಿದೆ ಎಲ್ಲರಿಗೆ
ಹೊಗೆಸೊಪ್ಪು ಸೇವನೆಯ
ನೀವ್ ಮಾಡದಿರಿ ಎಂದೂ
ಬೀಡಿ ಸಿಗರೇಟು ಗಳು ಕೆಟ್ಟ
ಚಟವೆಂದರಿತು ಬಿಟ್ಟು ಬಿಡಿ
ಈಗಲೇ ಪಣತೊಟ್ಟು ನಿಮ್ಮ
ಆರೋಗ್ಯ ರಕ್ಷಣೆಗೆಂದು

ಮ.ಗ.ಹೆಗಡೆ.ಮುತ್ಮುರ್ಡು
ಜಿಲ್ಲಾ ಅಧ್ಯಕ್ಷರು ಕರುನಾಡು ಸಾಹಿತ್ಯ ಪರಿಷತ್ತು ಚಿಕ್ಕಬಳ್ಳಾಪುರ ಜಿಲ್ಲೆ

RELATED ARTICLES

Most Popular

error: Content is protected !!
Join WhatsApp Group