ಬೀದರ್ – ಜಿಲ್ಲೆಯ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತವರೂರಾದ ಔರಾದ ತಾಲೂಕಿನ ಎಕಲಾರ ಗ್ರಾಮದಲ್ಲಿ ಪಂಚಾಯತ ಅಧಿಕಾರಿ ನಿರ್ಲಕ್ಷತನದಿಂದ ಸುಮಾರು ದಿನಗಳಿಂದ ಮಳೆ ಗಾಳಿಯಲ್ಲಿ ಗ್ರಾಮ ಪಂಚಾಯತ್ ಮೇಲೆ 24 ಗಂಟೆಗಳ ಕಾಲ ಹಾರಾಡುತ್ತಿರುವ ರಾಷ್ಟ್ರಧ್ವಜ.
ನಮ್ಮ ದೇಶದ ಗಡಿ ವಾಘಾ ಬಾರ್ಡರ್ ನಲ್ಲಿ 365 ದಿನಗಳೂ ದಿನನಿತ್ಯ ಸಾವಿರಾರು ಜನರ ಸಮ್ಮುಖದಲ್ಲಿ ರಾಷ್ಟ್ರಧ್ವಜವನ್ನು ಪ್ರತಿದಿನ ಮುಂಜಾನೆ ಏಳು ಗಂಟೆಗೆ ಗೌರವಪೂರ್ವಕವಾಗಿ ಧ್ವಜವನ್ನು ಏರಿಸುವುದು ಹಾಗೂ ಪ್ರತಿದಿನ ಸಾಯಂಕಾಲ ಆರು ಗಂಟೆಗೆ ಧ್ವಜವನ್ನು ಗೌರವಪೂರ್ವಕವಾಗಿ ಇಳಿಸುವ ಕಾರ್ಯ ನಮ್ಮ ದೇಶದಲ್ಲಿ ನಡೆಯುತ್ತದೆ ಇದು ನಮ್ಮ ದೇಶದ ಸಂಪ್ರದಾಯ.
ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾನೂನು ಚೌಕಟ್ಟನ್ನು ಮರೆತು ಇಲ್ಲೊಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟರಾವ್ ದೇಶಪಾಂಡೆ ರಾಷ್ಟ್ರಧ್ವಜವನ್ನು ಅವಮಾನಿಸಿರುವುದು ಕಂಡುಬಂದಿದೆ.
ಗ್ರಾ.ಪಂ. ಕಟ್ಟಡದ ಮೇಲೆ ಏರಿಸಲಾದ ಧ್ವಜವನ್ನು ಹಗಲೂ ರಾತ್ರಿ ಅಲ್ಲಿಯೇ ನಿರ್ಲಕ್ಷಿಸಲಾಗಿದೆ. ಇದು ಕಾನೂನಿನ ವಿರುದ್ಧವಾಗಿದ್ದು ಇಂಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಧ್ವಜಕ್ಕೆ ಗೌರವ ಕೊಡುವುದು ತನ್ನ ಆದ್ಯ ಕರ್ತವ್ಯವಾಗಿದೆ. ಆದರೆ ನಮ್ಮ ದೇಶದಲ್ಲಿ ಇಂತಹ ಅಧಿಕಾರಿಗಳಿಂದ ದೇಶದ ಗೌರವಕ್ಕೆ ಚ್ಯುತಿ ಬದಂತಾಗಿದೆ. ಸರ್ಕಾರವು ಧ್ವಜ ಏರಿಸುವ ಹಾಗೂ ಇಳಿಸುವ ಕಾರ್ಯಕ್ಕೆ ಸಹಾಯಧನ ನೀಡುತ್ತದೆ. ಆದರೆ ಅಂತಹ ಹಣವನ್ನು ನುಂಗಿ ನನಗೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುವ ಅಧಿಕಾರಿಗಳಿಗೆ ಸರ್ಕಾರವು ಕಾನೂನು ಕ್ರಮ ತೆಗೆದುಕೊಂಡು ಇಂಥ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನುಮುಂದಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೋ ಇಲ್ಲವೆಂಬುದನ್ನು ಕಾದುನೋಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ