spot_img
spot_img

ವಿದ್ಯುತ್ ಸ್ಪರ್ಶಿಸಿ ಚಿರತೆ ಸಾವು

Must Read

- Advertisement -

ವಿಜಯಪುರ – ಜಿಲ್ಲೆಯ ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವಳಿ ಇಟ್ಟಿದ್ದ ಚಿರತೆಯು ಸಿಂದಗಿ ತಾಲೂಕಿನ ದೇವರ ನಾವದಗಿ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ.

ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಕೆಲವು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳನ್ನ ತಿಂದು ಹಾಕಿತ್ತು.

ಚಿರತೆ ಹಾವಳಿಗೆ ಜನ ಬೆಚ್ಚಿಬಿದ್ದಿದ್ದರು. ಮೊನ್ನೆಯಷ್ಟೆ ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಚಿರತೆ ದೃಶ್ಯ ಸೆರೆಯಾಗಿತ್ತು. ಚಿರತೆಯನ್ನು ಬಲೆಗೆ ಕೆಡವಲು ಅರಣ್ಯ ಇಲಾಖೆಯವರು 3 ಬೋನುಗಳನ್ನು ಇಟ್ಟಿದ್ದರು. ಆದರೆ ಇಂದು ವಿದ್ಯುತ್ ಸ್ಪರ್ಷದಿಂದ ಸಾವನ್ನಪ್ಪಿದ ಚಿರತೆ ಕಳೆಬರ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
- Advertisement -

Latest News

ಅಂಕೋಲೆಯ ಉಪ್ಪಿನ ಸತ್ಯಾಗ್ರಹಕ್ಕೆ ತೊಂಬತ್ನಾಲ್ಕು ವರ್ಷ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬಹು ವರ್ಣರಂಜಿತ. ಈ ಬೃಹತ್ ಚರಿತ್ರೆಯಲ್ಲಿ ಅಂಕೋಲೆಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಈ ಅಧ್ಯಾಯ ಒದಗಿ ಬಂದದ್ದು ಇಡೀ...
- Advertisement -

More Articles Like This

- Advertisement -
close
error: Content is protected !!
Join WhatsApp Group