ಭಾರತ ರತ್ನ ಡಾ ಭಿದಾನ್ ಚಂದ್ರ ರಾಯ್ ( ಬಿ.ಸಿ ರಾಯ್ ) ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಕುರಿತಂತೆ ಇಂದು ಬೆಳಗ್ಗೆ ಕನ್ನಡ ಜಾಗೃತಿ ಸಮಿತಿ ಮೈಸೂರಿನ ಸದಸ್ಯರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಡಾ.ಗುಬ್ಬಿಗೂಡು ರಮೇಶ್ ಅವರ ನೇತೃತ್ವದಲಿ ಕೃಷ್ಣರಾಜೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ|| ಬಿ.ಎಲ್.ನಂಜುಂಡಸ್ವಾಮಿ ಹಾಗೂ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ||ಬಿ.ಎಸ್.ಮಂಜುನಾಥ್ ಅವರುಗಳನ್ನು ಭೇಟಿ ಮಾಡಿ ವೈದ್ಯಕೀಯ ಸೇವೆಯಲ್ಲಿ ಕನ್ನಡ ಬಳಕೆ ಕುರಿತಂತೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ಗುಬ್ಬಿಗೂಡು ರಮೇಶ್ ಅವರು ವೈದ್ಯಕೀಯ ಸೇವೆಯಲ್ಲಿ ಕನ್ನಡ ಬಳಕೆ ಕುರಿತಂತೆ ಸದ್ಯದಲ್ಲೇ ಮೈಸೂರು ನಗರದಲ್ಲಿ ಕಾರ್ಯಾಗಾರವೊಂದನ್ನು ಹಮ್ಮಿಕೊಳ್ಳಲಾಗುವುದು.ವೈದ್ಯಕೀಯ ಸೇವೆಯಲ್ಲಿ ಕನ್ನಡ ಭಾಷೆಯ ಪಾರಿಭಾಷಿಕ ಶಬ್ದಗಳ ಬಳಕೆ ಕುರಿತಂತೆ ಈ ಕಾರ್ಯಾಗಾರದಲ್ಲಿ ಚರ್ಚಿಸಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮೈಸೂರು ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್, ಅರವಿಂದ ಶರ್ಮ,ಶ್ರೀಮತಿ ಡಾ. ಸೌಗಂಧಿಕಾ ಜೋಯಿಸ್,ಎನ್.ಜಿ.ಗಿರೀಶ್,ಡಾ.ಮುಳ್ಳೂರು ನಂಜುಂಡ ಸ್ವಾಮಿ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.