ಟಂಕಾಗಳು

Must Read


ಭುಗಿಲೆದ್ದಿದೆ
ಜಗವು ಭಯದಲಿ
ಮಹಾಮಾರಿಯೇ
ನೀ ತಂದ ಫಜೀತಿಗೆ
ಸಾವೂ ಹೆದರುತಿದೆ


ಒಕ್ಕಲೆದ್ದಿದೆ
ನೆಲೆಯು ಸಿಗದಲೆ
ಮಾರಿ ಕೊರೋನಾ
ಹೆಚ್ಚುವ ಭೀತಿಯಲಿ
ಹುಚ್ಚು ಹಿಡಿಯುತಿದೆ


ಭಯಗೊಂಡಿದೆ
ಜಗದ ಜನವಿಂದು
ಮಾರಿಗೌಷಧಿ
ಸಿಗದ ಕಾರಣಕೆ
ಸಾವಿಗೆ ಹೆದರಿದೆ


ದಿಕ್ಕುಗಾಣದೆ
ಜನ ಕಂಗಾಲಾಗಿದೆ
ಸಾವು ನೋವಿನ
ಲೆಕ್ಕ ಸಿಗದುದರ
ಭಯಕೆ ಬೆದರಿದೆ


ರೋಗ ಮುಕ್ತಿಗೆ
ಭವವು ಬಯಸಿದೆ
ಕೈ ಮುಗಿಯತ
ಮೊರೆಯನಿಡುತಿದೆ
ಧರೆಯ ದೇವರಲಿ.

ಡಾ.ಗಜಾನಂದ ಸೊಗಲನ್ನವರ
ಚಿಕ್ಕಬಾಗೇವಾಡಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group