ಮಿನಿಕವನ: ಬದುಕೆಂಬ ಚಲನಚಿತ್ರ…

Must Read

ಬದುಕೆಂಬ ಚಲನಚಿತ್ರ..

ಬದುಕೆಂಬ ಚಲನಚಿತ್ರದಲಿ
ನೀನೊಬ್ಬ ಅಸಾಮಾನ್ಯ ನಟ,
ಯಾರಿಗೂ ನಿಲುಕದ
ದಿವ್ಯ ಶಕ್ತಿಯೊಂದು
ಈ ಚಲನಚಿತ್ರದ ನಿರ್ಮಾಪಕ,ನಿರ್ದೇಶಕ…

ತಾತ-ಅಜ್ಜಿ,ಅಪ್ಪ-ಅಮ್ಮರೆಂಬ
ಗೌರವ ಪಾತ್ರ ವರ್ಗ..
ಗೆಳೆಯ-ಗೆಳತಿಯರು
ಪ್ರೀತಿ-ವಿಶ್ವಾಸಗಳೆಂಬ ಮರದ
ರೆಂಬೆ-ಕೊಂಬೆಗಳು…
ಹೆಂಡತಿ ಎಂಬ ನಾಯಕಿ,
ಮಕ್ಕಳೆಂಬ ಬಾಲನಟ-ನಟಿಯರು..
ಬದುಕೆಂಬ ಚಲನಚಿತ್ರದ
ಮೂಲಬೇರುಗಳು…

ಇಲ್ಲಿ ನಾಯಕ,ಖಳನಾಯಕ,
ನಗೆಮಿಂಚು,ಅಳುಮುಂಜಿ..
ಎಲ್ಲವೂ ವಿಧಿಲಿಖಿತ….
ಆ ದಿವ್ಯ ಶಕ್ತಿಯ ಸೂತ್ರದಲಿ
ನಿನ್ನ ಬದುಕೆಂಬ ಗಾಳಿಪಟದ ಆಟ..
ಅವನ ಕರುಣೆಯಿದ್ದರೆ
ನಿನ್ನ ಬದುಕ ಚಲನಚಿತ್ರ
ಎಂದೆಂದಿಗೂ ಸುಖಾಂತ್ಯ..
ಇಲ್ಲದಿರೆ ಬಾಳು ಸೂತ್ರವಿಲ್ಲದೆ
ಲಾಗ ಹೊಡೆಯುವ ಗಾಳಿಪಟ..
ನಿನ್ನ ಬದುಕೆಂಬ ಚಲನಚಿತ್ರಕೆ
ಕಣ್ಣೀರ ಕಡಲಿನ ..ದುಃಖಾಂತ್ಯ..
ಸೂತ್ರದಾರ ಅವನು.. ಪಾತ್ರದಾರಿ ನೀನು….!!!


ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು

Latest News

ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ

ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ...

More Articles Like This

error: Content is protected !!
Join WhatsApp Group