ಸವದತ್ತಿಃ ತಾಲೂಕಿನ ಸತ್ತಿಗೇರಿ ತೋಟದ ಸರಕಾರಿ ಕಿರಿಯ ಶಾಲೆಯ ಶಿಕ್ಷಕರಾದ ಮನೋಹರ ಚೀಲದ ಇವರನ್ನು ನಲಿಕಲಿ ಸೇತುಬಂಧ ಅಭ್ಯಾಸ ಪುಸ್ತಕದ ಸಾಹಿತ್ಯ ರಚನಾ ಸಮಿತಿಯ ಸದಸ್ಯರನ್ನಾಗಿ ಸಮಗ್ರ ಶಿಕ್ಷಣ ಕರ್ನಾಟಕ ಡಿ.ಎಸ್.ಇ.ಆರ್.ಟಿ ಬೆಂಗಳೂರು ಇವರು ಆಯ್ಕೆ ಮಾಡಿದ್ದಾರೆ.
ಸದರಿ ಶಿಕ್ಷಕರು ರಾಜ್ಯ ಮಟ್ಟದ ವಿವಿಧ ವಿಷಯಗಳಲ್ಲಿ ಸಂಪನ್ನೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಕಳೆದ ವರ್ಷ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರು.ನಲಿಕಲಿ ಪಠ್ಯರಚನಾ ಸಮಿತಿಯ ಸದಸ್ಯರು.ನಲಿಕಲಿ ಇಂಗ್ಲೀಷ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ,ಸಮಗ್ರ ಪರಿಷ್ಕರಣಾ ಸಮಿತಿಯ ಸದಸ್ಯರಾಗಿ,ಮರಾಠಾ ಭಾಷಾಂತರ ಸಮಿತಿಯ ಜಿಲ್ಲಾ ಹಂತದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು ಬಹುಮುಖ ಪ್ರತಿಭೆಯ ಇವರ ಆಯ್ಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ. ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕಿ ಅಭಿನಂದಿಸಿದ್ದಾರೆ.