ಜುಲೈ ೧೮ ರಂದು ಮೂಡಲಗಿ ಲಯನ್ಸ್ ಕ್ಲಬ್ ಪದಗ್ರಹಣ

Must Read

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ೨೦೨೧-೨೨ ನೇ ಸಾಲಿನ ಅಧಿಕಾರ ಪದಗ್ರಹಣ ಕಾರ್ಯಕ್ರಮವು ಜುಲೈ ೧೮ ರಂದು ಸ್ಥಳೀಯ ಸಾಯಿ ಹಾಸ್ಟೆಲ್ ಭವನದಲ್ಲಿ ಜರುಗಲಿದೆ.

ಡಾ.ಸಂಜಯ ಸಿಂಧಿಹಟ್ಟಿ, ಕಾರ್ಯದರ್ಶಿ

ಪದಗ್ರಹಣ ಅಧಿಕಾರಿಯಾಗಿ ಲಯನ್ ರೀಜನ್ ಚೇರಪರ್ಸನ್ ಜಮಖಂಡಿಯ ಎಚ್.ಆರ್. ಮಹಾರಡ್ಡಿ ಹಾಗೂ ಮುಖ್ಯ ಅತಿಥಿಯಾಗಿ ಮಕ್ಕಳ ಸಾಹಿತಿ ಪ್ರೊ. ಜಯವಂತ ಕಾಡದೇವರ ಭಾಗವಹಿಸುವರು.
೨೦೨೧-೨೨ ನೇ ಸಾಲಿನ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷರಾಗಿ ಬಾಲಶೇಖರ ಬಂದಿ, ಕಾರ್ಯದರ್ಶಿಯಾಗಿ ಡಾ. ಸಂಜಯ ಶಿಂಧಿಹಟ್ಟಿ ಹಾಗೂ ಖಜಾಂಚಿಯಾಗಿ ಸುಪ್ರೀತ ಎಸ್. ಸೋನವಾಲಕರ ಆಯ್ಕೆಯಾಗಿರುವರು.

ಸುಪ್ರೀತ್ ಸೋನವಾಲಕರ, ಖಜಾಂಚಿ

ಸ್ಥಾಪನೆ: ಮೂಡಲಗಿ ಲಯನ್ಸ್ ಕ್ಲಬ್ ಪರಿವಾರವು ೨೦೧೫ ರಲ್ಲಿ ಸ್ಥಾಪನೆಗೊಂಡಿದ್ದು ಪ್ರಸಕ್ತ ೭ನೇ ವರ್ಷದಲ್ಲಿ ಕಾರ್ಯಮಾಡಲಿದೆ. ಉಚಿತ ವೈದ್ಯಕೀಯ ಸೇವಾ ಶಿಬಿರಗಳು, ಸರ್ಕಾರಿ ಆಸ್ಪತ್ರೆಯಲ್ಲಿ ಅನ್ನದಾಸೋಹ, ಪರಿಸರ ರಕ್ಷಣೆ, ರಸ್ತೆ ಸುರಕ್ಷತಾ ಅಭಿಯಾನ, ಸ್ವಚ್ಛತಾ ಅಭಿಯಾನ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ರೈತರಿಗೆ ವಿವಿಧ ತರಬೇತಿಗಳನ್ನು ಆಯೋಜಿಸುವ ಮೂಲಕ ಸಮಾಜ ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಲಯನ್ಸ್ ಪರಿವಾರದಲ್ಲಿ ವಿವಿಧ ಕ್ಷೇತ್ರದ ೪೦ ಜನ ಸದಸ್ಯರಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group