ಪರೀಕ್ಷಾ ವಿದ್ಯಾರ್ಥಿಗಳಿಗೆ ಹಾಗೂ ಶೈಕ್ಷಣಿಕ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

Must Read

ದಿ. 19 ಮತ್ತು 22 ಜುಲೈ 2021 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬೆಳಗಾವಿ,ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿರುವ ಮಕ್ಕಳ ಮತ್ತು ಪರೀಕ್ಷೆಯ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಅಧಿಕಾರಿಗಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಸಚಿವರಾದ ಮುರುಗೇಶ ನಿರಾಣಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ ಸಹೋದರರು ಸ್ಯಾನಿಟೈಜರ ಮತ್ತು ಮಾಸ್ಕಗಳನ್ನು ನೀಡಿದ್ದಾರೆ.

ಇವುಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಧುರೀಣರು, ಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಣ್ಣ ಯಾದವಾಡ, ಮಹಾದೇವ ಜೋರಾಪುರ,ಭಾರತೀಯ ಜನತಾ ಪಕ್ಷದ ನಗರಾಧ್ಯಕ್ಷರಾದ ಶಶಿಕಾಂತ ಪಾಟೀಲ,ಪ್ರಧಾನ ಕಾರ್ಯದರ್ಶಿಗಳಾದ ಮುರಗೇಂದ್ರಗೌಡ ಪಾಟೀಲ, ದಾದಗೌಡ ಬಿರಾದಾರ, ಜಿಲ್ಲಾ ವಿಶೇಷ ಸಂಪರ್ಕಾಧಿಕಾರಿ ಮಹಾದೇವ ದಾನಣ್ಣವರ. ಸಚಿವರ ಮತ್ತು ವಿಧಾನ ಪರಿಷತ್ ಸದಸ್ಯರ ಪ್ರತಿನಿಧಿಗಳಾಗಿ ಆಗಮಿಸಿದ ಶ್ರೀಕಾಂತ ಮೂಲಿಮನಿ ವಕೀಲರು, ವೀರಣ್ಣ ತೋಟದ, ಸಿದ್ದು ಮನ್ನಿಕಟ್ಟಿ. ಕಾರ್ಯದರ್ಶಿಗಳು,ಸಹ ನಿರ್ದೇಶಕರಾದ ವಾಲ್ಟರ್ ಎಚ್ ಡಿ ಮೆಲ್ಲೋ ಉಪನಿರ್ದೇಶಕರಾದ ಡಾ, ಆನಂದ ಪುಂಡಲೀಕ, ಶಿಕ್ಷಣಾಧಿಕಾರಿಗಳಾದ ಎನ್ ಆರ್ ಪಾಟೀಲ ಬಸವರಾಜ ಮಿಲ್ಲಾನಟ್ಟಿ, ಮಹೇಶ ಚನ್ನಂಗಿ ಸಹ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಮು ಅ ಗುಗವಾಡ, ಜಿಲ್ಲಾ ಕಾರ್ಯದರ್ಶಿಗಳಾದ ಬಸವರಾಜ ಗಾಣಿಗೇರ, ಉಪಾಧ್ಯಕ್ಷರಾದ ಅಶೋಕ ಅಣ್ಣಿಗೇರಿ,ನಗರ ಕಾರ್ಯದರ್ಶಿ ಎನ್ ಎಮ್ ಮದನಬಾವಿ ಹಾಗೂ ವಿಷಯ ಪರಿವೀಕ್ಷಕರು ಮುಂತಾದವರು ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group