ಬೀದರ್ ಪೋಲಿಸರ ಭರ್ಜರಿ ಕಾರ್ಯಚರಣೆ ; 158 ಕೆಜಿ ಗಾಂಜಾ ವಶ

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಗಾಂಜಾ ದಂಧೆಗೆ ಬೀದರ್ ಪೊಲೀಸರು ಕಡಿವಾಣ ಹಾಕಿದ್ದು ಮಿಂಚಿನ ದಾಳಿ ಮಾಡಿ ೧೫೮ ಕೆಜಿ ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಬೀದರ್ ನಗರದ ಹೃದಯ ಬಾಗದಲ್ಲಿ ಇರುವ ಕೆನಾನ್ ಕಾಲೊನಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರ್‌ನಲ್ಲಿ ಮಾರಾಟಕ್ಕಾಗಿ ಸಂಗ್ರಹಿಸಿ ಇಡಲಾಗಿದ್ದ ₹ 3.17 ಲಕ್ಷ ಮೌಲ್ಯದ 158 ಕೆ.ಜಿ ಗಾಂಜಾ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾಲೊನಿಯ ಮಹಮ್ಮದ್ ಆರಿಫ್ ಮಹಮ್ಮದ್ ಖಾಸಿಂ ಶೇಕ್ ಎಂಬಾತನನ್ನು ಬಂಧಿಸಿದ್ದು, ಎರಡು ಕಾರ್, ಒಂದು ಆಟೊ, ಮೊಬೈಲ್ ಹಾಗೂ ₹ 600 ನಗದು ವಶಕ್ಕೆ ತೆಗೆದುಕೊಂಡಿದ್ದಾರೆ

ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿ ಡಿ ಎಲ್ ನಾಗೇಶ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಯಿತು.

ನಗರ ವೃತ್ತ ಸಿಪಿಐ ಫಾಲಾಕ್ಷಯ್ಯ, ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರೆ ಪಿಎಸ್‍ಐಗಳಾದ ಶಿವಪ್ಪ ಮೇಟಿ, ಜಗದೀಶ ನಾಯ್ಕ್, ಎಎಸ್‍ಐ ಅಶೋಕ ಕೋಟೆ, ಹೆಡ್ ಕಾನ್‍ಸ್ಟೆಬಲ್‍ಗಳಾದ ಡೇವಿಡ್, ಅಶೋಕ, ನವೀನ್, ಎಂ.ಎ ಹಕೀಮ್, ಕಾನ್‍ಸ್ಟೆಬಲ್‍ಗಳಾದ ಪ್ರವೀಣ, ಸಂತೋಷ, ಶಿವಕುಮಾರ ಮಹಾಜನ್, ಸಂಗನಬಸವ, ಎಂ.ಡಿ. ಆವೇಜ್, ಕಾನೂನು ಮಾಪನ ಇಲಾಖೆಯ ನಿರೀಕ್ಷಕ ಅಮರೇಶ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.


ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group